ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಚಂದನದಿಂದ ಎ ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ. ಮೃಡಸಖ ನಿನ್ನಯ ರೂಹವ ತೋರೆ ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ. ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು ಮಜ್ಜಿಗೆ ಕಡಗೋಲು ನೇಣು ಸಹ ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1 ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ ಇಟ್ಟು ಕೌಸ್ತುಭಹಾರ ತುಳಸಿಮಾಲಾ ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2 ಮಕರಕುಂಡಲ ಕಿರೀಟ ಶೋಭಿಸುತಲಿ ಅಕಳಂಕ ಚರಿತ ಶ್ರೀ ಶ್ರೀನಿವಾಸ ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3
--------------
ಸರಸ್ವತಿ ಬಾಯಿ
ತಾಮರಸ ನೆರೆನಂಬಿದೆ ಪೊರೆಯೆನ್ನನು ಪ ಜನನ ಮರಣವಿದೂರ ನೀನಾಜನಪತಿಯ ತನುಜಾತನೆ ಅನಿಮಿಷೇಶರಿಗೊಡೆಯನೆನಿಸಿದೆ 1 ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ 2 ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ 3 ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ 4 ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತÀಪ್ರಭಾ ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ 5 ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರÀಲವೋ ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ 6 ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ ಮಂಗಗಳಿಗೆ ನೀನೊಲಿದಿಯಾ 7 ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ 8 ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ 9 ಶಾಂತಿಯ ಪೆÇಂದಿದ ಹರನ ಪೂಜಿಯಗೈದಿಯಾ 10 ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ 11 ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು 12 ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು 13 ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು 14 ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ15
--------------
ವರದೇಶವಿಠಲ
ವಂದಿಸೋ ಎಲೆ ಮಾನವಾ ಮಾಣದೆ ಸದಾ ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ ಧರಣಿಯಂದದಿ ಕ್ಷಮಾಭರಿತ ಮಂಗಲದಾತ | ಶರಧಿಯಂದದಿ ದಯಾಗುಣಶೀಲರೋ | ಸುರ ನದಿಯಂದದಿ ದುರಿತಪರಿಹಾರಕರು | ತರಣಿ ಭಾರ ತಿಮಿರನೋಡಿಸುವರೋ 1 ಈಶನಂದದಿ ಜಿತಪೂಶರವರ | ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು | ಸಾಸಿರ ಮುಖನಂತೆ ಯೋಗಸುಸಾಧಕರು ಭೇಶನಂದದಿ ಸುಧಾಕರರಾಗಿ ತೋರ್ಪರೋ 2 ಶಾಮಸುಂದರವಿಠಲಸ್ವಾಮಿ ಉಪಾಸನೆ | ನೇಮದಿಂದಲಿ ಸತತಗೈಯುತಲಿ ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು 3
--------------
ಶಾಮಸುಂದರ ವಿಠಲ
ಸೂರ್ಯ ಯತಿವರ್ಯ | ಮ ಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ಪ ಬುಧಜನ ವಂದಿತ ಸುಧಿ ಸುವೃತೀಂದ್ರರ ಸದಮಲ ಘನ ಸದ್ ಹೃದಯಾ ಕಾಶಕೆ 1 ಧರಣಿ ಸುರಾಗ್ರಣಿ ಗುರು ಸುವೃತೀಂದ್ರರ ಸುರಚಿರ ಸರಸಿಜಕರ ಪೂರ್ವಾದ್ರಿಗೆ 2 ಭೂಸುರ ಸೇವಿತ ಪೂಶರ ನಿರ್ಜಿತ ಭಾಸುರ ವರ ಸನ್ಯಾಸ ಸುಚ್ಭಾಯಕೆ 3 ಬಗೆ ಬಗೆಯಿಂದಲಿ ನಿಗವೋಕ್ತಿಯಲಿ ರಘುವರನರ್ಚಿಪ ಸುಗುಣವೆಂಬ್ಹಗಲಿಗೆ 4 ಶಾಮಸುಂದರನ ನಾಮ ಪೊಗಳಿದ ಪಾಮರ ಮತಿ ಜನಸ್ತೊಮ ಯಾಮಿನಿಗೆ 5
--------------
ಶಾಮಸುಂದರ ವಿಠಲ