ನಮಿಸುವೆನು ಭಕ್ತಿಯಲಿ ಚನ್ನಕೇಶವನೇ
ಮೂರ್ತಿ ಅಜಸುರಾರ್ಚಿತನೇ ಪ
ಕರಿರಾಜ ಖಲನಕ್ರ ಭಾಧೆಯಿಂ ಮರೆಹೊಗಲು
ಕರಿಯನ್ನು ಸಲಹಿ ನಕ್ರಕೆ ಮೋಕ್ಷವವಿತ್ತೇ
ಕರು ನೃಪತಿಯನುಜ ದ್ರೌಪದಿ ಮಾನ ಕಳೆಯುತಿರೆ
ಶರಣೆಂದ ಮಾನಿನಿಗೆ ಅಕ್ಷಯವನಿತ್ತೇ 1
ಮಂದರವ ಪೊತ್ತೆ ನೀ ಸುರರಿಗಮೃತವ ನಿತ್ತೆ
ಚಂದದಿಂದಜಮಿಳಗೆ ಅಂತ್ಯದಲಿ ವಲಿದೇ 2
ದಾಸಗೊಲಿಯುವಿಯಂತೆ ಭಕ್ತಜನರಿಗೆ ನಿತ್ಯ
ಭಾಸವಾಗುವಿಯಂತೆ ವಿಶ್ವರೂಪದಲ್ಲಿ