ದೇವಾ ದೇವಾ ಸಾರಂಗ ಪಾಣಿ
ದೇವಾ ದೇವಾ ಸಾರಂಗ ಪಾಣೀ ಪ
ದೇವ ದೇವ ಘನ ಶ್ರೀ ವಧುವಲ್ಲಭ
ಸಾವಿರ ನಾಮದ ಪಾವನ ರೂಪಾ 1
ಭುವನವ ಪಿಡಿದೊಯ್ದನುಜನ ಹರಿ
ಪವನಜ ಪ್ರೀಯಾ2
ಕುಂಜರ ಧ್ವಜಜನ ರಂಜಿಪ ಕದಲಿಗೆ
ಅಂಜಿಕೆ ಹಾರಿಪ ಕುಂಜದ ಕರನೇ 3
ಸುಮನದಿ ಧರೆಯೊಳು ನಮನ ಕೃತಕ ಭಯ
ಗಮನ ಸುರೇಶಾ4
ವಿಧಿ ತ್ರಿಪುರ
ವಿನುತ ಪದ ಮಿಥುನದಯಾಳಾ5
ಹರಿಯೆಂದೊದರಲು ಸರಿಯಾದಿಗಳಿಗೆ
ಅರಿಯ ದಂದದಿ ಬಂದು ಕರಿಯನು ಕಾಯ್ದೆ6
ನಂದನ ನಂದನ ಮಂದರಗಿರಿಧರಾ
ನಂದನೆ ಮಹಿಪತಿ ನಂದನ ಪ್ರೀಯಾ||7