ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ತಾತ್ತ್ವಿಕ ಕೃತಿಗಳು ಪಾರಾಯಣ ಮಾಡಿರೋ ಭವ ಪಾರಾವಾರದೊಳು ತಾರ ಕವಿದು ನೋಡಿರೋ ಪ ನೀರ ಬೊಬ್ಬುಳಿಕೆಯು ತೋರುವ ರೀತಿ ಶ ರೀರ ನಚ್ಚಿರಬೇಡಿರೋ ಧಾರಣಿಯಲಿ ಪೇಳಿರೋ 1 ಸಾಹಸ ಪಡಬೇಡಿರೋ ಬಾಹವೆಂದಿರ ಬೇಡಿರೋ 2 ನೇಹದಿ ನಾರಿಯೊಳು ದೇಹಿ ಸಂಸಾರದೊಳು 3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತ ದಾರಿಯೆಲ್ಲಿಗೆ ಪೇಳಿರೋ 4 ಮಿಂಚಬಾರದು ತನ್ನ ಮಡದಿಯ ಬಾಲರ ಕಂಚು ಕನ್ನಡಿ ಭಾರದೀ ಸಂಚಿತ ದ್ರವ್ಯದಿ ಕೊಂಚವು ಬಾರುದು ಉಗಿ ಸಂಚಿಗೆ ದೇಹವಿದ 5 ಒಲಿದು ಕೊಂಡಾಡುವರು 6 ಅರ್ಥವಿದ್ದವನ ಸಮರ್ಥನೀತನ ಜನ್ಮ ಸಾರ್ಥಕವೆಂಬುವರು ಆರ್ಥವ ಕಳಕೊಂಡು ಸಾರ್ಥನಾಗಲು ಜನ್ಮಸು ವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಿಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು8 ಮರಣ ಪೊಂದುವರು ಕೊರಳನು ಕೊಯ್ಸುವರೋ 9 ಬಂಧುಗಳನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರು ನಿಜ ದಂದುಗಕ್ಕೊಳಗಹರು 10 ಗಂಟು ಕಟ್ಟಿರೆ ಮನದಿ ಗಂಟಲ ಬಿಗಿವಾಗ ನಂಟರಿಲ್ಲವು ಜಗದಿ 11 ತಾಪದಿ ನೆನೆಯುತಿರೆ ಭೂಪನು ನಮ್ಮ ದೊರೆ12
--------------
ವೆಂಕಟವರದಾರ್ಯರು
ನಾರಿಯರಲಿ ಮಾದರಿಯೆಂದೆನಿಸಿರಮ್ಮ ಮೂರುಕುಲಕೆ ಕೀರುತಿಯನು ತನ್ನಿರಮ್ಮ ಸೇರಿದ ಪತಿಮಂದಿರವನುದ್ಧರಿಸಿರಮ್ಮ ಬೇರೆ ಜನಕೆ ಸೋದರಿಯೆಂದರಿಯಿರಮ್ಮ ಅಬಲೆಯರಿರಬಹುದು ದೇಹ ಶಕುತಿಯಲಿ ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ ಶುಭಪರಂಪರೆಗಳ ಪತಿಗೆ ಕೋರಿರಮ್ಮ ಲಭಿಸುವುದತಿಸುಲಭದಿ ಪರಲೋಕವಮ್ಮ ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ ಗಹನದ ಸಂಸಾರಪಥವ ಜರಿಯಬೇಡಿರಿ 10 ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ ತಿದ್ದಿರಮ್ಮ ವಿನಯದಿಂದ ಪತಿಯ ದೋಷವÀ ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ ಹೂವುಗಳನು ಕಸಕಲದರ ಗಂಧವಿರುವುದೆ ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ 20 ಅನುಗಾಲವು ಊರಿಗೆ ಉಪಕಾರಿಯಾದರು ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ ಅಡಿಗಡಿಗದನಾಡಬೇಡಿ ಒಡೆಯನೆದುರಲಿ ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು 30 ಮರುಕದಿ ಸಂತೈಸಲವನು