ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1 ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ 2 ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ 3 ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ4 ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ5
--------------
ಚಿದಾನಂದ ಅವಧೂತರು
ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು
ಇನ್ನೇನುಗತಿಎನಗೆಲೊ ಹರಿಯೆ |ನಿನ್ನನು ನೆನೆಯದೆ ಮೋಸಹೋದೆನಲ್ಲ ಪಅಂಕದೊಳಾಡುವ ಶಿಶುವಿನ ಮುದ್ದಿನ |ಬಿಂಕದ ನುಡಿಗಳ ಕೇಳುತಲಿ ||ಕಿಂಕಿಣಿಧ್ವನಿಯನು ಕಿವಿಗೊಟ್ಟು ಕೇಳುತ |ಮಂಕು ಹರಿಣನಂತೆ ಆದೆನಲ್ಲ 1ಪರವನಿತೆಯರ ಲಾವಣ್ಯಕೆ ಲೋಚನ |ಚರಿಸುತಲವರ ಕೂಟಕೆ ಬೆರಸಿ ||ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |ಎರಗಿದ ಪತಂಗದಂತಾದೆನಲ್ಲ 2ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |ಮಡದಿಯರಂಗಸಂಗವ ಮಾಡುತ ||ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|ಡಡಗಿದ ಮೂಷಕನಂತಾದೆನಲ್ಲ 3ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |ನಲಿದುಂಡು ಹೊಟ್ಟೆಯ ಹೊರೆಯುತಲಿ ||ಬಲೆಯ ತುದಿಯ ಮಾಂಸಕೆ ಬಂದೆರಗುತ |ಸಿಲುಕಿದ ವಿೂನಿ ನಂತಾದೆನಲ್ಲ 4ಲಂಪಟನಾಗಿ ನಾರಿಯರ ಮುಖಾಬ್ಜದ |ಸೊಂಪಿನ ಕಂಪನಾಘ್ರಾಣಿಸುತ ||ಸಂಪಿಗೆ ಹೂವಿನ ಮೇಲೆ ಮಲಗಿ ತನ್ನಸೊಂದಳಿದಳಿಯಂತೆ ನಾನಾದೆನಲ್ಲ 5ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆಮುಂತಾಗಿ ತಮ್ಮ ತಾವಲೆಯುತಿರೆ ||ಸಂತತ ತವತಮ ವಿಷಯಕೆ ಎಳಸಲುಕಾಂತಾರದರಸನಂತೆ ಆದೆನಲ್ಲ 6ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |ತಂದು ಪಂಚೇಂದ್ರಿಯಗಳಿಗೆನ್ನಯ ||ತಂದೆಪುರಂದರವಿಠಲನ ನೆನೆದರೆ |ಎಂದೆಂದಿಗೂ ಭವಬಂಧನ ಬಾರದಲ್ಲ 7
--------------
ಪುರಂದರದಾಸರು
ಊರ್ವಶಿ :ಸಿಂಧುಶಯನ ವನದಿಂದಇಂದಿರೇಶ ಮುದದಿಂದ ಮೌನಿಮುನಿ-ವೃಂದದಿಂದ ಸ್ತುತಿವಂದನೆಗೊಳ್ಳುತ 1ಏಸುಲೋಭಿಯೊ ತಿಮ್ಮಶೆಟ್ಟಿ ಒಂದುಕಾಸಿಗೆ ಮಾರುವ ರೊಟ್ಟಿದಾಸರ ಕೂಡಿ ಜಗಜಟ್ಟಿ ಬಹುದೇಶವ ತಿರುಗುವ ಶೆಟ್ಟಿದೂಷಣಾರಿ ಪಾದಾಶ್ರಿತಜನರಭಿ-ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ 2ದೊಡ್ಡವನೈ ಮಹಾರಾಯ ಹಳೆದುಡ್ಡಿಗೆ ನೀಡುವ ಕೈಯಅಡ್ಡಿಗೈದರೆ ಬಿಡನಯ್ಯ ಇವಬಡ್ಡಿಕೇಳುವ ತಿಮ್ಮಯ್ಯದಡ್ಡುಕೇಸಕ್ಕಿಯ ಮಡ್ಡಿಪ್ರಸಾದವಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ 3ತಿರುಪತಿಗೆ ಪ್ರತಿಯಾಗಿ ಪಡುತಿರುಪತಿಯೆಂದಿಹಯೋಗಿಮೆರಸುವನೈ ಸ್ಥಿರವಾಗಿ ಶ್ರೀವರವೆಂಕಟ ಲೇಸಾಗಿಶರಣರು ಏನೆಂದು ಸಂತೋಷಿಪಕರುಣಾಕರ ಚಪ್ಪರ ಶ್ರೀನಿವಾಸನು 4ಈ ಪರಿಯಲಿ ಒಲಿದಿಪ್ಪಾ ಬಹುವ್ಯಾಪಾರಿ ತಿಮ್ಮಪ್ಪಾಕಾಪಟ್ಯರಿಗೆ ತಾನೊಪ್ಪನಮ್ಮಗೋಪಾಲಕಜಗದಪ್ಪಶ್ರೀಪರಮಾತ್ಮ ನಾನಾಪರಿ ವಿಭವದಿಗೋಪುರದಲಿ ತಾ ವ್ಯಾಪಿಸಿ ನಿಂದನು 5ರಂಭೆ : ನಾರೀವರ್ಯಾರಮ್ಮ ನೋಡಲುಸಾರಹೃದಯರಮ್ಮತೋರಣಛತ್ರಚಾಮರ ಬಿರುದುಗಳಿಂದಭೂರಿವಿಭವದಿಂದ ಸಾರಿಬರುವರಮ್ಮ1ಕರದಿ ಕಲಶವಿಹುದು ಶಾಲಿನನಿರಿ ಮುಂದಿರುತಿಹುದುಬೆರಳಿನೊಳುಂಗುರುವರದ್ವಾದಶನಾಮಧರಿಸಿ ಸಮಂತ್ರೋಚ್ಚರಿಸುತ ಬರುವರು 2ಮಂದಿಗಳೊಡ್ಡಿನಲಿ ಬರುವರುಮಂದಸ್ಮಿತದಲಿಚಂದದಿ ಜನಗಳಸಂದಣಿಮಧ್ಯದಿಇಂದಿರೆಯರಸನ ಧ್ಯಾನದಿ ಬರುವರು 3ಹಿಂಗದೆ ಬರುತಿಲ್ಲಿ ಮನಸಿನಇಂಗಿತವರಿತಿಲ್ಲಿಬಂಗಾರದ ಭೂಷಣಸಮುದಾಯದಿಅಂಗಜಪಿತನಿಗೆ ಶೃಂಗಾರಗೈವರು 4ವಿಪ್ರೋತ್ತಮರ ಗುಣ-ಕೆಂತು ಸೈರಣೆಯಾಂತು ನಾನಿರಲಿಚಿಂತಿತಾರ್ಥವನೀವ ಲಕ್ಷ್ಮೀ-ಕಾಂತ ಶ್ರೀನಿವಾಸನಂಘ್ರಿಯಸಂತಸದಿ ಪೂಜಾದಿ ಸತತಿ-ಯಾಂತಕೊಂಡಿಹೇಕಾಂತಭಕ್ತರು 1ಒಂದು ಭಾಗ ಪುರಾಣಿಕರು ತಾವೆಂದುಕೀರ್ತಿಯನು ಧರಿಸಿ ಮ-ತ್ತೊಂದು ಭಾಗದಿ ಜೋಯಿಸರುತಾವೆಂದು ಧರ್ಮವನು ಪಾಲಿಸಿಸಿಂಧುಶಯನನ ಚಾರುಚರಣ-ದ್ವಂದ್ವಕಾನತರಾಗಿ ಲೋಕದಿವಂದ್ಯರೆನಿಸಿಯಾನಂದ ಪರರಿವ-ರೆಂದು ಶ್ರೀಗೋವಿಂದ ನಡೆಸುವ 2ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿವಾದಗೈವ ಕುವಾದಿಗಳ ಮನ-ಭೇದಿಸುತ ನಿಜವಾದ ಮಾರ್ಗವಶೋಧನೆಗೆ ತಾವೈದಿಸುವ ಮಹಾಸಾಧುಗಳಿಂದ ದೃಢವಾದ ಮಾತಿದು 3ಅಂಬುಜಾಕ್ಷಿಯೇನೆಂಬೆಮೇಗರೆಡಂಭಮಾತಲ್ಲ ಧನಿಯ ಕು-ಟುಂಬವೆನುತಲಿ ತುಂಬ ಕೀರ್ತಿಯಗೊಂಬರೆ ಎಲ್ಲ ಸಂತಸಸಂಭ್ರಮದಿ ವೇದ್ಯಾಂಬುನಿಧಿಯಲಿತುಂಬಿರುವರೀ ಕುಂಭಿನಿಯೊಳು ಜ-ಸಂಬಡುವುದು ವಾಸಿಷ್ಠಗೋತ್ರಜ-ರೆಂಬ ವಿಪ್ರಕದಂಬಪೂಜ್ಯರು 4ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆಆಲೋಚಿಸಲರಿದಾ ಕಮಲಾಲೋಲನಮಹಾಲೀಲೆ 2ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇಮೂರ್ಲೋಕದೊಳಗೆ ಇಂಥಲೀಲೆಯ ನಾನರಿಯೆ 3ಫಾಲೇಂದು ಕುಂದದ ವರ್ಣಕೋಲು ಚಾಮರಗಳನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು 4ಚಂಡವೈಶ್ವಾನರನ ತೇಜಾಖಂಡದಿಂದೋರಂತೆಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ 5ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿಆದಿನಾರಾಯಣ ಮದುಸೂದನನೆ ಮುದದಿ 6ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರುನಾದಿನಿ ಕೇಳಿದರ ಪರಿಯನೀ ದಯದಿಂದುಸುರು 7ದೇವನಾಗಮನವೆಲ್ಲನೂದೀವಟಿಗೆ ಸೇವೆಯೆಂದು ಪೇಳುವರುಭಾವುಕರು ಮನದೊಳಂದು 1ಕೇಳಿದರೆ ಆಲಸಾಯನವನು ಸುರಿದುಆಯತವನು ವರ್ಣಿಸುವಡೆ ಬಾಯಿಯುಸಾವಿರ ಸಾಲದುಶ್ರೀಯರಸನ ಮಹಿಮೆಯರಿವದಾರಿಗಳವಲ್ಲ 3ಜಯಜಯ ಭಕ್ತಸುಪೋಷಣ ಜಯಜಯದೈತ್ಯವಿನಾಶನಜಯಜಯ ಜಾಹ್ನವಿತಾತ ಜಯಜಯ ಜಗದಾತಜಯಜಯ ರವಿಶತತೇಜ ಜಯಜಯಆಶ್ರಿತ ಸುರಭೂಜಜಯಜಯ ನಾದದಿಯೇರ್ದ ನಿರ್ಭಯತೋರುತ ಒಲಿದು 4* * *ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ 1ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ 3ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ 4ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥಮೌರಿಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ 6ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ 7ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ 8ಚಿತ್ತೈಸಿದನಿಲ್ಲಿನಿತ್ಯಉತ್ಸಹಲೋಲ ನೋಡೆ ತಂಗಿ ಭಕ್ತ-ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ 9ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ 10ಯಾವಾಗಲು ಬರುವವನಲ್ಲ ಧನಿಯೆಂದುನೋಡೆ ತಂಗಿ ನಮ್ಮದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ 11ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12ಭೂರಿಕದಳಿಚೂತಪನಸ ಫಲಗಳನ್ನುನೋಡೆ ತಂಗಿ ಮಹಾ-ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ 13ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ 14ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ 15ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-ವೇಣುಸುಗಾನ ಸಂಗೀತ ಮನೋಹರ ನೋಡೆ ತಂಗಿ16ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ 17ಕಾಲುಂಗುರ ಗೆಜ್ಜೆಗಳಕಟ್ಟಿಕುಣಿವರು ನೋಡೆ ತಂಗಿ ತಮ್ಮಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ 18ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-ನಂತರದಲಿ ಆರತಿಯನುಗೊಂಡನು ನೋಡೆ ತಂಗಿ 19ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ 20ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದುನೋಡೆ ತಂಗಿ ಮಹಾ-ಸಾಧುಗಳತ್ತಲು ಕಾದುಕೊಂಡಿರುವರು ನೋಡೆ ತಂಗಿ 21ಚರಣನಂಬಿದ ತನ್ನ ಶರಣರ ಪೊರೆಯೆಂದುನೋಡೆ ತಂಗಿ ತಾನುತ್ವರಿತದಿ ಬಂದನು ಉರುತರ ತೋಷದಿ ನೋಡೆ ತಂಗಿ 22ಮನೆಮನೆಗಳ ಸಮ್ಮುಖದಲ್ಲಿ ದೀಪವ ನೋಡೆ ತಂಗಿ ಎಲ್ಲಾಜನಗಳು ಕೈಗಳ ಮುಗಿದು ನಿಂದಿರುವರು ನೋಡೆ ತಂಗಿ 23ರಾಜ ಬೀದಿಯೊಳು ವಿರಾಜಿಪ ತೋರಣನೋಡೆ ತಂಗಿ ಸುರ-ಭೂಜದಂತಿಹ ಮಹಾಸೋಜಿಗಕುರುಜವ ನೋಡೆ ತಂಗಿ24ಕಂತುಜನಕನಿಲ್ಲಿ ನಿಂತು ಪೂಜೆಯಗೊಂಡನೋಡೆ ತಂಗಿ ತದ-ನಂತರದಲಿ ಮನಸಂತೋಷಪಡಿಸಿದ ನೋಡೆ ತಂಗಿ 25ಮುಂದೆ ಬರುವ ಜನಸಂದಣಿಗಳ ಮಧ್ಯ ನೋಡೆ ತಂಗಿ ಇ-ನ್ನೊಂದು ಗೂಡಿನ ಪರಿಯಂದವ ನೀನಿತ್ತ ನೋಡೆ ತಂಗಿ 26ಮಾಣಿಕ್ಯರಾಸಿಯಮಾಣದೆಇಟ್ಟರೊ ನೋಡೆ ತಂಗಿ ಸರಿ-ಗಾಣೆ ಈ ಗುಡಿಗೆ ಜಾಣೆ ನೀ ಮನವಿಟ್ಟು ನೋಡೆ ತಂಗಿ 27ಮೂಡಿತೊ ಸೂರ್ಯನ ಕಿರಣಗಳೆಂಬಂತೆನೋಡೆ ತಂಗಿ ಇಂಥಗೂಡಿನೊಳಗೆ ದಯಮಾಡಿ ಸೇವೆಯಗೊಂಡ ನೋಡೆ ತಂಗಿ28ತರುಣಿಯರನ್ನಳೆಯಿತ್ತ ಶರಧಿಯಂತುಕ್ಕುತನೋಡೆ ತಂಗಿ ಭೂರಿ-ಹರುಷದಿಂ ಬರುವ ಭಕ್ತರನೇಕರು ನೋಡೆ ತಂಗಿ 29ಹರಿಯೇ ನೀ ಎಮ್ಮಯ ಪೊರೆಯೆಂದು ಭಕ್ತಿಯೊಳ್ನೋಡೆ ತಂಗಿ ಬಂದುಚರಣಕಾನತರಾಗಿ ಅರಿಕೆಯ ಗೈವರು ನೋಡೆ ತಂಗಿ 30ಮಕ್ಕಳನರಸಿ ಮಾತೆಯು ಪೋಗುವಂದದಿನೋಡೆ ತಂಗಿ ಮಹಾ-ರಕ್ಕಸವೈರಿಯು ದಯಮಾಡಿ ಪೊರಟನು ನೋಡೆ ತಂಗಿ 31ಪರಮಪುರುಷ ಭೂರಿವಿಭವದಿ ಬರುವುದನೋಡೆ ತಂಗಿ ಬಾಣಬಿರುಸುಗಳೆಲ್ಲವು ಸುರುಸುರುಯೆಂಬುದು ನೋಡೆ ತಂಗಿ 32ಫಲ್ಲನೆ ಹೊಳೆಯುವ ಹಿಮಕರಜ್ಯೋತಿಯನೋಡೆ ತಂಗಿ ಮನಘಲ್ಲೆನಿಸುತ್ತಿಹ ಬೆಡಿಖಂಬಧ್ವನಿಯನು ನೋಡೆ ತಂಗಿ 33ಭುಗಿಲು ಭುಗಿಲು ಧಗಧಗಲೆನ್ನುತಲಿದೆ ನೋಡೆ ತಂಗಿ ಕಿ-ಡಿಗಳನುಗುಳುವ ವಸನಪ್ರಕಾಶವ ನೋಡೆ ತಂಗಿ 34ಈ ರೀತಿಯ ವಿಭವದಿ ಏರಿದ ಮೇರ್ವೆಯ ನೋಡೆ ತಂಗಿ ರತ್ನ-ದಾರತಿಯಗೊಂಡನು ಶ್ರೀನಿವಾಸನು ನೋಡೆ ತಂಗಿ 35ಲೋಕದೊಳಗೆ ನೂತನವಿದೊಂದನು ನೋಡೆ ತಂಗಿ ಅ-ನೇಕ ಮಕ್ಕಳುಗಳ ನೇತಾಡಿಸುವದ ನೋಡೆ ತಂಗಿ 36ಪುತ್ರೋತ್ಸವ ಫಲಗಳು ದೊರಕಿದ ಕಾರಣ ನೋಡೆ ತಂಗಿ ಇದು-ಪುತ್ರ ಫಲಾವಳಿ ಹರಕೆಯಂಬರು ಕಾಣೆ ನೋಡೆ ತಂಗಿ 37ಇಳಿದನು ಇಂದಿರೆಯರಸನು ಮೇರ್ವೆಯ ನೋಡೆ ತಂಗಿ ರಥ-ದೊಳಗಿದ್ದ ಪರತತ್ವರೂಪನು ಸಹಿತಲಿ ನೋಡೆ ತಂಗಿ 38ಮಾಣದೆಭಕ್ತರ ಮಮತೆಯ ಕಾರಣ ನೋಡೆ ತಂಗಿ ಮುಖ್ಯ-ಪ್ರಾಣರಲ್ಲಿಗೆ ಪೋದರಿಬ್ಬರು ಒಂದಾಗಿ ನೋಡೆ ತಂಗಿ 39ಅವರಿವರಂತಲ್ಲ ದೊರೆ ಹನುಮಂತನು ನೋಡೆ ತಂಗಿ ಪಟ್ಟ-ದರಸನ ಸಹಿತಿಲ್ಲಿ ಇಳಿಸಿದನಲ್ಲವೆ ನೋಡೆ ತಂಗಿ 40ಹನುಮನ ಸೇವೆಯ ಕೈಕೊಂಡು ಕರುಣದಿನೋಡೆ ತಂಗಿ ಮತಘನವಾದ ಶೇಷತೀರ್ಥವ ನೋಡಿ ಬಂದನು ನೋಡೆ ತಂಗಿ41* * *ಬಂದನು ತ್ರೈಜಗದೀಶ ನಡೆ-ತಂದನು ರವಿಕೋಟಿಭಾಸ ಸರ್ವೇಶ ಪ.ಪಲ್ಲಂಕಿಯಲಿ ತಾನೇರಿ ಭಕ್ತ-ಸುಲ್ಲಭ ಸುತ್ತುಬರುವನೆಲೆ ನಾರಿಸಲ್ಲಲಿತಾರ್ಥ ಋಗ್ವೇದ್ಯಜುರ್ವೇದವ-ನೆಲ್ಲವ ಲಾಲಿಸಿ ಉಲ್ಲಾಸದೊಳಗೆ 1ಸಂಗೀತನರ್ತನಗಳನು ಪೂರ್ಣ-ಮಂಗಲಕರ ವೀಣಾವೇಣುಗಾನವನುಶೃಂಗಾರ ಪದ್ಮಮೃದಂಗ ಸರ್ವಾದ್ಯಪ್ರ-ಸಂಗದಿ ಒಲಿಯುತಗಜನಕನು 2ಕಪಟನಾಟಕಸೂತ್ರಧಾರಿ ಸರೀ-ಸೃಪಗಿರಿರಾಜ ದಾನವಕುಲವೈರಿಅಪರೂಪವಾದ ಮಂಟಪದಲಿ ಮಂಡಿಸಿಕೃಪೆಯ ಬೀರಿದನು ಸೇವಿಪ ಭಕ್ತರಿಂಗೆ 3ಭಕುತರಾಯಾಸವನೆಲ್ಲ ತನಶಕುತಿಯಿಂದಲಿ ಬಿಡಿಸಿದನದನ್ನೆಲ್ಲಅಖಿಳಭಯಗಳ ನಿವಾರಿಸಿ ತೆಗೆಯುತ್ತಮುಕುತಿದಾಯಕನು ಗೃಹಾಂತರಕ್ಕೈದಿದನು 4ಇಂದ್ರಾದಿ ದೇವತೆಯರನು ಅರ್ಧ-ಚಂದ್ರಶೇಖರಪ್ರಮಥಾದಿ ಗಣವನುಇಂದುಗೋವಿಂದನು ಚಂದದಿ ಸಂತುಷ್ಟಿ-ಹೊಂದಿಸಿ ಸರ್ವಾನಂದವ ತೋರ್ದನು 5ಆದ್ಯಂತ ಭಕ್ತರ ನೋಡಿ ಶ್ರೀಪ್ರ-ಸಾದವ ನೀಡಿ ಭಕ್ತರ ಒಡನಾಡಿಮುದ್ದುಮೋಹದ ಮಡದಿಯರ ಸಮೇತದಿಗದ್ದುಗೆಯಲಿ ಸಾನ್ನಿಧ್ಯ ತೋರಿದ ಕಾಣೆ 6ಈ ರೀತಿಯಲಿ ಶ್ರೀಹರಿಯು ನಾನಾಭೂರಿವಿಭವದ ಶೃಂಗಾರ ಶೋಭಿತವುನೀರೆ ಪಂಚಮಿ ಶುಭವಾರದ ದಿವಸದಸಾರಉತ್ಸಹ ಪೂರ್ಣ ತೋರಿಸಿ ಪೊರೆದನು7ಆರತಿಯನು ಎತ್ತಿದಳು ಜಯ-ಭೇರಿರವದಿ ಆಕಾಶನ ಮಗಳುವಾರಿಧಿಶಯನ ಮುರಾರಿ ಶ್ರೀಲಕ್ಷ್ಮೀ-ನಾರಾಯಣನ ಸಾಕಾರವನ್ನು ನೋಡಿ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