ಭಕ್ತಿ ಭಾವಗಳು ಸ್ವಲ್ಪಮಾತ್ರವಿಲ್ಲವಾಯಿತು ಪ
ಗುರುಗಳಿವರು ಹಿರಿಯರಿವರು ಶರಣರೆಂದು
ತಾರತಮ್ಯದಿ ರವನರಿತು ಅರಿಯದಂತೆ ಸಿರಿಯ ಮದದಲಿ
ಶುನಕ ನಂಕೆನೋಡಿ
ಮರಳುತಿಹರು ಏನನೆಂಬೆ ನೆಲವ ನೋಡದೆ 1
ನಿಟ್ಟಿಸದೆ ಸಾದುಗಳನು ಪ್ರಾಯ ಮದದ ಹಮ್ಮಿನಿಂದ
ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ
ಅಷ್ಟದಿಕ್ಕು ತಮ್ಮದೆಂದು ಸರ್ವಗಿರಿಯನೇರಿ ತಾವೆ
ಶ್ರೇಷ್ಠರೆಂದು ತಮ್ಮ ತಾವೆ ಕೊಂದು ಕೊಂಬರೋ 2
ನೂತನದಾಭರಣ ವಸ್ತ್ರ ಜಾತಿಯನ್ನು ಉಟ್ಟು ಕೊಟ್ಟು
ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ
ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆಲಕ್ಷ್ಮೀ
ನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ 3