ಒಟ್ಟು 42 ಕಡೆಗಳಲ್ಲಿ , 26 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಸತ್ಯವಂತನೊ ನೀನು ಸರಸಿಜಾಕ್ಷ ಸಿರಿ ನಿತ್ಯಾವಿಯೋಗ ಪ. ಶ್ರೀನಿವಾಸನೆ ಕೃಷ್ಣ ಭಾನು ಪ್ರಕಾಶ ಹರಿ ಏನೆಂಬೆ ನಿನ್ನ ಪ್ರಭಾವವನ್ನು ನಾನಾ ವಿಧದಿಂದ ಭಕ್ತರ ಕಾಯ್ವ ನರಹರಿಯೆ ಮಾನವಂತರ ಕಾಯ್ವ ದಾನವಾಂತಕನೆ 1 ಕೃಷ್ಣಮೂರುತಿ ನಿನ್ನ ದರುಶನದ ಕಾರಣದಿ ಕ್ಲೇಶ ತಂದೊಡ್ಡಿ ಇಷ್ಟು ಪರಿಯಲಿ ಎನ್ನ ಮನವ ಶೋಧಿಸಿ ನೋಡಿ ಕಷ್ಟ ಕಳೆದೆಯೊ ಈಗ ಕರುಣಾಳು ದೇವ 2 ಗುರುಗಳಿಗೆ ಬಂದಂಥ ರೋಗವನೆ ಪರಿಹರಿಸಿ ಕರುಣಿಸಿದೆ ಮನಕೆ ಬಹು ಆನಂದವನ್ನು ಪರತರನೆ ಇದರಂತೆ ಭವರೋಗವನೆ ಹರಿಸಿ ನಿರುತ ನಿನ್ನಯ ಪಾದಸ್ಥಾನ ನೀಡೆನಗೆ 3 ಸುರಪನಿಗೆ ಬಂದಂಥ ಪರಿಪರಿಯ ಕಷ್ಟದಿಂ ಹರಿಯೆ ನಿನ್ನಾಜ್ಞೆಯಿಂದೆಲ್ಲರೂ ಕೂಡಿ ಶರಧಿ ಮಥಿಸುತಲಿರಲು ಕರುಣೆಯಿಂದಲಿ ಸುಧೆಯ ಕಲಶ ತಂದವನೆ4 ವಂಚನೆಯ ಪೆಣ್ಣಾಗಿ ವಂಚಿಸಿ ದೈತ್ಯರನು ಅಮೃತ ಸುರರಿಗುಣಿಸಿ ಪಂಚಬಾಣನ ಪಿತನೆ ಸುರರ ರಕ್ಷಕನಾದೆ ವಂಚಿಸದೆ ಎಮ್ಮಗಳ ನೀನೀಗ ಕಾಯೊ 5 ಅಮೃತಹಸ್ತನೆ ಕೃಷ್ಣ ಅಮೃತವಿತ್ತು ಕಾಯೊ ಅಮೃತರಲ್ಲವೆ ನಿನ್ನ ಪಟ್ಟಣದ ಜನರು ಅಮೃತ ಕಿರಣಾಂತರ್ಯಾಮಿಯೆ ಶಾಂತ ಧನ್ವಂತ್ರಿ ಅಮೃತರಾಗುವರೈಯ್ಯ ನಿನ್ನ ನಂಬಿದರೆ 6 ಸಚ್ಚಿದಾನಂದ ಸರ್ವೋತ್ತಮನೆ ಶ್ರೀ ಕೃಷ್ಣ ಬಿಚ್ಚಿ ಸಲಹಯ್ಯ ಎನ್ನe್ಞÁನ ಬಂಧ ಅಚ್ಚುತಾನಂತ ಶ್ರೀ ಗುರುಗಳಂತರ್ಯಾಮಿ ಅಚ್ಚವೈಷ್ಣಣವ ಪ್ರಿಯ ಗೋಪಾಲಕೃಷ್ಣವಿಠ್ಠಲ 7
--------------
ಅಂಬಾಬಾಯಿ
* ಸೂರ್ಯ | ನಾರಾಯಣ ರಥ ಸೂರ್ಯ ಪ. ಸೂರ್ಯ ರಥವನು ಭಾರಿ ವಸನಾಭರಣ ತೊಡುತಲಿ ಮೂರುಲೋಕವ ಬೆಳಗು ಮಾಡುತ ಭಾರಿ ತಮವನು ಛೇದಿಸುತ್ತ ಅ.ಪ. ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ ಸಪ್ತ ಜಿಹ್ವನ ತೆರದಿ ತೋರುತ ಸಪ್ತ ಶರಧಿಯ ದಾಟಿ ಸಾರುತ ಸಪ್ತಗಿರಿ ಮೇರು ಸುತ್ತುತಾ ರಥ ಶುಭ ದಿವಸದಲ್ಲಿ 1 ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ ಗಾಲಿದಬ್ಬುವ ರಕ್ಕಸೊಬ್ಬನು ವ್ಯಾಳನೊಬ್ಬನು ರಜ್ಜರೂಪಕೆ ಮೇಲೆ ಯಕ್ಷಕಿನ್ನರರು ಸುತ್ತಲು ಕರ್ಮ ಸಾಕ್ಷಿಯು 2 ಉತ್ತರಾಯಣ ಮಾಘದಿ | ಸ್ನಾನವಗೈದು ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ ಉತ್ತಮ ಗಂಗಾದಿ ತೀರ್ಥದಿ ಉದಿಸಿ ಬರುವಗೆ ಕೊಡುವ ಕತದಿ ಚಿತ್ತ ನಿರ್ಮಲದಿಂದ ಕಾದಿರೆ ಹತ್ತಿ ಛಾಯೆಯೆ ಸಹಿತ ರಥದಿ 3 ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ ಬಗೆ ಬಗೆಯ ಜೀವರುಗಳಯುವ ತೆಗೆದು ಸೆಳೆಯುತ ದಿನದಿನದಲಿ ನಿಗಮಗೋಚರ ನಾಜ್ಞೆಧಾರಕ ಸುಗುಣರಿಗೆ ಸುe್ಞÁನವೀಯುತ 4 ಕಮಲ | ಗದೆಯ ಧರಿಸಿ ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ ಶಂಖ ಚಕ್ರಾಂಕಿತನು ಶಿರಿಸಹ ಶಂಕಿಸದೆ ತನ್ನ ಹೃದಯದಲ್ಲಿರೆ ಬಿಂಕ ಗೋಪಾಲಕೃಷ್ಣವಿಠಲಗೆ ಕಿಂಕರನು ತಾನÉಂದು ಪೊಗಳುತ 5
--------------
ಅಂಬಾಬಾಯಿ
(ಕಂಗಳಿದ್ಯಾತಕೋ........ ಎಂಬಂತೆ) ದಾಸನೆಂದೆನಿಸೊ ಎನ್ನಾ | ಶ್ರೀಶ ಹೇ ಸರ್ವೇಶ ಪ ಹೇಸಿ ವಿಷಯದಿ ಬಹು | ಕ್ಲೇಶಗಳಿಗೊಳಗಾಗಿಘಾಸಿ ಪಟ್ಟಿಹೆನೊ ಹರಿ | ಪೋಷಿಸೂವುದು ಧೊರಿಅ.ಪ. ಏಸು ಜನ್ಮದ ಸುಕೃತದಿಂದಲಿಲೇಸಾದ ಮಧ್ವ ಮತದಿ ಬಂದು ||ಭಾಸುರ ತತ್ವ ಪ್ರಕಾಶಿಸಿ ಮಹಿದಾಸ ದಾಸರ ಪ್ರೀಯ ಪಿಡಿಕೈಯ್ಯ 1 e್ಞÁನ ದಾನವ ಬೇಡ್ವೆ | ಭಾವವನe್ಞÁನದಿಂದಲೆ ಕಡಿವೆ ಹರಿಯೆ ||ಮೌನಿಕುಲ ಸನ್ಮಾನ್ಯ ಮಾನವe್ಞÁನಾನಂದನೆ ವ ಪುಷ ಕಾಯೊ 2 ಬಾದರಾಯಣ ಭವ್ಯ ರೂಪಾಪಾದಕೆ ನಮಿಪೆನೊ ಶ್ರೀಪಾಮೋದಮುನಿಯ ನುತ | ಪ್ರಮೋದನೆಮೋದವೀಯೋ ಗುರು | ಗೋವಿಂದ ವಿಠಲ3
--------------
ಗುರುಗೋವಿಂದವಿಠಲರು
e್ಞÁನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ಪ ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ ಪರರ ಸತಿಯ ತೊರೆವುದೊಂದು ಮಾನವಲ್ಲವೆ ಪರರ ಸೇವೆಗಿರುವದವಮಾನವಲ್ಲವೆ 1 ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ ಹೊನ್ನ ಹುದಿದು ಅನ್ನ ತೊರೆವುದಜ್ಞಾನವಲ್ಲವೆ ಅನ್ಯರೊಡವೆ ಕಳುವುದವಮಾನವಲ್ಲವೆ 2 ಹಸಿದವರನು ಕಂಡು ಯಿಕ್ಕಲು ಜ್ಞಾನವಲ್ಲವೆ ಹುಸಿಕನಾಗಿ ಅಸತ್ಯ ಮಾಳ್ಪುದು ಅಜ್ಞಾನವಲ್ಲವೆ ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ ಎಸೆವ ಜೂಜು ತಪ್ಪಲವಮಾನವಲ್ಲವೆ 3 ಸ್ಥಿರವಿದಲ್ಲವೆಂಬ ಜೀವಿ e್ಞÁನಿಯಲ್ಲವೆ ನರಕ ಭಯವ ಮರೆವ ಜಡನe್ಞÁನಿಯಲ್ಲವೆ ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ ಬರಿಯ ಕ್ಷುದ್ರವೆಸಗಲವಮಾನವಲ್ಲವೆ 4 ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ ವೇದವನ್ನು ಜರೆದ ನರನಜ್ಞಾನಿಯಲ್ಲವೆ ಸೋದರರು ಕೂಡಿಯಿರಲು ಮಾನವಲ್ಲವೆ ಮಾದಿಗರ ಸಂಗವದವಮಾನವಲ್ಲವೆ 5 ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ ತಿರುಕರಂತೆ ತಿರಿವುದು ಅವಮಾನವಲ್ಲವೆ 6 ವರಾಹತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ ಕರೆದು ಪರರಿಗಿಕ್ಕುವುದು ಮಾನವಲ್ಲವೆ ಕರೆಕರೆಯ ಮಾತು ಅವಮಾನವಲ್ಲವೆ 7
--------------
ವರಹತಿಮ್ಮಪ್ಪ
e್ಞÁನಾನಂದ ಸ್ವರೂಪ ಭಾನುಕೋಟಿ ಪ್ರದೀಪ ನಾನಾದೋಷ ನೀರ್ಲೇಪ ಮೀನ ರೂಪ ಪ ಏನು ಅರಿಯದ ದೀನ ಭಕುತನಿಗೆ ಸಾನುರಾಗದಿ e್ಞÁನವನೀಯೋ ಅ.ಪ ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ ಅಗಣಿತ ಗುಣಗಳ ಪೊಗಳುತಲಿದ್ದರು ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ ಸಿರಿಯರಸನೆ ನಿನ್ನ ಚರಣಕಮಲದಲಿ ಪರತರ ಭಕುತಿಯ ದೊರಕಿಸೆಲೊ ಸರಸಿಜ ಜನಕನೆ ಮರೆತಪರಾಧವ ಕರುಣದಿಂದಲಿ ಎನ್ನ ಕರಗಳ ಪಿಡಿಯೋ 1 ಒಂದು ದಿನವು ಸುಖ ಗಂಧವನರಿಯದೆ ಭವ ಸಿಂಧುವದನನೆ ತೊಂದರೆ ಪಡುತಿಹೆ ಸುಂದರ ವದನನೆ ತಂದೆ ಎನಗೆ ನೀನೆ ಬಂಧುವೆನಗೆ ನೀನೆ ಮಂದ ಬುದ್ಧಿಯಲಿ ನಿಂದ್ಯನಾದೆನಗೆ ಕುಂದು ಸಹಸ್ರವು ಸಂಧಿಸಿತು ಇಂದು ಮನಕೆ ಆದ ತಂದುಕೊಳ್ಳದೆಲೆ ಮಂದಹಾಸದಲಿ ಬಂದೆನ್ನ ಪೊರೆಯೋ 2 ಹಿತವೆಂದು ಭವವನು ಅತಿ ಮೋಸಹೋದೆನು ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ ಪತಿ ನೀನಿರೆ ವಸುಮತಿಯೊಳಗೆ ಪತಿತಪಾವನನೆ ಪ್ರಸನ್ನನಾಗಿ ದಿವ್ಯ ಸತತ ಸುಖಕೆನಗೆ ಪಥವನು ತೋರೊ 3
--------------
ವಿದ್ಯಾಪ್ರಸನ್ನತೀರ್ಥರು
ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ ಕ್ಷೀರಾನ್ನ ದಧ್ಯೋದನ್ನ ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು ಉಪ್ಪಿನಕಾಯಿಗಳ ಪಚ್ಚಡಿ ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ 1 ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನÉೀ? 2 ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ ಸಿಟ್ಟುಮಾಡದೆ ಗುರುರಾಮವಿಠಲನ್ನಾ ಸ್ಮರಿಸಿಕೊಂಡು ದಿಟ್ಟೆ ಬೀಗಿತ್ತಿ 3
--------------
ಗುರುರಾಮವಿಠಲ
ಅಧ್ಯಾಯ ನಾಲ್ಕು ಮೃಗಯಾಯೈ ಹಯಾರೂಢಂ ಗಹನೆ ಹಸ್ತಿನಾಹೃತಂ ಪದ್ಮಾವತೀ ಕಟಾಕ್ಷೇಷು ತಾಡಿತಂ ನËಮಿ ಶ್ರೀಪತಂ ವಚನ ಅಂದಿಗಾವೇಂಕಟನು ಇಂದು ಪೋಗಲಿಬೇಕೆಂದು ಸ್ಮರಿಸಿದ ಆ ಕ್ಷಣದಿ ಚೆಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ ಬಿಂದುಗಳು ಅಲ್ಲಲ್ಲೆ ಮೇಲ್ಗರಿಯಂ ಒಂದೊಂದು ಚಂದದರÀಳಲೆಯು ದೂರದಿಂದ ಹೊಳೆಯುವುದು 1 ಮತ್ತೆ ಸರಗಳನೆಲ್ಲ ಮತ್ತೆ ಪರಿಮಿತಿಯಿಲ್ಲ ಉತ್ತಮಾಶ್ವವ ತಾನು ಮತ್ತೆ ಮೇಲೆ ಸುತ್ತಿದನು ಕೌಸ್ತುಭ ಶಕ್ತವಸ್ತ್ರಾ2 ಊಧ್ರ್ವಪುಂಡ್ರಾಂಕಿತನು ಆಗಿ ಅಕಳಂಕಕೇಸರ ಕುಂಕುಮಾಂಕಿತ ಶ್ರೀಗಂಧ ಪೊಂಕದಲ್ಲಿ ಪಂಕಜಗಳಿಗೆ ಟೊಂಕದಲಿ ಏಲೆ ಅಡಿಕೆಸಣ್ಣ ಕೊಂಕು ಇಲ್ಲದ ಕನ್ನಡಿ ಕಟ್ಟಿದನು ವಸ್ತ್ರಾದಿಂದÀ 3 ಕಂಠದಲಿ ಇಟ್ಟು ಜರತಾರಿ ಒಂಟಿ ಚಾದರವನ್ನು ಕಂಠದಲಿ ಚಲ್ಲರಿಪುಕಂಟ- ಕಾಗಿರುವಂಥ ಒಂಟಿ ಬಂಟನಾಗಿ ಅಂಟರಾ ಬಿಗಿದು ನೂರೆಂಟು ವೈಕುಂಠನಾಥನು ಎಂಬ ಬಂಟನ ಕುದುರೆ ಹೊರಗ್ಹೊಂಟಿತಾಗ 4 ವೇಂಕಟನು ವನದಲ್ಲಿ ಘನವಾದ ಮದ್ದಾನೆಯನು ಹತ್ತಿ ನಡೆದ ವನಜ ಓಡುತ್ತ ಮುಂದೆ ಸಮ್ಮುಖವಾಗಿ ವಿನಯದಿಂದಲಿ ಸೊಂಡೆಯನು ಮೇಲೆತ್ತಿ ಗರ್ಜನವ ಮಾಡುತಲೆ 5 ಕಂಡು ಗಡಬಡಿಸಿದರು ಮುಗ್ಗುತಲೆ ಒಡಗೂಡಿ ಅಡಗಿದರು ಬೇಗ ದೃಢಭಕ್ತಿ ನಡೆದು ಅಲ್ಲಿಂದ ಹಣಹಣಿಕೆ ನೋಡ್ಯಡಗಿದರು ನಡೆಸಿದನು ಕುದರೆ 6 ಒದರಿದಳು ಅಮ್ಮಯ್ಯ ಏರಿ ನಮ್ಮೆದುರಿಗೆ ಚದುರನಾಗಿ ಮಧುರ ಹೆದರೆ ಬೇಡಿರಿ ನೀವು ಚದುರ ವೃತ್ತಾಂತವನು ಕೆದರಿ ಕೇಳಿರಿ ಅವನ ಇದರಿಗ್ಹೋಗಿ 7 ಬಂದು ಪುರುಷನ ನೋಡಿ ಇಂದು ಇಲ್ಲಿಗೆ ನೀನು ಬಂದ ಗಮನ ತಂದೆತಾಯಿಗಳ್ಯಾರು ಬಂಧು ಮಂದಿ ಎಲ್ಲರು ಏನೆಂದು ಕರೆವರು ನಿನಗೆ ಚಂದಾಗಿ ಕುಲಗೋತ್ರ ಒಂದು ಬಿಡದಲೆ ನಮ್ಮ ಮುಂದೆ ನೀಪೇಳು 8 ಇಂದು ನಮ್ಮ ಮುಂದೆ ಕೇಳಿರಿ ನಮ್ಮ ಕ್ರಮದಿಂದ ಹೇಳುವೆನು ಬಂಧು ತಾ ಬಲರಾಮ ಇಂದು ಸುಭದ್ರೆಯೆಂದೆನಿಸುವಳು ತಂಗಿ ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ 9 ಕೃಷ್ಣ ಪಕ್ಷದಲ್ಲಿ ನಾ ಕರೆವರು ಯೆನಗೆ ಕಿವಿಯಲ್ಲಿ ಇಟ್ಟು ಬಹುಸಂತೋಷ ಪೇಳಿರಿ ಎನಲು ಥಟ್ಟನೆ ನುಡಿದಳು ದಿಟ್ಟಪದ್ಮಾವತಿಯು ಸ್ಪಷ್ಟತಾನೆ 10 ಸುವಿವೇಕದ ವೃತ್ತಾಂತ ಶ್ರೀಕರಾತ್ರಿಯ ಗೋತ್ರ ಧರಣೀ ದೇವಿ ವಸುಧಾನ ತಾ ಖೂನ ಪದ್ಮಾವತಿಯು ನೀ ಕೇಳಿ ಆಕೆಯಮೇಲೆ ಸ್ವಲ್ಪ ಪುತ್ರಿ ತಾ ಕೋಪವನು ಎಂದಳಾ ಕಾಲದಲಿ ಹರಿ ವಿವೇಕದಲಿನುಡಿದ11 ಧ್ವನಿ ರಾಗ :ಶಂಕರಾಭರಣ ಭಿಲಂದಿತಾಳ ಇಷ್ಟು ಎನ್ನ ಮೇಲೆ ಏಕೆ ಸಿಟ್ಟು ಮಾಡುವಿ ಬಟ್ಟ ಕುಚದ ಬಾಲೆ ಬಹಳ ನಿಷ್ಠುರಾಡುವಿ 1 ಧಿಟ್ಟ ಪುರುಷ ನೀನು ನಡತೆಗೆಟ್ಟು ಇರುವರೆ ಖೊಟ್ಟಿ ಕುದುರೆಯೇರಿ ಮೈಯ ಮುಟ್ಟ ಬರುವರೆ 2 ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್ಹೆಂಗಳೆ ಇಚ್ಛೆ ಪೂರ್ಣಮಾಡು ನೀನು ಮಚ್ಚಕಂಗಳೆ 3 ಹೆಚ್ಚು ಕಡಿಮೆ ಆಡದೀರು ಹೆಚ್ಚಿನಾತನೆ ಎಚ್ಚರಿಲ್ಲ ಮೈಯ ಮೇಲೆ ಹುಚ್ಚು ಪುರಷನೆ4 ಏನು ಹೆಚ್ಚು ಕಡಿಮೆ ಆಡಿದೇನು ಅನುಚಿತ ನೀನು ಕನ್ಯಾ ನಾನು ವರನು ಏನು ಅನುಚಿತ 5 ಮೂಢನೀನು ಇಂಥ ಮಾತು ಆಡೋದುಚಿತವೆ ಬೇಡ ಅರಸಗ್ಹೇಳಿ ನಿನಗೆ ಬೇಡಿ ಬಿಗಿಸುವೆ 6 ಮಡದಿ ನಿನ್ನ ಕಡೆಯುಗಣ್ಣು ಕುಡಿಯ ಹುಬ್ಬುಗಳ್ ಕಡಿಯದಂಥ ಬೇಡಿ ಎನಗೆ ಕಡೆಗೆ ಅಲ್ಲವೆ 7 ಇಂದು ಪ್ರಾಣವ ತಂದೆ ಕಂಡರೀಗ ನಿನ್ನ ಕೊಂದು ಹಾಕುವ 8 ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರೂ ಪ್ರಾಣದರಸಿ ಎನಿಸು ಪಟ್ಟರಾಣಿಯಾಗಿರು 9 ಇಂದು ವ್ಯರ್ಥವು ಹಂದಿನಾಯಿ ಹದ್ದು ಕಾಗೆ ತಿಂದು ಬಿಡುವವು 10 ಎನ್ನ ಫಣಿಯಲ್ಲಿದ್ದ ಲಿಖಿತ ಮುನ್ನ ತಪ್ಪದು ಚನ್ನವಾಗಿ ನಿನ್ನಕೂಡಿ ಇನ್ನು ಇರುವುದು11 ಸೊಲ್ಲ ಕೇಳಿ ಸಿಟ್ಟಿನಿಂದ ನಿಲ್ಲೋ ಎಂದಳು ಎಲ್ಲ ಗೆಳತೆರಿಂದ ಕೂಡಿಕಲ್ಲು ಒಗೆದಳು 12 ಕಲ್ಲು ತಾಗಿ ಕುದುರೆ ಭೂಮಿಯಲ್ಲಿ ಬಿದ್ದಿತು ಬಲ್ಲಿ ದಾನಂತಾದ್ರೀಶನಲ್ಲಿ ಸ್ಮರಿಸಿತು 13 ವಚನ ಆ ಕುದುರೆಯನು ಆಗುತ ವಿವೇಕದಲಿ ಪರಿ ಆಯಿತೀಕಾಲದಲ್ಲೀ ಲೋಕದಲಿ ಕಾಲಬೀಳದಲೆ ಆಕಾಲ ದಲಿ ಹೊರಟೆ ಆ ಕಾರಣದಿಂದೆನಗೆ ಸಂಕಟವು ಸೋಕಿತಿ ಮಾಡಿದ ಕರ್ಮಫಲ ದೊರೆಯದಿರದು 1 ಗಿರಿಯೇರುತಲೆ ತಾನು ಮೂಕತನದಲಿ ಶೇಷಾಯಿಯಂತೆ ಮುಂದಕೆ ಅನೇಕ ಕರೆದು ಕೊಡುವವನ ಶ್ರೀ ಕರುಣದಿ ಆಯಿತು ನಾಲ್ಕು ಅಧ್ಯಾಯ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಆರ್ತನಾಭೀಷ್ಟವನು | ಪೂರ್ತಿಗೊಳಿಸೊ ಪ ಕಾರ್ತಸ್ವರ ಮೊದಲಾದ | ವಾರ್ತೆ ನಾನೊಲ್ಲೇ ಅ.