ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನೆಗೆ ರಂಗಾ ಕರುಣಾ ಪಾಂಗ ನರಸಿಂಗ ಪ. ಬಾರೋ ನಿನ ಪರಿವಾರ ಸಹಿತಲಿ ವಾರೆರೊಡಗೂಡಿ ನೀರಜಾಕ್ಷನೆ ಭವ ಕರುಣಾಂಬುದೆ ಅ.ಪ. ಪಿಡಿದು ಖಡ್ಗವ ನಿನ್ನ ವಡೆಯನ ತೋರೆಂದು ಘುಡುಘುಡಿಸಲು ಕಂದ ವಡನೆ ಕೂಗೆ ವಡಲ ಬಗೆದು ಕರುಳ ಮಾಲೆಯ ಪಿಡಿದು ಧರಿಸುತ ವಡನೆ ಭಕ್ತನ ಬಿಡದೆ ಸಲಹಿದ ಕಡು ದಯಾನಿಧೆ 1 ಪಿತನ ತೊಡೆಯಿಂದ ಭೂಪತಿಸತಿ ನೂಕಲು ಅತಿಭಯದಲಿ ಧ್ರುವ ಖತಿಗೊಳ್ಳುತ ಪತಿತ ಪಾವನ ನಿನ್ನ ಕಾಣಲು ಮುನಿ ಪತಿಯು ಪೇಳಿದ ಪಥದಿ ಪುಡುಕೆ ಅತಿಶಯದಿ ಬಂದ್ಹಿತವ ಕೋರಿದ ಗುಣಾನ್ವಿತ ದಯಾಂಬುಧೆ2 ಕರಿ ಮೊರೆಯಿಡೆ ಸಿರಿಗ್ಹೇಳದಲೆ ಬಂದು ಗರುಡ ಗಮನನಾಗಿ ತ್ವರಿತದಿಂದ ಶರಣಪಾಲಕ ನಿನ್ನ ಚಕ್ರದಿ ತರಿದು ನಕ್ರ ನಕರಿಯ ಪೊರೆದ ತೆರದೊಳೆನ್ನ ವಗುಣಗಳೆಣಿಸದೆ ಹರುಷದಲಿ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಮೂಢನು ನಾನಯ್ಯ ನಿನ್ನನುಬೇಡಲರಿಯೆನಯ್ಯಪ. ದಯಾಸಿಂಧು ಹರಿಯೆ ದಯದಲಿ ನೋಡು ವಜ್ರದಖಣಿಯೆಭಯಪಡುವೆನು ಈ ಭವಸಾಗರದಿ ಅ-ಭಯವ ಪಾಲಿಸೊ ಹಯವದನನೆ ಹರಿ 1 ದಿಕ್ಕುಯಾರು ಇದಕೆ ಪಾಪವು ಉಕ್ಕಿತು ದಿನದಿನಕೆಸೊಕ್ಕಿ ಸಿಲುಕಿದೆನು ಯಮನ ಪಾಶಕೆಚಿಕ್ಕವನನು ನೋಡಕ್ಕರದಲಿ ಹರಿ 2 ಸಿರಿಹಯವದನನ್ನ ಶರಣರ ಶಿರೋಮಣಿರನ್ನಗುರುದೊರೆಯೆ ನಂಬಿದೆ ನಿನ್ನಕರಿಯ ರಕ್ಷಕನೆಂದು ಕರೆವೆನೊ ಮುನ್ನ3
--------------
ವಾದಿರಾಜ