ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನೆತ್ತಿರೆ ನಾರೇರೆಲ್ಲರು ಪ ಕಾರುಣ್ಯ ಪಾಂಗಳಿಗೆ ಗೌರಿದೇವಿಗೆಅ.ಪ. ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ ಜೀವಕೋಟಿಗನ್ನವಿತ್ತು ಕಾವ ದೇವಿಗೆ 1 ಸರ್ವ ಸೌಭಾಗ್ಯವೀವ ಶರ್ವಜಾಯೆಗೆ ಪರ್ವತೇಶ ತನಯಳಿಗೆ ಗರ್ವರಹಿತೆಗೆ 2 ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ 3
--------------
ಲಕ್ಷ್ಮೀನಾರಯಣರಾಯರು
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಧ್ರುವ ಕರುಣಾನಂದಗುಣ ಶರಣ ಸಂರಕ್ಷಣಿ ದುರಿತ ವಿಧ್ವಂಸಿನಿ 1 ಘನಸುಖದಾಯಿಣಿ ದೀನ ಉದ್ಧಾರಣಿ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ 2 ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾವನಿ ನಿರಂಜನಿ ಪಾವನಿ ಧ್ರುವ ಆದಿನಾರಾಯಣಿ ಸಾಧುಜನವಂದಿನಿ ಸದಾನಂದರೂಪಿಣಿ ಸದ್ಗತಿ ಸುಖದಾಯಿಣಿ 1 ಲಕ್ಷುಮಿ ರೂಪಿಣಿ ಸಾಕ್ಷಾತ್ಕಾರಿಣಿ ರಕ್ಷರಕ್ಷಾತ್ಮಿಣಿ ಅಕ್ಷಯಪದದಾಯಿಣಿ 2 ಅನಾಥರಕ್ಷಿಣಿ ದೀನೋದ್ದಾರಿನೀ ಅನಂತಾನಂತಗುಣಿ ಮುನಿಜನ ಭೂಷಣಿ 3 ದಾರಿದ್ರ್ಯಭಂಜನಿ ದುರಿತವಿಧ್ವಂಸಿನಿ ಪರಮಸಂಜೀವಿನಿ ಸುರಮುನಿರಂಜನಿ 4 ಸ್ವಾಮಿ ಶ್ರೀ ಗುರುವಿಣೆ ಬ್ರಹ್ಮಾನಂದ ರೂಪಿಣಿ ಮಹಿಪತಿಕುಲಸ್ವಾಮಿಣಿ ನೀನೆ ಪರಮಪಾವನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು