ಒಟ್ಟು 12 ಕಡೆಗಳಲ್ಲಿ , 1 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಮಿತ ಮಹಿಮೋಪೇತ ವಿಠಲ ಸಲಹೋ ಪ. ವಿಮಲಮತಿ ಇತ್ತಿವಗೆ ಕಾಮಿತಾರ್ಥವನೇಅ.ಪ. ತೈಜಸನೆ ನೀನಾಗಿ ನಿಜಯಾರ್ಯನುಗ್ರಹವಯೋಜಿಸಿಹೆ ಸ್ವಪ್ನದಲಿ ಕಾರುಣ್ಯಮೂರ್ತೇಭ್ರಾಜಿಷ್ಣು ಸುe್ಞÁನ | ವೈರಾಗ್ಯ ಭಾಗ್ಯಗಳಮಾಜದಲೆ ಕರುಣಿಸೆಂದಾನಮಿಪೆ ಹರಿಯೇ 1 ಹೇ ಸದಾಶಿವ ವಂದ್ಯ | ಕ್ಲೇಶತೋಷಗಳಲ್ಲಿಭಾಸಿಸಲಿ ತವನಾಮ | ಮೀಸಲದ ಮನದೀ |ಆಶುಗತಿಮತ ಪೊಂದಿ | ದಾಸದೀಕ್ಷಾಕಾಂಕ್ಷಿವಾಸವಾನುಜ ಇವನ | ದಾಸನೆಂದೆನಿಸೋ 2 ಭವ ಉತ್ತರಿಪಸದ್ವಿದ್ಯ ಪಾಲಿಪುದು ಮಧ್ವಾಂತರಾತ್ಮಾ 3 ಹರಿಗುರೂ ಸದ್ಭಕ್ತಿ | ದುರ್ವಿಷಯನಾಸಕ್ತಿಎರಡು ಮೂರ್ಭೇದಗಳ | ಅರಿವ ನೀನಿತ್ತೂತರತಮದ ಸುe್ಞÁನ | ಕರುಣಿಸುವುದೆಂದೆನುತಕರಿವರದ ಭಿನ್ನವಿಪೆ ಪ್ರಾರ್ಥನೆಯ ಸಲಿಸೋ 4 ಕಾಯ ಬೇಕೋ 5
--------------
ಗುರುಗೋವಿಂದವಿಠಲರು
ಗುರು ಪ್ರಸನ್ನ ವಿಠಲ | ಪೊರೆಯ ಬೇಕಿವನಾ ಪ ದುರಿತ ದುಷ್ಕøತ ನಿಚಯ | ಪರಿಹರಿಸಿ ವರ್ಯಾ ಅ.ಪ. ಮಧ್ವ ಮತದಲಿ ಶ್ರದ್ಧೆ | ವೃದ್ಧಿಗೈ ಸಿವನಲ್ಲಿಶ್ರದ್ಧೆ ಪತಿನುತ ಹರಿಯೆ | ಮಧ್ವಾಂತರಾತ್ಮಾಬುದ್ಧಿ ಜೀವಿಯು ಇವನು | ಸಾಧನದಿ ಶಕ್ತನಿಹನಿದ್ರೆಯಿಂದೆಚ್ಚರಿಸಿ | ಉದ್ಧರಿಸೊ ಇವನಾ 1 ಅಂಕಿತದ ಉಪದೇಶ ಕಾಂಕ್ಷಿಸುತ್ತಿಹ ಇವಗೆಬಿಂಕದಲಿ ತೈಜಸನು | ಗುರು ರೂಪಿಲಿಂದಾಲೆಂಕಕನ ಸ್ವೀಕರಿಸಿ | ಆಶಿಷವ ನಿತ್ತಿಹನುಪಂಕಜಾಸನ ವಂದ್ಯ | ಅಂಕಿತವ ನಿತ್ತೇ 2 ಸಂಸಾರ ಕ್ಲೇಶಪದ | ಪಾಂಸು ಭಜಿಪುದರಿಂದೆಸಂಶಯವು ರಹಿತಾಗಿ | ದೂರ ಓಡುವುದೋಕಂಸಾರಿ ನಿನ ಅಂಶಿ | ಅಂಶಾವತಾರಗಳಶಂಸನದಿ ಸಾಧನವ | ಗೈಸೊ ಶ್ರೀಹರಿಯೇ 3 ಭವ ವಂದ್ಯಾ 4 ಯೋಗೀಶ ಶ್ರೀ ಕೃಷ್ಣ | ಯೋಗ ಸಾಧನೆಯಿತ್ತುನೀಗು ಭವವನು ಇವಗೆ | ಭಾಗವತರೊಡೆಯಬಾಗಿ ಬೇಡುವೆ ದಯಾ | ಸಾಗರನೆ ಉದ್ಧರಿಸೊಯೋಗಿ ಜನ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ಮಧ್ವೇಶ ವಿಠಲ | ಪೊರೆಯ ಬೇಕಿವಳ ಪ ಪರಮ ಭಕುತಿಲಿ ನಿನ್ನ | ದಾಸ್ಯ ಕಾಂಕ್ಷಿಪಳ ಅ.