ಮನವು ಕರಗದೆ ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ ಕಲಿಯಿರಿ ಸಂಸಾರದಲಿ ನೆಪ್ಪು ನೇರವ ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ ಉಳಿಸಿ ಬಳಸಿರಮ್ಮ ತಂದ ಧಾನ್ಯವ ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು ಕಾಲ ಕಳೆಯಬೇಡಿ ಕೆಲಸವಿದ್ದರೆ ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ 40 ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ ಅಷ್ಟವಕ್ರದುಡುಪುಗಳನು ಧರಿಸಬೇಡಿರಿ ರಟ್ಟು ಮಾಡಬೇಡಿರಮ್ಮ ರೂಪು ರಚನೆಯ ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ 50 ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ ಬಣ್ಣವಿಲ್ಲದಿರುವುದು ಬಂಗಾರವಲ್ಲವು ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು ಉಣಲು ತಾ ದೊರೆಯದಿರಲು ಸಂಪತ್ತಲ್ಲವು ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು ದುಂದುಗಾರಿಕೆಯನು ಕಲಿಯಬೇಡಿರೆಂದಿಗು ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ ಬಂದ ಮಾತುಗಳನು ಬಾಯಿತಡೆದು ಆಡಿರಿ ನಂದಗೋಕುಲವನೆ ಮಾಡಿ ಗೃಹವ ನಗುತಲಿ 60 ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ ಮನವತಿ ಚಂಚಲತೆಯನ್ನು ಹೊಂದಬಿಡದಿರಿ ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ 70 ಒಡಕಿನ ಬಾಯವಳು ಎಂದು ಎನಿಸಬೇಡಿರಿ ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ ಇಣಕಿ ನೋಡಬೇಡಿ ಪರರ ನಡೆನುಡಿಗಳನು ಸಾರಥಿಯೆಂದೆನಿಸಿರಿ ಸಂಸಾರ ರಥದಲಿ ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ ನಾರಿಯರಲಿ ಮಾದರಿಯನು ಪಡೆದು ತೋರಿದ ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ 80 ದೇಶಸೇವೆಯೆಂದು ರಾಜಕೀಯ ಬೇಡಿರಿ ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ ಕಾಯ ಕ್ಲೇಶ ಬೇಡಿರಿ ಭಾಷಣ ಬಹಿರಂಗದಲ್ಲಿ ಭೂಷಣಲ್ಲವು ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು ಸ್ತ್ರೀ ಸಮೂಹದಿಂದ ನಾಶವಾಗದುಳಿದವು 90 ಆ ಸುಧಾಮ ಸತಿಯರೆ ಈ ದೇಶದ ಸೊಬಗು ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ ನುಡಿಯಬೇಡಿರಮ್ಮ ಪರರ ವಂಚನೆನುಡಿಯ ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ ಭಿನ್ನ ಭಿನ್ನ ದೇಶಕಾಲದನುಭವಗಳಿದು ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ 100
