ಇಂದಿರೆಯೊಡನೆ ನಿಲಯಕೆ ಬಂದಾ ಪ
ಬೃಂದಾವನಾಂಚನನು ಶರ
ದಿಂದುವದನ ಮುನಿವೃಂದ ನುತಚರಿತ ಅ.ಪ
ಗಜ ತುರಗ ಪತಾಕ ತು
ತ್ತೂರಿ ವರ ಛತ್ರಿ ಚಾಮರ
ತಾಳ ಮೇಳ ಬಿರುದಾವಳಿ ಸಹಿತದಿ
ಪೌರಬೀದಿಯಲಿ ಮೆರೆಯುತ ಶೌರಿಯು 1
ಪಾರಿಜಾತ ಸುಜಾತ ಮಲ್ಲಿಕಾ
ಚಾರು ಮಾಲತೀಹಾರ ತುಳಸೀ
ಹಾರವನರ್ಪಿಸಿ ನೀರಜನಾಭನಿಗೆ
ನಾರಿಜನರು ಆರತಿಯನು ಬೆಳಗಿರೆ 2
ವೇದಘೋಷ ಜಯಘೋಷ ಜನರ ಸಂ
ತೋಷ ಧ್ವನಿಯು ತುಂಬಿತು ಗಗನ
ಯಾದವ ವಂಶ ಪ್ರಸನ್ನನು ಎಮ್ಮವ
ನಾದನಿಂದು ಹಿರಿದಾಯಿತು ಜನುಮವು 3