ಭದ್ರ ಮೂಜಗದಂತರ್ಯಾಮಿ ಪ
ಸಾರ ಸಾಕ್ಷಿಯರೆಲ್ಲಾ
ಮುದ್ದು ಸೀತೆ ಸಹಿತ ಹುವ್ವಿನ ಮಂಚದಿ ಮಲಗಿ ಅ.ಪ
ಪೋಗಿ ನಿಮ್ಮಯ ಸದನಗಳಿಗೇ | ಉದಯ
ವಾಗೋದು ಬನ್ನಿ ಸನ್ನಿಧಿಗೇ
ಯೋಗೀ ಜಾಣರು ಪರಮ ಭಾಗವತೋತ್ತಮರು
ಸಾಗಿ ಪೋದರು ನಿಜಾಶ್ರಮಗಳಿಗೆಲ್ಲರು 1
ತುಂಬುರಾ ನಾರದಾದಿಗಳು | ವೀಣೆ
ತಂಬೂರಿ ದಿವ್ಯನಾದದೊಳು
ಗಂಭೀರಾ ಸ್ವರದಿಂದಾಗಾಯನಗಳ ಮಾಡೆ
ಸಂಭ್ರಮದಲಿ ಇತರ ಹಂಬಲ ಮರೆತೀಗ 2
ಹದಿನಾಲ್ಕು ಲೋಕಾವನಾಳಿ | ತಾದ-
ಣಿದೆನೆಂದು ಜನರಿಗೆ ಪೇಳಿ
ಸದಮಲಾತ್ಮಕ ಶ್ರೀ ಗುರುರಾಮ ವಿಠಲ ನಂ-ಬಿದವರಿಗಭಯವ ಕೊಡುವ ಇಚ್ಛೆಯಿಂದ 3