ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಸುವೆನಾಂ ಶ್ರೀ ಹಯವದನಾ ನಿನ್ನ ನಮಿಸುವೆನಾಂ ಪ. ಕಾಮಜನಕ ಸದಾಶಿವಸನ್ನುತ ಕಾಮಿತ ಶುಭಫಲದಾ ವರದಾ ಅ.ಪ. ಸಾರಸ ಸಖ ನಿಭ ವದನಾ ಸರಸಿಜನಯನಾ ಶ್ರೀನಾರೀಮಣಿ ಸದನ ಸಾರಸಭವನುತ ಚರಣ ಮುರಮದ ಹರಣ ಭೂರಿ ಪೂರಿತ ಲೋಚನ ಶರಣಾಗತ ಜನಾರ್ತಿ ಹರಣ ಚಾರುತರ ಸುಜ್ಞಾನದಾಯಕ ಧೀರ ಗುಣ ಗಂ ಭೀರ ಸುಮನೋಹರ ಶ್ರೀಹಯವದನಾ 1 ಕೌಸ್ತುಭ ಮಣಿಹಾರ ಪುಸ್ತಕಧÀರ ಶ್ರೀಕರ ಶ್ರೀ ವತ್ಸಾಂಕಿತ ವಕ್ಷ ಸುಂದರ ಪಕ್ಷಿಗಮನ ಪುರು ಷೋತ್ತಮ ನಮಪೂರ್ಣಕಾಮ ಭಕ್ತಿವರ್ಧನ ನಿಲಯಾಪ್ರಮೇಯ ಭಕ್ತಿ ಜ್ಞಾನ ಪ್ರದಾಯಕ ಮುಕ್ತಿ ಮಾರ್ಗ ಪ್ರದರ್ಶಕ ನಕ್ತÀಂ ಚರರಾಜತಮೋಮಿಹಿರ ಶ್ರೀಹಯಾಸ್ಯ 2 ಶ್ರೀಶ ಜನಾರ್ದನ ಛಿದ್ವಿಲಾಸ ಕಮನೀಯವೇಷ ಶ್ರೀ ಶೇಷಾದ್ರಿ ನಿವಾಸ ದಾಸಜನ ಹೃತ್ಪದ್ಮ ವಿ ಕವಿ ಮನೋಲ್ಲಾಸ ಭಾಸ್ಕರಕೋಟಿ ದ್ಯುತಿಭಾಸ ಹಯವದನಾ ನಿನ್ನ ನಮಿಸುವೆನಾ 3
--------------
ನಂಜನಗೂಡು ತಿರುಮಲಾಂಬಾ