ಪ. ಫಲ ಗಿಡೆಲೆ ಮರ ಬಳ್ಳಿ | ಜಲ ಬಿಂದು ನವ ನದಿಯುಜಲ ನಿಧಿಯು ವನಗಿರಿಯು | ಜಲ ಚರಾಚರಧೀ ||ಒಳ ಹೊರಗೆ ಸಂವ್ಯಾಪ್ತ | ಚಲಿಪೆ ನೆಲೆಯಿಲ್ಲದಲೆತಿಳಿಸೊ ತವ ಮಹಿಮೆಗಳ | ಅಲವ ಭೋದಾತ್ಮಾ 1 ಕಂಡ ನೀರೊಳು ಮುಳುಗಿ | ಅಂಡಲೆದು ಬೆಂಡಾದೆಪುಂಡರೀಕಾಕ್ಷ ಪದ | ಬಂಡುಣಿ ಎನಿಸದೇ ||ಹಿಂಡು ತೀರದ ಗತ | ಪಾಂಡುರಂಗನ ರೂಪಕಂಡು ಹಿಗ್ಗುವುದೆಂದೊ | ಕುಂಡಲಿಯ ಶಯನಾ 2 e್ಞÁನಾಯು ರೂಪಕನೂ | ಪ್ರಾಣಾಂತರಾತ್ಮ ನಿನe್ಞÁನ ಕೊಟ್ಟು ಧರಿಸೊ | ಗಾನ ಪ್ರಿಯನೇ ||ಪ್ರಾಣನಿಗೆ ಪ್ರಾಣ ಗುರು | ಗೋವಿಂದ ವಿಠ್ಠಲನೆನೀನಾಗಿ ಒಲಿಯದಲೆ | ಅನ್ಯಗತಿ ಕಾಣೇ3
--------------
ಗುರುಗೋವಿಂದವಿಠಲರು
ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನe್ಞÁನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಉಗಾಭೋಗ ಏನೇನು ಪಾಟು ಬಿದ್ದರು ಮುನ್ನ ಕರ್ಮ ಬೆಂಬಿಡದಿರೆ ಶ್ರೀನಿವಾಸನÉ ನಿನ್ನಲನುಗಾಲ ಧ್ಯಾನಿಸಲೇಕೊ ಸ್ವಾಮಿ ನೀನೊಲಿದ ಮೇಲೆ ಪೂರ್ವಾಜಿತ ಕರ್ಮ ವೇನು ಮಾಡಬಲ್ಲದು ಹೀನ ಮಾನವರಿದನರಿಯದೆ ನಾನಾ ಪ್ರಕಾರದಿ ತೊಳಲುವರು ಶ್ವಾನನಂದದಿ ಭವದೊಳಗೆ ನಿನ್ನ ಮರೆದು ಏನು ಕಷ್ಟ ಬಂದರೂ ಬರಲಿ ನಾ ನಿನ್ನ ಮರೆಯೆನೊ ದೇವರದೇವ ಸಾನುರಾಗದಿ ಸಲಹೆನ್ನ ಶ್ರೀನಿಧಿ ರಂಗೇಶವಿಠಲ
--------------
ರಂಗೇಶವಿಠಲದಾಸರು
ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿಮೀನು ಗಾಳವÀ ನುಂಗಿ ಮೋಸಹೋದ ತೆರನಂತೆ ಧ್ರುವ ಸತಿ ನನ್ನ ಸುತರೆಂದೆನಿಸಿಹೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದುಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ 1 ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತಹಲವು ಬುದ್ಧಿಯಲ್ಲಿ ಹಿರ್ರನೆ ಹಿಗ್ಗುತಮಲಿನ ಮನಸಿನe್ಞÁನದಲಿ ತಾನರಿಯದೆ 2 ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿಹೊಗದಲ್ಲಿ ಹೊಗುವರು ಹೂ ಬಿಟ್ಟು ತಿಳಿಯರುಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲುವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ3
