(ಕಾವೇರಿ ಪ್ರಾರ್ಥನೆ)
ಕಾವೇರಿ ಕಲುಷಹರಿ ಭುವನ ಪಾವನ ನಾರಿ
ಶ್ರೀವರನ ಕೃಪೆ ದೋರಿ ಕಾವುದಕಾಗುವಿ ಸ್ವಾರಿ ಪ.
ತಾಪಗಳೆಲ್ಲವ ತರಿವಾ ಶ್ರೀಪತಿಪಾದಾಶ್ರಯವಾ
ಯೀ ಪರಿಯಿಂದೊದಗಿಸುವ ಲೋಪಾಮುದ್ರೆಯೆನಿಸುವಾ 1
ಮನಸಿಜನಯ್ಯನ ಕಥೆಯು ಮನೆಯಲಿ ಸಾಂಗದೊಳಿಂದು
ಅನುಕೃತವಾಗುವುದೆಂದು ಕನಸಿಲಿ ತೋರಿದಿ ಬಂದು 2
ದಕ್ಷಿಣ ಗಂಗೆಯ ನೋಡಿದಾಕ್ಷಣ ಕಷ್ಟವ ದೂಡಿ
ಪಕ್ಷಿವರ ಧ್ವಜಯನ್ನಾಪೇಕ್ಷೆಯ ನೀಡಿದ ಮುನ್ನ 3
ಕಲಿಮಲಕಾಲನ ಹರಿಯ ಒಲುಮೆಯ ತಾಳಿದ ಪರಿಯ
ಕರ ಕರಿಯ 4
ತಪ್ಪುಗಳೆಲ್ಲವ ಕ್ಷಮಿಸಿ ಒಪ್ಪುವುದುತ್ತಮಕರಸಿ
ಸರ್ಪಗಿರೀಂದ್ರನ ಕರುಣಾ ತಪ್ಪು ಮನ್ನಿಸು ಶರಣಾ 5