ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರುಡನೇರಿ ಬಂದ ಸಿರಿರಮಣನು ತಾನು ಪ ಗರುಡನೇರಿ ಬಂದ ಸಿರಿರಮಣನು ತನ್ನ ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ. ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ ತೆರವಿಲ್ಲದೆ ಕೂಗುತ ಚೀರುತಿರಲು ಸುರರು ಮೊದಲಾಗಿ ಸತಿಸುತ ಬಾಂಧವರು ಅರಿತು ಅರಿಯದಂತೆ ತ್ರಾನದಿಂದ್ದಾಗ 1 ಉತ್ತಾನಪಾದನು ಚಿತ್ತದಿ ಮರುಗದೆ ಮತ್ತೆ ಬÁಲನ ಕರೆದು ಮನ್ನಿಸದೆ ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2 ನೀಚ ರುಕ್ಮನು ತನ್ನನುಜಾತೆಯನಂದು ಮಾಚಿಸಿ ಶಿಶುಪಾಲಗೀವೆನೆಂದು ಯೋಚಿಸಿ ಮನದೊಳು ಹರಿಯ ದೂರುತಲಿರೆ ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3 ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ ಪಕ್ಷಿದೇರನ ಧ್ಯಾನದೊಳು ಕುಳಿತಿರಲು ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4 ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ ತೊರೆದು ರಣದೊಳು ಬಿದ್ದಿರಲು ಅರಿತು ಮನದೊಳು ಅನಿಲಜನೊಡಗೂಡಿ ಸಿರಿ ರಂಗೇಶವಿಠಲನು 5
--------------
ರಂಗೇಶವಿಠಲದಾಸರು
ನಾರಾಯಣಾ ನಮೋ ನಾರಾಯಣಾ ಪ ಘೋರ ಸಂಸಾರ ಭವದೂರ ಋಷಿಜನ ಮನೋ-ಹಾರ ಸಾಕಾರ ಸಿರಿಧರ ರೂಪನೆ ನಮೋಅ ನೆಗಳು ನುಂಗಿದ ಕುಮಾರಕನ ತಂ-ದಿತ್ತೆ ಮುನಿವರನಿಗೆ ನಾರಾಯಣಾಚಿತ್ತಜಾರಿ ಕೊಲ್ಲಲಂಬರೀಷ ಭೂಪೋತ್ತಮನ ಕಾಯ್ದೆ ಶ್ರೀನಾರಾಯಣಾ 1 ನಕ್ರಂಗೆ ಸಿಲ್ಕಿ ನಡುನೀರೊಳೊದರುವ ಗಜವಚಕ್ರದಿಂ ಕಾಯ್ದೆ ಶ್ರೀನಾರಾಯಣಾಶುಕ್ರನುಪದೇಶವನು ತವೆ ಜರಿದ ವೈಷ್ಣವರಅಕ್ಕರದಿ ಪಾಲಿಸಿದೆ ನಾರಾಯಣಾಶಕ್ರಜಿತುಪಿತ ಸಹೋದರಗೆ ಸ್ಥಿರರಾಜ್ಯವನುಉತ್ಕøಷ್ಟದಿಂ ಕೊಟ್ಟೆ ನಾರಾಯಣಾದುಷ್ಕøತದಿ ಸುತನ ಪೆಸರ್ಗೊಂಡವನ ಕಾಯ್ದೆಯೊ ತ್ರಿ-ವಿಕ್ರಮಾಂಕಿತ ವೀರ ನಾರಾಯಣಾ2 ದುರಿತ ಮೃಗ ವ್ಯಾಘ್ರನೆದುರಿತ ವನದಾವಶಿಖಿ ನಾರಾಯಣಾದುರಿತ ಜೀಮೂತಪವನ ದುರಿತಾಂಧಕಾರ ರವಿದುರಿತ ಲತಾಲವಿತ್ರ ನಾರಾಯಣಾದುರಿತ ಮರ್ದನ ಕಾಗಿನೆಲೆಯಾದಿಕೇಶವನೆದುರಿತ ಬಂಧವ ಪರಿದೆ ನಾರಾಯಣಾ 3
--------------
ಕನಕದಾಸ
ಬಿನ್ನಹಕೆ ಬಾಯಿಲ್ಲ ಭೂತನಾಥ ಪ ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ. ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ ಧೇನು ವತ್ಸನ ತೆರದಿ ಪಾಲಿಸೆನ್ನ ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1 ನೀಲಕಂಠನೆ ನಿನ್ನ ನೀಳಪಾದದ ಧೂಳಿ ಮೂರ್ಲೋಕದಘತೂಲಕಗ್ನಿ ಸತತ ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2 ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ ಉಣಿಸುವುವು ಮಹದುಃಖ ಎನ್ನ ಮೀರಿ ತುಂಬಿ ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3 ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ ವೃಷ್ಟೀಶನಲಿ ಎನ್ನ ಪೋಗಬಿಡದೊ ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4 ಶತಕೋಟಿ ಶ್ರುತಿಯಲಿ ಜಯೇಶವಿಠಲ ನತಬಂಧು ಎಂತೆಂದು ಸಾರುತಿಹುದು ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ ಪತಿತಪಾವನ ನನ್ನ ಹರಿಭಕ್ತನ ಮಾಡು5
--------------
ಜಯೇಶವಿಠಲ