ಶೌರಿ ಪ
ನಂದವ ಸೇವಕ ಬೃಂದ ತೋರಿ ಅ.ಪ
ಕುಂದಮುಕುಳದಿಂದಾ ಕುಮುದ ಸುಗಂಧಿಯಗಳಿನಿಂದಾ
ಕೆಂದಾವರೆ ಶ್ಯಾವಂತಿಗೆ ಜಾಜಿಯಿಂದ ರಚಿಸಿ ಸೊಗ
ಸಿಂದಲಿ ಮೆರೆಯುವ 1
ಸ್ವಸ್ತಿಕಾದಿ ಬಹು ಚಿತ್ರದಿ ಶೋಭಿಪ 2
ಸೂರ್ಯ ಶಶಾಂಕ ಸುರೇಖೆಗಳಾ
ಶಂಖ ಚಕ್ರ ಬಿರುದಾಂಕಿತ ದಿವ್ಯ ವಿಟಂಕದಿಂದ ಬಲು
ಬಿಂಕದೊಳೆಸೆಯುವ3
ಕೋಟೆಯತೆನೆಗಳಲಿ ದಿವ್ಯವಧೂಟಿಯರೊಲವಿನಲಿ
ನಾಟಕ ರಚನೆಯ ಪಾಠಕರಂದದಿ ನೋಟಕರಿಗೆ ಬಹು
ದೀಟಿಯಲಿ ತೋರುವ 4
ಶಾರದಾಭ್ರನೀಲ ಶರೀರದಿ ಹೈರಣ್ಮಯ ಚೇಲಾ
ಹಾರಮಕುಟ ಕೇಯೂರ ಕಟಕಮಂ
ಜೀರಭೂಷಣೋದಾರ ವಿಹಾರ 5
ಮಂಗಳರವÀದೊಳಗೆ ಶಂಖ ಮೃದಂಗ ಧ್ವನಿಯೊಳಗೆ
ಸಂಗತ ಸುರವಾರಾಂಗನೆಯರು ಗಾನಂಗಳಿಂದ ನಾ
ಟ್ಯಂಗಳ ರಚಿಸಲು 6
ವರವಿಪ್ರರು ಪೊಗಳೆ ಛತ್ರಚಾಮರಗಳ ನೆಳಲೊಳಗೆ
ಪರಿಪರಿ ಜ್ಯೋತಿಗಳೆಸೆಯಲು ಪುಲಿಗಿರಿನ
ವರದವಿಠಲನು ವರಗಳ ಬೀರುತ 7