ಪ. ಹರಿಗುರೂ ಸದ್ಭಕ್ತಿ | ಹಿರಿಯರಲಿ ಅಸಕ್ತಿನಿರುತ ಕರುಣಿಸಿ ಇವಳ | ಪೊರೆಯೊ ಹರಿಯೇ |ಅರುಹ ಲೇನಿಹುದಿನ್ನು | ಸರ್ವಜ್ಞ ನೀನಿರುವೆಕರುಣದಲಿ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ 1 ಕೃದ್ಧಖಳ ಜನರನ್ನು | ಪ್ರಧ್ವಂಸ ಮಾಡುತಲಿಬುದ್ಧಿಯೊಳು ನೀ ನಿಂತು | ವಿದ್ಯೆ ಪ್ರದನಾಗೋಮಧ್ವಮತ ಪದ್ಧತಿಗಳುದ್ಧರಿಸಿ ಇವಳಲ್ಲಿಪದ್ಮನಾಭನೆ ಪೊರೆಯೊ | ಮಧ್ವಾಂತರಾತ್ಮಾ 2 ಕಂಸಾರಿ ಹರಿಯೇ 3 ನಿನ್ನ ಪ್ರೇರಣೆಯಂತೆ | ಕನ್ಯೆಗಂಕಿತವಿತ್ತೆನನ್ನೆಯಿಂ ಪೊರೆಯಿವಳ ಪನ್ನಂಗ ಶಯನಾ |ನಿನ್ನಂಥ ಕರುಣಾಳು | ಅನ್ಯರಾರಿಹರಯ್ಯಪನ್ನಗಾರಿಯ ವಾಹ | ಅನ್ನಂತ ಮಹಿಮಾ 4 ಪಾವನಾತ್ಮಕ ದೇವ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಶರ್ವವಂದ್ಯಾ ಭಾವದೊಳು ಮೈದೋರಿ | ಕಾವ್ಯದನೆ ಬಿನ್ನಪವಾನೀ ವೊಲಿದು ಸಲಿಸೊ ಗುರು | ಗೊವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ರಾಜ ಹರಿ ವಿಠಲ | ಪೊರೆಯ ಬೇಕಿವಳಾ ಪ ಗರುಡ ಗಮನನೆ ದೇವ | ಸರ್ವಾಂತರಾತ್ಮ ಅ.ಪ. ಪತಿಯೆ ಪರದೈವ ವೆಂ | ಬತಿಶಯದ ಮತಿಯಿತ್ತುರತಳೆನಿಸು ಗುರು ಹಿರಿಯ | ಹಿತಸೇವೆಯಲ್ಲೀಕೃತ ಕೃತ್ಯಳೆಂದೆನಿಸೊ | ಗೃಹ ಮೇಧಿ ಎಂಬಲ್ಲಿಕೃತಿ ರಮಣ ಪ್ರದ್ಯುಮ್ನ | ವಿತತ ಮಂಗಳನೇ 1 ಮಧ್ವಮತದನುಯಾಯಿ | ಶುದ್ಧ ಭಕುತಿ e್ಞÁನ ಉದ್ಧರಿಸಿ ಇವಳಲ್ಲಿ | ಸಾಧನವ ಗೈಸೋಅಢ್ಯರೇಡ್ಯನೆ ಹರಿಯೆ | ಶ್ರದ್ಧಾಳು ತನದಲ್ಲಿಬುದ್ಧಿ ಓಡಲಿ ದೇವ | ಮಧ್ವಾಂತರಾತ್ಮಾ 2 ಸಾರ | ತರಳೆ ಬುದ್ಧಿಗೆ ನಿಲುಕಿಪರಮ ಸತ್ಸಾಧನವ | ಚರಿಸುವಂತೆಸಗೋಮೊರೆಯಿಡುವೆ ನಿನ್ನಲ್ಲಿ | ಕರುಣಿಸೀ ಬಿನ್ನಪವಗುರುವಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ e್ಞÁನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಪಂಢರಿನಾಥ ವಿಠಲ | ತೊಂಡನನು ಸಲಹೊ ಪ ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ. ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ 1 ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ 2 ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ 3 ಹರಿಗುರೂ ಸದ್ಭಕ್ತಿ | ಪರತತ್ವ ಸುe್ಞÁನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ 4 ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ5
--------------
ಗುರುಗೋವಿಂದವಿಠಲರು
ಪತಿ ಗೋಪಾಲ | ವಿಠಲ ಕಾರುಣಿಕಾ ಪ ನೀನಾಗಿ ಒಲಿದಿವನ | ಪೊರೆಯೆ ಪ್ರಾರ್ಥಿಸುವೇ ಅ.ಪ. ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸುತ ಸರ್ವಕರ್ತೃ ನಿನ್ನಯ ಸೇವೆ | ಅರ್ಥಿಯಂ ಗೈವೆ |ಅರ್ಥಿಸುವ ನಿನ್ನ ದಾಸತ್ವ ದೀಕ್ಷೆಯನೂಸುಪ್ರೀಶ ತೋರ್ದಪರಿ | ಇತ್ತಿಹೆನೊ ಅದಗೇ 1 ಕರ್ಮನಾಮಕನೆ ದುಷ್ಕರ್ಮಗಳ ಪರಿಹರಿಸಿನಿರ್ಮಲ ಸುಸಾಧನಕೆ | ಸನ್ಮಾರ್ಗ ತೋರೋ |ಮನ್ಮಥನ ಜನಕ ತವ | ನಾಮಸ್ಮರಣೆಯ ಕವಚಪೇರ್ಮೆಯಿ ತೊಡಿಸಿ ಸ | ದ್ಧರ್ಮರಥನೆನಿಸೋ 2 ವೃದ್ಧ ಜನಗಳ ಸೇವೆ | ಬುದ್ಧಿಪೂರ್ವಕಗೈದುಮಧ್ವಮತ ಸಚ್ಛಾಸ್ತ್ರ | ತಿದ್ದಿ ಪೇಳುವಲೀ |ಶುದ್ಧಬುದ್ದಿಯನಿತ್ತು | ಉದ್ದರಿಸಬೇಕಿವನಹದ್ದುವಾಹನದೇವ | ಮಧ್ವಾಂತರಾತ್ಮಾ 3 ಅಧಿಭೂತ ಅಧ್ಯಾತ್ಮ | ಅದಿದೈವದೊಳು ನಿನ್ನಅದುಭೂತ ವ್ಯಾಪ್ತಿಯನೆ | ವದಗಿಸಿ ಮನಕೇ |ಬುಧ ಜನೇಢ್ಯನೆ ದೇವ | ಸದಯದೀ ತರಳಂಗೆಹೃದಯದಲಿ ಮೈದೋರಿ | ಮುದವನೇ ಬೀರೋ 4 ದೀರವನು ಎಂದೆನಿಪ | ಪಾವಮಾನೀಯ ಪ್ರಿಯಕೇವಲಾನಂದಮಯ | ಮಾವಿನೋಧೀಸಾವಧಾನದಿ ತರಳ | ಭಾವುಕಗೆ ಒಲಿಯೆಂದುಓದಿ ಭಿನ್ನವಿಪೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪ್ರಕಾಶರೂಪಿ ವಿಠಲಾ ತೋಕನ್ನ ಸಲಹೋ ಪ ಅಕಳಂಕ ಚಾರಿತ್ರ | ನಿಖಿಲಾಗಮಸುವೇದ್ಯಪ್ರಕಟಿಸಿವನಲಿ e್ಞÁನದಂಕುರವ ಹರಿಯೇ ಅ.ಪ. ಮಧ್ವಮತದಲಿ ದೀಕ್ಷೆ | ಶುದ್ಧ ಭಕುತಿ e್ಞÁನಸಿದ್ದಿಸುವುದಿವನಲ್ಲಿ | ಮಧ್ವಾಂತರಾತ್ಮಾವಿದ್ಯೆಸಂಪದದಲ್ಲಿ | ಸ್ಪರ್ಧಿಸುವ ಮನಕಾಗಿಬುದ್ಧಿ ಪ್ರೇರಿಸು ಹರಿಯೆ ಸಿದ್ಧಮುನಿವಂದ್ಯಾ 1 ಕಾಮಾದಿ ಷಡ್ವೈರಿ | ಸ್ತೋಮವನೆ ಕಳೆಯುತ್ತನೇಮನಿಷ್ಠೆಯಲಿ ಮನ | ಕಾಮನೆಯ ಕೊಟ್ಟೂಪ್ರೇಮದಲಿ ಹರಿಗುರೂ | ಸ್ವಾಮಿ ಕಾರ್ಯವಗೈಸಿಕಾಮಿತಾರ್ಥದನಾಗೊ | ಕಾಮ ಪಿತ ಹರಿಯೇ 2 ಅಂಶದಲಿ ತನುವ್ಯಾಪ್ತಿ | ಸಾಂಶದೇವಾದಿಗಳುಸಂಸಾರ ನಿರ್ವಹಣೆ ಮಾಡಿಮಾಡಿಸುತಾಕಂಸಾರಿ ಪೂಜೆ ಎನೆ | ಶಂಸಿಸುತ ಯೋಗ್ಯರಲಿವಂಶ ಉದ್ಧರವೆಂಬ | ಅಂಶವನೆ ತಿಳಿಸೋ 3 ಕಾಕು ಜನಗಳ ಸಂಗ | ಓಕರಿಸುವಂತೆಸಗಿನೀಕೊಟ್ಟು ಸತ್ಸಂಗ | ಪ್ರಾಕ್ಕರ್ಮ ಕಳೆಯೋಲೌಕಿಕದಿ ಸತ್ಕೀರ್ತಿ | ನೀ ಕರುಣಿಸಿವನಲ್ಲಿಏಕಮೇವನೆ ಇದನೆ | ನಾ ಕೇಳ್ವೆ ಹರಿಯೇ 4 ಜೀವರಂತರ್ಯಾಮಿ | ಜೀವಕರ್ಮವವೆಸಗಿಆವಫಲ ದ್ವಂದ್ವಗಳ | ಜೀವಕರುಣಿಸುವನೇಭಾವುಕರ ಪಾಲಗುರು | ಗೋವಿಂದ ವಿಠ್ಠಲನೆಕಾವುದಿವನನು ಎಂಬ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪ್ರದ್ಯುಮ್ನ ವಿಠಲ ನೀನಿವಳ ಸಲಹಬೇಕೋ ಪ ವಿದ್ಯಾಯು ಸಂಪತ್ತು | ಭಕ್ತ್ಯಾದಿಗಳನಿತ್ತುಉದ್ಧರಿಸ ಬೇಕಿವಳ | ಮಧ್ವಾಂತರಾತ್ಮಾ ಅ.ಪ. ಹರಿದಾಸ್ಯ ಕಾಂಕ್ಷಿತಳು | ಹಿರಿದಾಗಿ ಬೇಡಿಹಳುವರತೈಜ ಸಾಖ್ಯಹರಿ | ವರದ ನಾಗಿರುವೇಕರುಣನಿಧಿ ತವನಾಮ | ಸ್ಮರಿಪ ಸನ್ಮಾರ್ಗವನುಅರುಹಿ ಮಹ ಭವನಿಧಿಯ | ತರಣ ತಿಳಿಸಿರುವೇ 1 ಕಂಸಾರಿ ತವಪಾದಪಾಂಸುವನೆ ಶಿರದಿ ಅ | ಸಂಶಯದಿ ಧರಿಸೀಮಾಂಸಧಾತುಕ ಸಪ್ತ | ಹೇಸಿಕೆಯ ದೇಹವು - ವಿಪಾಂಸಗನಿಗಧಿಷ್ಠಾನ | ವೆಂಬುದನೆ ತಿಳಿಸೋ2 ಪಂಚಬೇದಾತ್ಮಕ ಪ್ರ | ಪಂಚವು ಸದಾ ಸತ್ಯಅಂಚೆವಹ ಸುರರಾದಿ | ತರತಮ್ಯದಾಸಂಚಿಂತನೆಯ ಕೊಟ್ಟು | ವಾಂಛಿತಾರ್ಥದ ಹರಿಯೆಮಿಂಚಿನಂದದಿ ಪೊಳೆಯೊ | ಹೃತ್ಪಂಕಜದ ನಡುವೆ3 ಮತೆ ಈ ಯುಗದಲ್ಲಿ | ಕೃತ್ಯ ವ್ರತನೇಮಾದಿಸತ್ವ ರಹಿತವು ಆಗಿ | ನಿತ್ಯಫಲರಹಿತಾಎತ್ತ ನೋಡಿದ ರತ್ತ | ಕತ್ತಲೆಯು ಕವಿದಿಹುದುಹತ್ತಿರವೆ ಇರುವಂಥ | ಭಕ್ತವತ್ಸಲ ಸಲಹೋ 4 ದಾವಾಗ್ನಿ ಕುಡಿದವನೆ | ಪಾವಿನಾಮದ ಹರನೆಗೋವುಗಳೊಳುದ್ಗೀಥ | ದೇವಾದಿದೇವಾಕಾವುದಿವಳನು ಎಂಬ | ಭಾವ ಬಿನ್ನಪ ಸಲಿಸೊಮಾವಿನೋದಿಯೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ ವಾಹನ ದೇವ | ಲಕ್ಷುಮಿಯ ರಮಣಾ ಅ.ಪ. ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1 ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2 ಶುದ್ಧ ತರತಮ e್ಞÁನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3 ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4 ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶರ್ವೇಡ್ಯ ಮೋಹನ ವಿಠಲ ಪೊರೆ ಇವನ ಪ ಸರ್ವತ್ರ ಸರ್ವದಾ | ಸರ್ವ ಮಂಗಳನೇ ಅ.ಪ. ಸುಕೃತ | ರಾಶಿ ಫಲಿಸಿತೋ ಇವಗೆದಾಸ ದೀಕ್ಷೆಯಲಿ ಮನ | ಲೇಸುಗೈದಿಹನೋ |ವಾಸವಾದೀ ವಂದ್ಯ | ಭಾಸುರಾಂಗನೆ ದೇವದೋಷಾಗಳನಳಿದು ಸಂ | ತೋಷವನೆ ಪಡಿಸೋ1 ಹರಿದಾಸ ರೊಲಿದಿವಗೆ | ದರುಶನವನಿತ್ತಿಹರುಗುರು ರಘೋತ್ತಮರಂತೆ | ಬೃಂದಾವನಸ್ಥಾನರಹರಿಯು