--------------
ವಿದ್ಯಾಪ್ರಸನ್ನತೀರ್ಥರು
ಪಾರಾಯಣ ಮಾಡಿರೋ ಭವ ಪಾರಾವಾರದೊಳುತ್ತಾರಕವಿದು ನೋಡಿರೋಪ ಶರೀರನೆಚ್ಚಿರಬೇಡಿರೋ ಸಾರುವ ಮೃತ್ಯುವ ದಾರಿಗೆ ಗೋಚರ ಧಾರಿಣಿಯಲಿ ಪೇಳಿರೋ1 ಸಾಹಸ ಪಡಬೆಡಿರೋ ದೇಹಗೇಹಂಗಳನೂಹಿಸಿ ಸಂಗಡ ಬಾಹವೆಂದಿರ ಬೇಡಿರೊ2 ದೇಹರಕ್ಷಣೆಗೆಂದು ಗೇಹವನಿರ್ಮಿಸಿ ನೇಹದಿ ನಾರಿಯೊಳು ಗೇಹಿನಿಯೆಂದತಿ ಮೋಹದಿ ಕೆಡುವನು ದೇಹಿಸಂಸಾರದೊಳು3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತದಾರಿಯೆಲ್ಲಿಗೆ ಪೇಳಿರೋ4 ಬಾರಳು ಕಂಚುಕನ್ನಡಿಬಾರದೀ ಸಂಚಿತ ದ್ರವ್ಯದಿ ಕೊಂಚವು ಬಾರದು ವಿಸಂಚಿಗೆ ದೇಹವಿದು5 ಹಲವು ಸಾಹಸದಿಂದ ಘಳಿಸಿದರ್ಥಗಳೆಲ್ಲ ಬಳಸಿನ ಬಾಂಧವರು ಒಲಿದುಕೊಂಡಾಡುವರು6 ಅರ್ಥವಿದ್ದವನ ಸಮರ್ಥನೀತನ ಜನ್ಮಸಾರ್ಥಕವೆಂಬುವರು ಜನ್ಮವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು 8 ಮರಣವ ಪೊಂದುವರು ಮರಳು ಜಗಳಕೆ ತರಳರು ಚಾಚುತೆ ಕೊರಳನು ಕೊಯ್ಯುವರೋ 9 ಬಂಧುಗಳನ್ನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರುನಿಜ ದಂದುಗಕ್ಕೊಳಗಹರು10 ನಂಟರು ನಮಗಿವರುಂಟೆಂದು ಮೋಹದ ಗಂಟುಕಟ್ಟಿರೆ ಮನದಿ ಕಂಟಕ ಯಮಬಂದು ಗಂಟಲಬಿಗಿವಾಗ ನಂಟರಿಲ್ಲವು ಜಗದಿ11 ಅಪತ್ತುಬಂದಾಗ ಪಾಪಿಯು ಮನದನು ತಾಪದಿ ನೆನೆಯುತಿರೆ ಕಾಪಾಡುವನಾಗ ಶ್ರೀಪತಿ ಪುಲಿಗಿರಿ ಭೂಪನು ನಮ್ಮದೊರೆ12 ನೊಂದ ಗಜೇಂದ್ರನ ಕಂದ ಪ್ರಹ್ಲಾದನ ಬಂದವಿಭೀಷಣನ ಚಂದಿರಮುಖಿ ನೃಪನಂದನ ಧ್ರುವರನು ಚಂದದಿ ಸಲಹಿದನ 13 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ಭಜಕರದಾತನ ತ್ರಿಜಗಕ್ಕೆ ನಾಥನ ವಿಜಯನ ರಥಸೂತನ14 ಅಂಗಜಜನಕನ ಮಂಗಳ ಮಹಿಮನ ಗಂಗೆಯ ಪಡೆದವನ ರಂಗನ ಸುಗುಣ ತರಂಗನ ಶಂಖರಥಾಂಗವ ಪಿಡಿದಿಹಿನ15 ಖ್ಯಾತ ಪಾದಾಂಬುಜನ ವಾತನ ಮಗನೊಳು ಪ್ರೀತಿಯ ಬೆಳಸಿದ ಸೇತು ವಿಧಾತನ16 ರಾಮನ ಜಗದಭಿ ರಾಮನ ದೈತ್ಯವಿರಾಮನ ಭಜಕಜನಾ ರಾಮನ ದಶರಥರಾಮನ ಸೀತಾರಾಮನ ಗುಣಧಾಮನ17 ಪಂಕಜನೇತ್ರನ ಪರಮ ಪವಿತ್ರನ ಶಂಕರನುತಿಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟ ಹರನಾಮನ18 ವರದ ವಿಠಲ ದೇವನ ಪೊರೆಯುವದಾನರನ 19
--------------
ಸರಗೂರು ವೆಂಕಟವರದಾರ್ಯರು