ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜನೆ ಶ್ರೀ ರಾಮ ಭಜನೆ ಆಮ್ನಾಯ ವಿಸ್ತರ | ಭೂಮಾ ಗುಣಾರ್ಣವಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಪ ಶ್ರೀಶನೇ ವಿಭುದೇಶನೇ ||ಅಸುರಿ ವೃಷಹರ | ಶೇಷಾದ್ರಿ ಮಂದಿರಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಅ.ಪ. ಪೃಥ್ವಿಧರಾಧರ | ಸತ್ಯ ಮನೋಹರಭಕ್ತಾರ್ತಿ ಪರಿಹರ | ರಾಮ್ ರಾಮ್ ರಾಮ್‍ನಿತ್ಯನೇ ನಿರ್ಲಿಪ್ತನೇ ||ಶಕ್ತ್ಯಾದಿ ರೂಪಧರ | ಆಪ್ತರೊಳಗೆ ವರಭೃತ್ಯರ್ಗ ಭೀಷ್ವದ | ರಾಮ್ ರಾಮ್ ರಾಮ್ 1 ದಾನವ ಧ್ವಂಸನೆ | ಆನಂದ ಪೂರ್ಣನೆಆನಂದ ಮುನಿನುತ | ರಾಮ್ ರಾಮ್ ರಾಮ್‍ಶ್ರೀ ನಿಧೇ ಕರುಣಾಂಬುಧೇ ||ಮಾನುನಿ ವರದನೆ | ಮೌನಿಯ ಕಾಯ್ದನೆe್ಞÁನ ಸುಗಮ್ಯನೆ | ರಾಮ್ ರಾಮ್ ರಾಮ್ 2 ಈಶಾಹಿ ವಂದ್ಯನೆ | ವಾಸಿಷ್ಠ ಕೃಷ್ಣನೆವಸುದೇವ ತನಯನೆ | ರಾಮ್ ರಾಮ್ ರಾಮ್‍ಈಶನೇ ವರದೇಶನೇ ||ದಶಾಸ್ಯ ಕುಲವನ | ಕೃಶಾನು ಎನಿಪನೆದಾಶರಥಿüಯೆ ಪಾಹಿ | ರಾಮ್ ರಾಮ್ ರಾಮ್ 3 ಕಾಯ ಸೂರ್ಯ ವೀರ್ಯದಾತಪ್ರೇರ್ಯ ಪ್ರೇರಕ ಪಾಹಿ | ರಾಮ್ ರಾಮ್ ರಾಮ್ 4 ನೀರದ ನಿಭಕಾಯ | ವಾರಿಜಾಕ್ಷಿಗೆ ಪ್ರಿಯನಾರಿ ಚೋರಾರಿಯೆ | ರಾಮ್ ರಾಮ್ ರಾಮ್‍ಧೀರನೆ ಗಂಭೀರನೇ ||ಮೂರು ಲೋಕಗಳಲ್ಲಿ | ಆರುಂಟು ನಿನ್ನ ಸರಿಕಾರುಣ್ಯ ಮೂರುತಿ | ರಾಮ್ ರಾಮ್ ರಾಮ್5 ಪತಿ | ನಂಬೀದ ಭಕ್ತರಬೆಂಬಿಡದಲೆ ಕಾವ | ರಾಮ್ ರಾಮ್ ರಾಮ್ 6 ಜಗ ಪ್ರಾಣನೊಳಗೆ ಇದ್ದು | ಜಗವನ್ನು ಸೃಜಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್‍ಪ್ರಾಣನೇ ಜಗತ್ತ್ರಾಣನೇ ||ಅಗಜೆ ಪತಿಯೊಳಿದ್ದು | ಜಗವೆಲ್ಲ ಲಯಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್ 7 ಪ್ರಾಣನೀತಾನುಜ | ಪ್ರಾಣದಾತೃ ಹರಿಪ್ರಾಣಂಗೆ ಪ್ರಾಣನೆ | ರಾಮ್ ರಾಮ್ ರಾಮ್‍ಪ್ರಾಣನಾ ಆಲಿಗಂನಾ ||ನೀನಾಗಿ ಮಾಡಿ ಅವಗೆ | ಸಾಷ್ರ್ಣಿ ಮುಕ್ತಿಯನಿತ್ತೆಕಾಣೆ ಕಾರುಣ್ಯ ಕೆಣೆ | ರಾಮ್ ರಾಮ್ ರಾಮ್ 8 ಅಂಜನಿ ಸುತನಾಗಿ | ಕಂಜಸಖನಿಗ್ಹಾರ್ದಸಂಜೀವ ಧರ ಧರ | ರಾಮ್ ರಾಮ್ ರಾಮ್‍ದೈತ್ಯನಾ ಪ್ರಭಂಜನಾ ||ಸಂಜೆಯ ಚರರನು | ಭಂಜಿಸಿ ಅರ್ಪಿಸಿದಸಂಜೀವರಾಯ ಪಿತ | ರಾಮ್ ರಾಮ್ ರಾಮ್ 9 ಪತಿ | ಪದ್ಮಾಸನನ ಪಿತಪದ್ಮನಾಭನೆ ಪಾಹಿ | ರಾಮ್ ರಾಮ್ ರಾಮ್‍ರುದ್ಧನೇ ಅನಿರುದ್ಧನೇ ||ಮುದ್ದಿನ ಮೊಗದವ | ಗೆದ್ದು ಕುಜನ ತತಿಸದ್ಮದೊಳಗೆ ತೋರೊ | ರಾಮ್ ರಾಮ್ ರಾಮ್ 9 ಇಂದಿರೆ ರಮಣನೆ | ಚಂದಿರ ವದನನೆಮಂದರೋದ್ಧಾರಿಯೆ | ರಾಮ್ ರಾಮ್ ರಾಮ್‍ಸುಂದರಾ ಬಹು ಸುಂದರಾ ||ಕಂದರ್ಪ ಕೋಟಿ ಬಹು | ಸುಂದರ ಗುರು ಗೋ-ವಿಂದ ವಿಠಲ ಪಾಹಿ | ರಾಮ್ ರಾಮ್ ರಾಮ್10
--------------
ಗುರುಗೋವಿಂದವಿಠಲರು
ಶ್ರೀ ವಾದಿರಾಜರು ಗುರುವರ ದಯಮಾಡೈ ಹಯಮುಖ ಪದಯುಗ ನಿಜ ಭಕ್ತಾಗ್ರಣೀ ಪ ಚರಣವ ನಂಬಿದೆ ಮುಂದಿನ ಪರಿಸರ ಸರಸರ ಸುರಿಸುತ ವರಗಳ ಕರುಣದಿ ಅ.ಪ ನಿನ್ನನೆ ನಂಬಿದ ಅನ್ಯರವಲ್ಲದ ಚಿಣ್ಣರ ಬಿಡುವರೆ ಘನ್ನಗುಣಾರ್ಣವ ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ ಚಿನ್ಮಯ ನಂದನ ಅನ್ಯರ ಪೋಷಕನೆ 1 ದಾಸರ ದೋಷವಿನಾಶಗೈವುದು ಕ್ಲೇಶವ ಭಾವೀಶ್ವಾಸ ನಿಯಾಮಕಗೆ ವಾಸವ ಗುರುಶಿವ ಶೇಷಸುವಂದಿತ ವಾಸಿಸಿ ಹೃದಯದಿ ಭಾಸಿಸು ಹರಿದಾರಿ 2 ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು ಮಾತೆಯ ತೆರಮುರವ್ರಾತವ ನೋಡದೆ ನಾಥನೆ ನೀಡಿಸು ಆತ್ಮವಿಕಾಸವನು 3 ವಿe್ಞÁನಾಸಿಯ ದಾನವ ಗೈಯುತ ದೀನನ ಮೌಢ್ಯದಿ ಶೂನ್ಯವಗೈಯುತ ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ ಆe್ಞÁಧಾರಕ ನಿನ್ನ ಜನುಮ ಜನುಮದಲಿ4 ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ ಸಾದರದಿಂ ಕೊಡು ಕಾಮಿತ ಕೊಡುವವನೆ5 ಹಿರಿಯರ ಕರುಣದಿ ಕಿರಿಯರ ಸಾಧನೆ ಶರಣನ ಭಾರವು ಸೇರಿದೆ ನಿಮ್ಮಡಿ ಹರಣವ ವಪ್ಪಿಸಿ ಚರಣವ ಪಿಡಿದಿಹೆ ಪೊರೆಯೈ ಮನತರ ಕುರುಡನು ನಾನಿಹೆ 6 ಮಿಥ್ಯಾಮತ ವಿಧ್ವಂಸನೆ ಗೈಯುವ ಸದ್ಗ್ರಂಥಂಗಳದಾತನೆ ಬಾಗುವೆನು ಪಾರ್ಥನಸಖ “ಶ್ರೀಕೃಷ್ಣವಿಠಲ”ನ ಭಕ್ತಿತರಂಗವ ನೀಡುತ ಕಾಯುತ 7
--------------
ಕೃಷ್ಣವಿಠಲದಾಸರು