--------------
ಶ್ರೀಪಾದರಾಜರು
ಕರುಣಿಸುವುದು ಎನ್ನಾ ಕರಿವರದ ಕೇಶವ ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ ಸರಸಿಜಾಪತಿ ಸರಸಿಜೋದ್ಭವ ಹರಸುರಾಧಿಪ ವಂದ್ಯ ನಿನ್ನಯ ಎರವು ಮಾಡದೆ ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ. ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?) ನಡಿಸು ವೆಂಕಟಾ ಘನತೆ ನಿನಗಿದು ತಿಳಿದು ವೇಗದಿ ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ 1 ಮೊರೆಯ ಲಾಲಿಸು ಜೀಯಾ ಅರೆ- ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ- ನ್ಯರನು ಕಾಣದೆಯರಗಿದೆನು ಸುರ ಸಹಾಯ ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ ಮಾಯಾ ಬಲ ತಡದು ನಿಕ್ರವ ತರಲು ಜನರೊಳು (?) ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ ಕರಿಯು ಕರೆಯಲು ಬರುವುದುಂಟೇ ಕರುಣಾಸಾಗರನೆಂಬೊ ನಿನ್ನಯ ಬಿರುದು ಉಳ್ಳದಕೊಂಡು ಸಾಧನೆ ಧರೆಯ ದುಷ್ಟರ ಬಾಧೆ ತಪ್ಪಿಸಿ ಹರುಷವನು ಅತಿಗರೆದು ನಿರುತದಿ 2 ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ ನಿಡಲಿ ಬೆನ್ನಲಿ ನÉೂೀಡಿ ಪಾದಗಳ ಎಳೆಯುತ ನಡೆದು ಕೋಪವ ಮಾಡಿಬಿಡು ದೈನ್ಯದಲಿ ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ ಮಡುವಿನೊಳು ಗಿಡವೇರಿ ಧುಮುಕಲು ಅಂಬರ ಬಿಟ್ಟು ಖಡ್ಗವ ಪಿಡಿದು ವಾಜಿಯನೇರಿದನು ಜರ ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ 3 (ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)
--------------
ಶ್ರೀದವಿಠಲರು
ಕಿಂಕರರು ಗಣಪನ್ನ ಧ್ಯಾನಿಸಿ ಪ. ಪಾದ ಪಂಕಜವನೆ ನೆನೆಯುವುದು ಮನದೊಳು ಶಂಕರನ ಪ್ರಾಥಿಸುತ ಹರಿಯನಾತಂಕವಿಲ್ಲದೆ 1 ಪರಿ ಶಂಕೆಯಿಲ್ಲದೆ ಹರಿ ಮಹಿಮೆ ಪೊಗಳಲು 2 ಸರಸತಿಯ ಧ್ಯಾನಿಸಿ ನಿಮ್ಮ ಮಂಕಿನe್ಞÁನವನು ಕಳೆಯಲು ಪವಮಾನಗೆ ವಂದಿಸಿ 3 ಪಂಕಜಾಕ್ಷಿ ರಮಾದೇವಿ ಶ್ರೀ ಶ್ರೀನಿವಾಸನ ಪಾದ ಪಂಕಜವÀ ನೆನೆದು ಹರುಷದಿ 4 ಹರಿಕಿಂಕರು ಇರಿ ಎಂದರುಹಿದ ಪುರಂದರದಾಸರ ನೆನವೆನನುದಿನವೂ 5
