ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಪಾವನ ಪಾದವೋ ಶ್ರೀರಾಮನ ದೆಂಥಾ ಚೆಲುವ ಪಾದವೋ ಪ ಸಂತತವು ಸಜ್ಜನರ ಪಾಲಿಸೆ ನಿಂತು ಧನುವನು ಧರಿಸಿ ಮೆರೆವ ಅ.ಪ ಮುನಿಪತಿ ನುಡಿ ಮನ್ನಿಸಿ ತಪೋವನಕ್ಕನುಜನೊಡನೆ ಗಮಿಸೀ ಮುನಿಯಾಜ್ಞೆಯಿಂ ಘೋರ ತಾಟಕಿಯನೆ ವಧಿಸಿ ವಿನಯದಿ ಯಜ್ಞರಕ್ಷಣೆ ಮಾಡಿ ಮುದವಿತ್ತ 1 ಘನಶಾಪವನು ಕಳೆಯೆ ಮುನಿಯಾಜ್ಞೆಯಿಂ ಘನಶಿಲೆಯ ಮೇಲಡಿಯಿಟ್ಟು ಘನತರ ಮಾನಿನಿಯನು ನಿರ್ಮಿಸಿ ಮೆರೆದ 2 ಗುಹನು ಗಂಗೆಯ ತಟದಿ ದೋಣಿಯ ತಂದು ಗಹನ ಶಂಕೆಯೊಳಂದು ಸಹಜಭಕ್ತಿಯಲಿ ನಿರ್ಮಲಗಂಗೆಯುದಕದಿಂ ದಹಹ ಪಾದರಜವನು ತೊಳೆಯಲೊಪ್ಪಿದ 3 ಹರಧನುವನು ಭಂಗಿಸಿ ಮಿಥಿಲೆಯಲಿ ವರ ವಿಕ್ರಮವ ಮೆರೆಸಿ ತರುಣಿ ಜಾನಕಿಯಂದು ಶಿರದಿ ನಿನ್ನಡಿಗಳಿ ಗೆರಗಲು ಘನ ಶಂಕೆಯಿಂ ಮಾಲೆಯರ್ಪಿಸಿದ 4 ಸಾಧುಗಳ ಪೊರೆಯೆ ಚರಣ ಪಾದುಕೆಗಳ ಶರಣ ಭರತಗಿತ್ತು ಬರಿಗಾಲಲಿ ನಡೆದ ರಘುರಾಮವಿಠಲನ5
--------------
ರಘುರಾಮವಿಠಲದಾಸರು
ಕೋಲ ಕೋಲೆನ್ನ ಕೋಲಕೋಲ ಕೋಲೆನ್ನ ಕೋಲಕೋಲಾಹಲವ ಮಾಡಿ ಬಾಲೆಯರು ಪಾರ್ಥಗೆ ಕೋಲ ಪ ಕಟ್ಟಿ ಜಾನ್ಹವಿಯಲ್ಲಿ ಬಿಟ್ಟು ಬದುಕಲು ಭೀಮ ಥಟ್ಟನೆ ಮಗ್ಗಲ ಹಚ್ಚಿ ಬಿಟ್ಟಿತು ಸರ್ಪಪ್ರಾಣ1 ಕುಸುಮದಂಥವಳಿಗೆ ಸವಳ ಪುರುಷನು ವಿಷದ ಲಡ್ಡಿಗೆ ತಿಂದು ಭಸ್ಮ ಮಾಡಿದ ಭೀಮ2 ಲಜ್ಜೆ ಬಿಟ್ಟು ಅರ್ಜುನ ಖೋಜಾನೆಂದೆನಿಸಿಕೊಂಡಿವಜ್ರ್ಯವಾಯಿತು ಮಾನ ನಿರ್ಜರೋತ್ತಮ ನಕ್ಕ3 ಹೆಣ್ಣಲ್ಲ ಗಂಡಲ್ಲ ಬಣ್ಣ ವಿಷ್ಟ್ಯಾಕೊ ನಿನಗೆ ಸಣ್ಣದಿ ನೆನೆದು ಕೀರ್ತಿ ಅಣ್ಣ ಬಲರಾಮನಕ್ಕನು 4 ಶೂರತನ ವೆಲ್ಲ ನೀಗಿ ಸೀರೆಯನುಟ್ಟುಕೊಂಡಿಬಾರದೆ ನಾಚಿ ನಿಂತೆಶೌರಿ ರಾಮೇಶನಕ್ಕನು ಕೋಲ5
--------------
ಗಲಗಲಿಅವ್ವನವರು
ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಆ ಬಾಲೆ ಭಾವೆಯ ಈಗ ಸೋಲಿಸಿದೆವೆನ್ನಿ ಪ. ಕೊಟ್ಟುತಾ ಮುಯ್ಯ ರುಕ್ಮಿಣಿಗೆ ಇಟ್ಟರು ಆಣಿಯಥಟ್ಟನೆ ತಿರುಗಿಸದಿದ್ದರೆ ಕೃಷ್ಣ ನಿಮ್ಮಯ ಅ.ಪ ತಂದ ಮುಯ್ಯವ ಹಿಂದಕೆ ತಿರುಗಿಸದಿದ್ದರೆಇಂದಿರಾಪತಿಭಾಮೆಗೆ ತಂದೆಯಾಗುವ1 ಬಾಲಿಯರು ಆಣೆಯ ಮೇಲೆ ಮೇಲೆ ಇಟ್ಟರೆಆಲಿಸಿ ಕೇಳುತ ರೋಹಿಣಿ ಬಾಲ ನಕ್ಕನು2 ಇಂಥ ಆಣೆಗೆ ಭಾಮೆ ಇನ್ನೆಂತು ಮಾಡುವಿಪಂಥಗಾರಳೆ ಬಂದು ಚಿಂತಿಸೆಂದನು 3 ಭದ್ರೆ ದ್ರೌಪತಿ ತಿದ್ದಿ ಆಣೆ ನಿಟ್ಟರೆಮುದ್ದು ರಾಮೇಶ ಇದಕೆ ಬಿದ್ದು ನಕ್ಕನು 4
--------------
ಗಲಗಲಿಅವ್ವನವರು
ತಾಳುವಿಕೆಗಿಂತ ತಪವು ಇಲ್ಲ ಪ. ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ. ದುಷ್ಟಮನುಜರು ಪೇಳ್ವ ನಿಷ್ಠುರದನುಡಿ ತಾಳುಕಷ್ಟಬಂದರೆ ತಾಳು ಕಂಗೆಡÀದೆ ತಾಳುನೆಟ್ಟಸಸಿ ಫಲಬರುವತನಕ ಶಾಂತಿಯ ತಾಳುಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು1 ಕುಹಕ ಕುಮಂತ್ರವನು ತಾಳುಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳುಹಲಧರಾನುಜನನ್ನು ಹೃದಯದಲಿ ತಾಳು 2 ನಕ್ಕನುಡಿವರ ಮುಂದೆ ಮುಕ್ಕರಿಸದೆ ತಾಳುಅಕ್ಕಸವ ಮಾಡುವರ ಅಕ್ಕರದಿ ತಾಳುಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳುಪಕ್ಷೀಶ ಹಯವದನ ಶರಣೆಂದು ಬಾಳು 3
--------------
ವಾದಿರಾಜ
ನೋಡಿದೆನೋ ಕೊಂಡಾಡಿದೆನೋ ಪ ಜೋಡಿಸಿ ಕರಗಳ ಬೇಡಿದೆ ಕೃಷ್ಣನ ಅ.ಪ ಮೂಡಲು ಸೂರ್ಯನು ಹಿಮದ ಕಣಗಳಂತೆ ಓಡಿದು ಮೋಹವು ಕೂಡಿತು ಧೈರ್ಯವು ನೋಡಲು ಕೃಷ್ಣನ ಮಂಗಳ ಮೂರ್ತಿಯ ಈಡೇರಿತು ಮನದಾಸೆಯು ಕೃಷ್ಣನ 1 ಕಳೆಯಿತು ದುರಿತವು ಬೆಳೆಯಿತು ಸುಕೃತವು ಸೆಳೆದನು ಮನವನು ತನ್ನಡಿಗಳಲಿ ಬಳಿಯಲಿ ರುಕ್ಮಿಣೀ ಭಾಮೆಯರೊಡಗೂಡಿ ಕೊಳಲೂದುವ ಮಂಗಳಕರ ದೃಶ್ಯವ 2 ಉಕ್ಕಿತು ಹರುಷವು ಪರಮ ದರುಶನದಿ ನಕ್ಕನು ನೋಡುತ ಕರುಣಾಪಾಂಗದಿ ಭಕ್ತ ಪ್ರಸನ್ನನು ತಕ್ಕವನೆಂದೆನ್ನ ಅಕ್ಕರೆಯಿಂದಲಿ ಕರೆಯುವಂತಿರುವುದ 3
--------------
ವಿದ್ಯಾಪ್ರಸನ್ನತೀರ್ಥರು