ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ | ವಿಗಡ ಮುನಿಯ ಮಾತಾ ಲೆಕ್ಕಿಸಿ ಮದುವೆಯ ಮಾಡಿಕೊಡುವನಂತೆ 1 ತಲೆಯೆಲ್ಲಾಜಡೆಯಂತೆ | ಅದರೋಳಗ ಜಲವಂತೆ | ತಿಲಕ ಪಣೆಗೆ ಬಾಲಚಂದ್ರನಂತೆ | ಹೊಳೆವ ಕಿಡಿಗಣ್ಣಂತೆ | ನಂಜುಗೊರಳನಂತೆ | ಸಲೆರುಂಡ ಮಾಲೆಯಾ | ಸರವ ಹಾಕಿಹನಂತೆ | 2 ಉರಗಾಭೂಷಣನಂತೆ | ಭಸ್ಮಲೇಪನನಂತೆ | ಕರಿಯ ಚರ್ಮಾರಂಬರದುಡಿಗೆಯಂತೆ | ನಿರುತ ಡಮರು ಬಾರಿಸುವ ಜೋಗಿಯಂತೆ 3 ಅಡವಿ ಗಿರಿಗಳಲಿ ಇಪ್ಪನಂತೆ | ಒಡನೆ ಪುಲಿದೊಗಲದ ಹಾಸಿಗೆ ಇಹುದಂತೆ | ನುಡಿಗೊಮ್ಮೆ ರಾಮ ರಾಮಾಯಂಬ ಸ್ಮರಣೆಯಂತೆ 4 ಆರೊ ಇಲ್ಲದ ಪರದೇಶಿಯಂತೆ | ಭವ |ತಾರಕ ಶಿವನೆಂದು ಮೊರೆಯ ಹೊಗಬೇಕಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು