ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಕ್ತಂಚರವಿದಾರಿ ಭಕ್ತವತ್ಸಲಶೌರಿ ವ್ಯಕ್ತಾವ್ಯಕ್ತನಮೋ ವಿಶ್ವಕರ್ತ ಪಾಹಿ ತ್ರೈವಿಕ್ರಮ ಪರಮಪಾವನನಾಮ ಅಹಿತಸಂಕುಲಭೀಮ ಪೂರ್ಣಕಾಮ ಬಲಿಮಂದಿರದ್ವಾರ ತಲನಿಲಯ ಶ್ರೀಧರ ಜಲಧಿಸಮಗಂಭೀರ ವರದ ಧೀರ ಪಾಕಶಾಸನ ಪಕ್ಷ ನಾಕಾರಿ ಕುಲಶಿಕ್ಷ ಶ್ರೀಕಲಾಂಕಿತವಕ್ಷ ಶರಣ ರಕ್ಷ ಪಂಕಜಾಸನ ಪೂಜಿತಾಂಘ್ರಿಯುಗಳ ಪಂಕಜೇಕ್ಷಣ ಪಾಹಿ ಪದ್ಮನಾಭ
--------------
ನಂಜನಗೂಡು ತಿರುಮಲಾಂಬಾ
ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್
ರುದ್ರದೇವರು ಸಾಂಬ ಸದಾಶಿವ | ಸಾಂಬ ಶಿವ ಪ ಶಂಭೋಶಂಕರ | ಶಶಾಂಕಶೇಖರ | ಸಾಂಬ ಶಿವ ಅ. ಪ. ಗಂಗಾಧರ ವರ | ಅಂಗಜ ಮದಹರ | ಸಾಂಬ ಶಿವ || ಸಂಗರಹಿತನೇ ಭು| ಜಗಭೂಷ ವರ | ಸಾಂಬ ಶಿವ 1 ವ್ಯೋಮಕೇಶಭವ | ಭಕ್ತಪರಾಯಣ | ಸಾಂಬ ಶಿವ || ವಾಮದೇವ ಪ್ರಮ | ಥಾಧಿಪ ಶಂಕರ | ಸಾಂಬ ಶಿವ2 ಖಂಡ ಪರಶು ಮಾ | ರ್ತಾಂಡಸಮಪ್ರಭ | ಸಾಂಬ ಶಿವ || ದಂಡಧರ ಹರ | ಮೃತ್ಯುಂಜಯ ಭೂ | ಸಾಂಬ ಶಿವ3 ಜಟಾ ಮಕುಟ ಸುರ | ತಟನೀ ಧರ ವರ | ಸಾಂಬ ಶಿವ || ಸ್ಫಟಿಕಸನ್ನಿಭ | ಖಲತ್ರಿಪುರಾಂತಕ | ಮೃಡ ಸಾಂಬ ಶಿವ 4 ನಕ್ತಂಚರ ಹರ | ಶತ್ರುಭಯಂಕರ | ಸಾಂಬ ಶಿವ || ಭಕ್ತವಶಂಕರ | ಭಜಕಸುಖಂಕರ | ಸಾಂಬ ಶಿವ 5
--------------
ವೆಂಕಟ್‍ರಾವ್
ಲಾಲಿಮನುಕುಲತಿಲಕ ಮದನಾರಿವಿನುತ ಲಾಲಿಜನಕಜಾಮಾತ ಜಾನಕೀ ಸಮೇತ ಪ. ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ ಕೌಶಿಕಕ್ರತುಪಾಲ ಕರುಣಾಲವಾಲ ಪೋಷಿತಾಮರಜಾಲ ಬಾಲೇಂದು ನಿಭಫಾಲ ದಶಕಂಠಮುಖಕಾಲ ಜಾನಕೀಲೋಲ 1 ನಾಕೇಶನುತಚರಣ ನಕ್ತಂಚರಶಮನ ಶ್ರೀಕಾಮಿನೀಸದನ ರಾಜೀವನಯನ ಲೋಕನಾಯಕ ಸರ್ವ ಲೋಕಪಾಲಕ ದಿವ್ಯ ಸಾಕೇತಪುರನಿಲಯ ಸನಕಾದಿಗೇಯ 2 ಈಶಸನ್ನುತ ನಾಮ ನೀಲಮೇಘಶ್ಯಾಮ ಶೇಷಾದ್ರಿಶಿಖರಧಾಮ ಶ್ರೀರಾಮನಾಮ ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ ಕೋಸಲಾಧಿಪರಾಮ ಪರಿಪೂರ್ಣಕಾಮ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಪತಿಪರಾಕುಮಹೀಪತಿಪರಾಕುಪ.ಅಂಜನಗಿರಿತಟನಿಲಯಪರಾಕುಕಂಜನಯನ ಖಳಪ್ರಳಯಪರಾಕುಅಂಜನೆತನಯ ಸುಸೇವ್ಯಪರಾಕುಮಂಜುಳಗಾತ್ರ ಮುಕುಂದಪರಾಕು1ಕನಕೋದರನ ಪಡೆದನೆಪರಾಕುಸನಕಾಧಿಕಋಷಿಪ್ರಿಯಪರಾಕುಮಣಿಖಚಿತಾಭರಣತನುಪರಾಕುವಿನಿರ್ಜಿತ ಮಾಯಕೋಟಿಪರಾಕು2ಅನಸೂಯ ತನುರತ್ನಪರಾಕುಅನಪೇಕ್ಷಿತ ನಿರ್ಯತ್ನಪರಾಕುಮನುಕನ್ಯಾತ್ಮಜ ಕಪಿಲಪರಾಕುಚಿನ್ಮಯ ಚಿದ್ಗುಣವಿಪುಲಪರಾಕು3ಗುಹ್ಯಾತ್ಗುಹ್ಯ ಸ್ವರೂಪಪರಾಕುಅಸಹ್ಯ ನಿರ್ಲೇಪ ಸುರೇಶಪರಾಕುಸಿಂಹನರರೂಪ ಹರಿಯೆಪರಾಕುದಹ್ಯದನುಜಕುಲವೈರಿಪರಾಕು4ಭಕ್ತಾಭೀಷ್ಟ ಪ್ರದಾತಪರಾಕುಮುಕ್ತಾಮುಕ್ತರಿಂಸೇವ್ಯಪರಾಕುನಕ್ತಂಚರಕುಲನಾಶಪರಾಕುಭೋಕ್ತø ಪ್ರಸನ್ವೆಂಕಟೇಶಪರಾಕು5
--------------
ಪ್ರಸನ್ನವೆಂಕಟದಾಸರು