ಕನಸು ಕಂಡೆನು ನಾನು ಸಂತೋಷದಿ|
ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ
ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ
ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ
ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ
ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ
ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1
ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ
ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ
ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ
ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2
ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ
ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ
ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ
ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3
ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ
ಚಿನ್ಮಯನ ರೂಪವನು ಚಿಂತಿಸಿದ ಹಾಗೆ
ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ
ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4
ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ
ಯಡಬಲದಿ ಜಯು ವಿಜಯ ನಿಂತಿರೋಹಾಗೆ
ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ
ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5