ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ಪ ನಂಬಿದ ಜನರಿಗೆ - ಬೆಂಬಲ ತಾನಾಗಿ ತುಂಬಿ ಕೊಡುವರನ್ನ ಅ.ಪ ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ - ಜಲವ ನಿತ್ತವರನ್ನ 1 ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು - ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ - ವಿತ್ತು ಪೊರೆದಿಹರನ್ನಾ 2 ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ - ಘಟನಾ ಮಾಡುವ ನಮ್ಮ ಪಟು ಗುರುವರ ಹೃ - ತ್ಪುಟ ದಿರುವೋರನ್ನ 3
--------------
ಗುರುಜಗನ್ನಾಥದಾಸರು