ಒಟ್ಟು 6 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದೆ ನಾ ಹರಿಯೆನ್ನದೆ ಪ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1 ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2 ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3 ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4 ಸತಿ ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ 5
--------------
ಕನಕದಾಸ
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು
ಗೋವಿಂದ ನಮೋ ಗೋವಿಂದ ನಮೋ ಗೋವಿಂದ - ನಾರಾಯಣ |ಗೋವರ್ಧನ ಗಿರಿಯೆತ್ತಿದ ಗೋವಿಂದ - ನಮ್ಮ ರಕ್ಷಿಸೊ ಪ.ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |ಕರ್ತು ಯಮನವರೆಳೆದು ಒಯ್ಯಲು ಅರ್ಥ- ಪುತ್ರರು ಕಾಯ್ವರೆ 1ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ 2ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |ಬಿಡದೆ ಯಮನವರೆಳದು ಒಯ್ಯಲು ಎಡವಿಬಿದ್ದಿತು ನಾಲಗೆ 3ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |ಪ್ರಾಣ ಹೋಗಲು ಮುಟ್ಟಲಂಜುವಳುಜಾಣೆ ಕರೆದರೆ ಬಾರಳು 4ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು 5ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು 6ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ |ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ 7
--------------
ಪುರಂದರದಾಸರು
ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ ಪ.ಮತ್ತೆ ಮುರಾರಿ ಶ್ರೀ ಕೃಷ್ಣನ ನೆನೆದರೆ |ಮುಕ್ತಿಸಾಧನವಣ್ಣ ದೇಹ ಅಪಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ |ನಾನಾ ಪರಿಯಲಿ ಮೋಹಮಾಡದಿರುಹೀನಮೂತ್ರದ ಕುಳಿಯಲ್ಲಿಜಾನಕಿರಮಣನ ನಾಮವ ನೆನೆದರೆಜಾಣನಾಗುವೆಯಲ್ಲೋ - ಪ್ರಾಣಿ 1ತಂದೆ-ತಾಯಿ ಅಣ್ಣ-ತಮ್ಮಂದಿರು ಮಕ್ಕಳು ಹರಿದು ತಿಂಬರೆಲ್ಲ |ಹೊಂದಿ ಹೊರೆಯುವಾ ನಂಟರಿಷ್ಟರುನಿಂದೆ ಮಾಡುವರೆಲ್ಲ ||ಮುಂದೆ ಯಮನ ದೂತರು ಎಳೆದೊಯ್ಯಲುಹಿಂದೆ ಬರುವರಿಲ್ಲೋ - ಪ್ರಾಣಿ 2ಕತ್ತಲೆ ಬೆಳುದಿಂಗಳು ಸಂಸಾರವು ಕಟ್ಟು ಧರ್ಮದ ಮೊಟ್ಟಿ |ಹೊತ್ತನರಿತು ಹರಿದಾಸರ ಸೇರೆಲೊ ಪೇಳ್ವರು ತತ್ತ್ವವ ಗಟ್ಟಿ |ಚಿತ್ತಜನಯ್ಯ ಪುರಂದರವಿಠಲನಹೊಂದೋ ನೀ ಸುಖಬುಟ್ಟಿ - ಪ್ರಾಣಿ 3
--------------
ಪುರಂದರದಾಸರು
ಬರಬೇಕೋ ರಂಗಯ್ಯ ನೀ - ಬರಬೇಕೊ ಪಬರಬೇಕೊ ಬಂದು ಒದಗಬೇಕೊ ಮಮಗುರು |ನರಹರಿ ನಾರಾಯಣ ನೀನಾ ಸಮಯಕೆ ಅ.ಪಕಂಠಕೆ ಪ್ರಾಣ ಬಂದಾಗ - ಎನ್ನ |ನಂಟರಿಷ್ಟರು ಬಂದಳುವಾಗ ||ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |ಗಂಟಲೌಕುವಾಗ ವೈಕುಂಠನಾರಾಯಣ 1ನಾರಿಯು ಪುತ್ರ ಮಿತ್ರರು -ಬಂಧುಗಳು |ಆರೆನ್ನ ಸಂಗಡ ಬಾರರು ||ಆರಿಗಾರಿಲ್ಲ ಯಮನಾರುಭಟಕೆ ಅಸು-|ರಾರಿ ಮೈಮರೆದಾಗ ನೀರೇರುಹನಾಭ 2ಕರಿಪ್ರಹಲ್ಲಾದಾದಿ ಭಕ್ತರ -ಪತಿ|ಕರಿಸಲು ಒದಗಿದೆ ಶ್ರೀಧರ ||ನೆರೆಹೀನನೆನ್ನ ಉದ್ಧರಿಸಿಅಚ್ಯುತನಿನ್ನ |ಚರಣದೊಳಿಂಬಿಡೊ ಪುರಂದರವಿಠಲ 3
--------------
ಪುರಂದರದಾಸರು