ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿ ಸಂಕೀರ್ತನೆ ವಾಸುದೇವ ನೀನೊಬ್ಬನಲ್ಲದೇ ಪ ಮಾತೆ ಇದ್ದರು ದೃಢವ್ರತನಾದ ಧ್ರುವಗೆ ಶ್ರೀ- ಪತಿ ನೀನೆ ಗತಿಯಾದೆ ಆರಾದರಯ್ಯ ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ ಗತಿ ನೋಡಿ ನರಹರಿ ಗತಿ ಪ್ರದ ನೀನಾದೆ 1 ಭ್ರಾತರಾವಣನ ಸಹಜಾತ ವಿಭೀಷಣನ ನಿ- ರ್ಭೀತನ ಮಾಡಿ ಕಾಯ್ದವÀರಾರಯ್ಯ ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ ಸಂತೈಸಿದಾನಾಥ ರಕ್ಷಕ ಹರಿಯಲ್ಲವೇ 2 ಬಂಧುಗಳಿರೆ ಗಜರಾಜನ ನಕ್ರವು ಬಂದು ಬಾಧಿಸೆ ಬಂಧ ಬಂದು ಹರಿಸಿದರ್ಯಾರೋ ಇಂದು ಎಂದನಿಮಿತ್ತ ಬಂಧು ನೀ ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ3 ಸತಿಯಿಂದ ದಶರಥಪತಿಯು ಸುತನನಟ್ಟಿ ಗತಿಕಾಣದೆ ತಾನೇನಾದನೋ - ಸತತ ಕುರುಪತಿ ಅತಿಹಿತನಾದನೆ ಭೀಷ್ಮಗೆ ಪತಿತಪಾವನ ನೀ ಅಂತ್ಯಕಾಲಕ್ಕಾದೆ 4 ಸುತರು ರಕ್ಷಕರೇನೊ - ಶತಸೂನುಗಳಿಗೆ ಪಿತ ಧೃತರಾಷ್ಟ್ರಗೆ ಕೊನೆಗಾರಾದರಯ್ಯ ಇತರರ ಪಾಡೇನೊ ಶ್ರೀ ವೇಂಕಟೇಶನೆ ಗತಿ ಎಮಗೆ ಉರಗಾದ್ರಿವಾಸ ವಿಠಲನಲ್ಲವೆ 5
--------------
ಉರಗಾದ್ರಿವಾಸವಿಠಲದಾಸರು
ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು