ಸುರರ ಮೊರೆಯನೆಲ್ಲ ಕೇಳಿ
ತರಳನೆ ವನದಿ ನರಹರಿ ರೂಪವ ತಾಳಿ ತೋರುತ ಧಾಳಿ
ದುರುಳನ ಒಡಲನು ನಖದೊಳು ಸೀಳಿ
ಕರುಳ ಮಾಲೆಯನು ಕೊರಳೊಳು ಧರಿಸಿದ
ಸಿರಿವರಗಾರತಿಯ ಬೆಳಗಿರೆ ಶೋಭಾನೆ 1
ದುರಿತಾದ್ರಿಗಳನು ತರಿವ
ಸ್ಮರಿಸುವ ದಾಸರ ಪೊರೆವ
ಕರುಣಾಮೃತವನು ಶಿರದೊಳು ಸುರಿವಾ
ಅರಿಪುಂಜವ ಕತ್ತರಿಸುತ ಮೆರೆವ
ಕರವ ಪ್ರಲ್ಹಾದನ ಶಿರದೊಳಗಿರಿಸಿದ
ಸರಸ ವರಗಾರತಿಯ ಬೆಳಗಿರೆ ಶೋಭಾನೆ 2
ಸುಲಲಿತ ಪದ್ಮೆಯ ವಕ್ಷ ಸ್ಥ
ಳದಲಿ ನೆಲೆಗೊಳಿಸಿದಗೆ
ಕಳವಳಿಸುವ ಭಕ್ತೌಘನ ಬೇಗದಿ
ಸಲಹುತಹೋಬಲ ನಿಲಯದಿ ಶೋಭಿಪ
ಚೆಲುವ ಶೇಷಗಿರಿ ವರನಿಗೆ ರತ್ನದ
ತಳಿಗೆಯೊಳಾರತಿಯ ಬೆಳಗಿರೆ ಶೋಭಾನೆ 3