ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಕ ನೀನೇ ಹರಿ ಮುರಾರಿ ಪ ಉದಕದಿ ನಕ್ರನು ಪದವೆಳೆಯಲು ನೊಂದು ಮದಗಜ ಹರಿಯನ್ನೆ ಮುದದಿ ಪೊರೆದ ಕಾರಣ 1 ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ ನಂಬಿದ ದ್ರೌಪದಿಗಂಬರವಿತ್ತ ಕಾರಣ 2 ಶ್ರೀದವಿಠ್ಠಲ ನಿನ್ನ ಪಾದಪೂಜಿಸಲರಿಯೆ ಆದರದಿ ಅಜಾಮಿಳನನ ಕಾಯ್ದ ಕಾರಣ 3
--------------
ಶ್ರೀದವಿಠಲರು
ಪಾದ ನಾ ನಂಬಿದ ಭಕುತರ ಇಂಬಾಗಿ ಪೊರೆದೆನೆಂತೆಂಬ ವಾರುತಿ ಕೇಳಿ ಪ ದೂರವಾದರೆ ತಾನು ನಾರಿಯ ಮೊರೆ ಕೇಳಿ ಚೀರಿ ಕರೆದಳೆಂದು ಶೀರಿಗಳನೆ ಇತ್ತು ಬೀರಿದನರಿಯಾ ಬಿಂಕವ ಬಿಟ್ಟು ಸೇರಿಕೊ ಹರಿಯ ದಾರಿ ಕಾಣದೆ ವನ ಸೇರಿದ ಕುವರನ್ನ ಸಾರೆಗರೆದು ಸೌಖ್ಯ ಪೂರೈಸಿದನೆಂದು 1 ಕಾಡಾನೆ ವ್ರಜದೊಳು ಕೂಡಿದ್ದ ಗಜರಾಜ ಗಾಡಾಹ ತಾಪದಿಂದ ಬಾಡಿ ನೀರಡಿಸಲು ಗೂಢ ಸರೋವರ ನೋಡಿ ನೀರನೆ ಪೊಕ್ಕು ಆಡಾಲು ಮದದಿ ನಕ್ರನು ಬಂದು ಪೀಡಿಸೆ ಭರದಿ ಮೂಢ ನಾನೆಲೊ ಕೃಷ್ಣ ಮಾಡೊ ರಕ್ಷಣೆಯನ್ನು ಪರಿ ನೋಡಿ 2 ಕಾಸು ಬಾಳದ ಸ್ತ್ರೀಯಳಿಗೆ ಆತನೆ ವಶವಾಗಿ ಹೇಸಿಕಿಲ್ಲದೆ ಅಲ್ಲಿ ತಾ ಸೂನುಗಳ ಪಡಿಯೆ ಸಹ ವಾಸರ ಕಳಿಯೆ ಕಾಲನು ಘೋರ ಪಾಶದಿ ಶಳಿಯೆ ಆ ಸಮಯದಿ ಕೊನೆ ಕೂಸನ್ನೆ ಕೂಗಲುವಾಸುದೇವವಿಠಲ ತಾ ಸಲಹಿದನೆಂದು 3
--------------
ವ್ಯಾಸತತ್ವಜ್ಞದಾಸರು
ವಿಕ್ರಮಾ - ಪಾಹಿ - ತ್ರಿವಿಕ್ರಮಾ ಪ ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ | ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆಅ.ಪ. ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ | ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ 1 ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ | ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ3 ಪಾದ ತೊಳೆದೂ | ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ 3 ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ | ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ 4 ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ | ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನವ ನೀಡೆನಗೇ 5 ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ | ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ 6 ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ7
--------------
ಗುರುಗೋವಿಂದವಿಠಲರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
--------------
ಪ್ರಸನ್ನವೆಂಕಟದಾಸರು