ಸ್ವಪ್ನದಲಿ | ಹರಿಹಯಾಸ್ಯವ ತೆರದಿದರುಶನಕೆ ಕಾರಣವು | ಪರಮ ಪ್ರಿಯರ್ದಯವೂ 2 ಅದ್ವೈತ ತ್ರಯe್ಞÁನ | ಸಿದ್ಧಿಸುತ ಸಂಸಾರಅಬ್ಧಿಯನೆ ಉತ್ತರಿಸೊ | ಮಧ್ವಾಂತರಾತ್ಮಾ 3 ಕಿಂಕಿಣಿಯ ಶೋಭಿತನೆ | ಶಂಕರೇಡ್ಯನೆ ನಿನ್ನಅಂಕಿತವ ನಿತ್ತಿಹೆನೊ | ಲೆಂಕತನದವಗೇವೆಂಕಟ ಕೃಷ್ಣ ಹೃತ್ | ಪಂಕಜದಿ ತವರೂಪಕಿಂಕರಗೆ ತೋರೆಂದು | ಶಂಕಿಸದೆ ಬೇಡ್ವೇ 4 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾವ | ಹವಣೆ ನಿನದಲ್ಲೇ |ಪರ್ವ ಪರ್ವದಿ ಇವಗೆ | ನಿರ್ವಿಘ್ನ ನೀಡಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿ ಗೋಪಾಲ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ತರಳೆ ದ್ರೌಪದಿ ವರದ | ಮರಳ್ಯಹಲ್ಯಯ ಪೊರೆದತರಳ ಪ್ರಹ್ಲಾದನನ | ಪೊರೆದ ನರಹರಿಯೇ |ವರುಷ ಐದರ ಧೃವಗೆ | ವರದನಾಗೀ | ತೋರ್ದೆಕರುಣಾಳು ನಿನ್ಹೊರತು | ಬೇರನ್ಯಕಾಣೇ 1 ಕಂಸಾರಿ ನಿನ್ನ ಪದಪಾಂಸುವನೆ ಶಿರದಿ ನಿ | ಸ್ಸಂಶಯದಿ ಧರಿಸೀಶಂಸಿಸಲು ಮಹಿಮೆ ತವ | ದಾಸ್ಯ ಪಾಲಿಸುತಿನ್ನುಹಂಸವಾಹನ ಪಿತನೆ | ವಂಶ ಉದ್ಧರಿಸೋ 2 ಕರ್ಮ ಪ್ರಾಚೀನಗಳ | ಮರ್ಮ ತಿಳಿದವರ್ಯಾರೊಕರ್ಮನಾಮಕನೆ ದು | ಷ್ಕರ್ಮ ಪರಿಹರಿಸೀ |ಪೇರ್ಮೆಯಿಂದಿವಳ ಪೊರೆ | ನಿರ್ಮಲಾತ್ಮಕ ದೇವಧರ್ಮ ಗೋಪ್ತ ಸ್ವಾಮಿ | ಬ್ರಹ್ಮಾಂಡದೊಡೆಯಾ 3 ಮಧ್ವಮತ ಸಿದ್ಧಾಂತ | ಪದ್ಧತಿಗಳರುಹೃತ್ತಶುದ್ಧಸಾಧನ ಗೈಸೊ | ಮಧ್ವಾಂತರಾತ್ಮಾಅಧ್ವಯನು ನೀನೆಂಬ | ಶುದ್ಧ ಬುದ್ಧಿಯನಿತ್ತುಉದ್ಧರಿಸೊ ಈಕೆಯನು | ಪ್ರದ್ಯುಮ್ನ ದೇವಾ 4 ಸರ್ವಜ್ಞ ಸರ್ವೇಶ | ನಿರ್ವಿಕಾರನೆ ದೇವಸರ್ವದ ತವನಾಮ | ಸ್ಮರಿಪ ಸುಖವಿತ್ತುದುರ್ವಿ ಭಾವ್ಯನೆ ದೇವ | ಅಸ್ವತಂತ್ರಳ ಕಾಯೊಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು