ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |ಬಿದ್ದು ನಾ ಬೇಡಿಕೊಂಬೆ ಪನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |ಎಳೆಯದಿರೊ ಸುಮ್ಮನೆ ||ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1ನಿರುಗೆಯ ಪಿಡಿಯದಿರೊ - ಕಾಂಚಿಯದಾಮ|ಕಿರುಗಂಟೆ ಧ್ವನಿಗೆಯ್ಯದೆ? ||ಕಿರುದುಟಿಗಳ ನೀನು ಸವಿದು ಚಪ್ಪರಿಸಲು |ತರವಲ್ಲಗಂಡಮತ್ಸರವ ತಾಳುವನಲ್ಲ2ನಾಡ ಮಾತುಗಳೇತಕೊ - ಸಂಗೀತವ |ಪಾಡುವ ಸಮಯವೇನೊ ||ಗಾಡಿಕಾರಶ್ರೀ ಪುರಂದರವಿಠಲನೆ |ಪಾಡು ಪಂಥಗಳೆ ಒಡಗೂಡುವ ಸಮಯದಿ 3
--------------
ಪುರಂದರದಾಸರು