--------------
ಸರಸ್ವತಿ ಬಾಯಿ
ಕೂಗಿದರು ಒಳಗೇ ಕದವ ತೆಗೆಯಂದು ಪ ಸತಿಯರು ತಾವು ಆಗ ಆನು- ನಿನ್ನ ನಾವು ಬಲ್ಲೆವು 1 ಮೆಲ್ಲನÉ ಬಾರೆ ನೀ ನಿಜವ ಮಾಡೀಗ 2 ಮನೆಯೊಳಿರಲು ' ಮಾರಜನಕನೆಂಬೊದು ಬಲ್ಲೆನೆ 3 ಇನ್ನು ನೀರೆ ನಿನ್ನ ಗಂಡನೆ ನಾನು ಓಯನ್ನ ಪ್ರಾಣಸಖಿ ಬೇಗ ಬಂದು ಕದವ ತೆಗೆ ಈಗ 4 ಎಲ್ಲಿಯವನು ಭಂಡತನ ಬಿಡುಇನ್ನು 'ಓಹೆನ್ನೆ ವಿಠಲ’ ಮಾಡುವದು ಇದು ರೀತಿಯಲ್ಲವು 5 ಚಂಡಿನಾಟ ಬಾ ಸಭಯದಿ ಓಯನ್ನ ಪ್ರಾಣಸಖಿ ಚಲುವೆ ಹೊರಗೆ ಬಾರದಿರುವೇ 6 ಅಷ್ಟು ಜಗದಲ್ಲಿ ಬಲ್ಲಿ 'ಓಹೆನ್ನೆ ವಿಠಲ’ ಚೇಷ್ಟಿಮಾಡದಲೆ ನಡಿಯಯ್ಯಾ 7 ದೇವರನ್ನು ಕೂಡಿತೆ ಓಯನ್ನ ಪ್ರಾಣಸಖಿ ಈಗ ಆಣಿ ಮಾಡಿಸಿ ಕೇಳು 8 ಅತ್ತಿಯನ್ನು ಕೂಡಿದವನೆ ಉತ್ತಮನೆ ನೀನು ಇನ್ನು ಎತ್ತಲ ಆಣೆಯು ನಿನಗೇ 'ಓ ಹೆನ್ನೆ ವಿಠಲ’ ಸತ್ಯವಂತನಾಗಿ ಹೇಳುವಿ 9 ಕಾಕು ಹೆಣ್ಣು ನಿನಗೆ ಥರವೆ ಓಯನ್ನ ಪ್ರಾಣಸಖಿ ಕಣ್ಣಿಲೆ ನೋಡದೆ ಕರಿಯೆ 10 ಪರಮ ಪರುಷನುಳ್ಳವರು ಪರಮಪುರುಷನ ಪಡೆವಂಥ ದೂರನಡಿಯೆ ಇಲ್ಲಿ ಎನಯ್ಯ 11 ಇನ್ನು ಸ್ವಲ್ಪ ನಿನಗೆ ತಿಳಿಯದೆ ಓಯನ್ನ ಪ್ರಾಣಸಖಿ ಸಾಗಿ ಬಂದು ನೋಡೆ ಬೇಗನೆ 12 ಏನು ಆಶ್ವರ್ಯವು ನಿನಗೆ ನಡಿಯಯ್ಯಾ 13 ಇನ್ನು ನಿನಗೆ ಇನ್ನಾದರೆ ಮನಸಿಗೆ ತಾರ 14 ನಿನಗೆ ಅರುವು ಇರಲು ಸೋಗು ಮಾಡಿನಡಿಯಯ್ಯಾ 15 ತಿಳಿಸುವೆನು ಮನಸು ಇಟ್ಟು ಮನ್ನಿಸೆನ್ನನು ಓಯನ್ನ ಪ್ರಾಣಸಖಿ ಮಾಡಬೇಡ ಹೀಗೆಯನ್ನನು 16 ಮರ್ಮವು ತಿಳಿಯದೆ 'ಒಹೆನ್ನೆವಿಠಲ’ ಮೋಸಮಾಡ ಬಂದಿ ನಡಿಯಯ್ಯಾ 17 ಹೇಳಿ ಎಲ್ಲರು ಹಿಗ್ಗುವ ವೇಳ್ಯೆದಿ 'ಓ ಯನ್ನ ಪ್ರಾಣಸಖಿಕೇಳಿದ ಮಾತನು ಹೇಳುವೆ 18 ಬಂದು ವಾಸವಾಗಿ ಹೇಸದೆ ಏನೆಂದು ಬಂದೆ 19 ಮಾನ ಪತಿಯೆಂಬ ಮಾರ್ಯದೆ ಓಯನ್ನ ಪ್ರಾಣಸಖಿ ಮನಸಿನಲ್ಲಿ ಏನು ಇಲ್ಲವು 20 ಮುನಿವಳಗೇ ಮಾನಪತಿ ಪುರುಷನೇನಯ್ಯಾ 21 ಮಾಡಿಕೊಳ್ಳದವನಿಗೆ ಧೈರ್ಯ ವಿಲ್ಲವೆ 22 ಅಂಜಿಕೆ ಏನಯ್ಯಾ 'ಓಹೆನ್ನೆ ವಿಠಲ’ ಧೈರ್ಯವು ಯಾಕೆ ನಿನಗಯ್ಯ 23 ಬಂದು ಇಷ್ಟು ತಡ ನಿನ್ನ ಗಂಡನೆನಾನು24
--------------
ಹೆನ್ನೆರಂಗದಾಸರು