ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