ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಗುರುವೆ ಬೆಳಗಾಯಿತು ಏಳಯ್ಯ ಗುರುರಾಯ ಏಳಯ್ಯ ಶುಭಕಾಯ ಏಳು ಮಹರಾಯ ಏಳು ಎನ ಜೀಯಾ ಪ ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ ಅ.ಪ ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು ಸದಮಲ ಬುಧರೆಲ್ಲ ಮುದದಿಂದಲೀ ಎದ್ದು ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ ಪಾದ - ಸಂದರುಶನಕೆ ಬಂದಿಹರೋ 1 ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು ಚಿತ್ತ ಶುದ್ಧಿಯಲಿಂದ ಉತ್ತುಮಾರ್ಹಣೆಗಳಾ ತಮ್ಮ ನೆತ್ತಿಯಿಂದಾ ಪೊತ್ತು ಜತ್ತಾಯುತಾಗಿ ನಿಂತಿಹರೋ ಉತ್ತಮಾ ನಿನ ನಿದ್ರೆ ಹೊತ್ತು ಮೀರ್ಯಾಯಿತೊ ಪಾದ ಒತ್ತಿ ಬೋಧಿಸುತಿಹರೋ ಚಿತ್ತಕ್ಕೆ ತಂದು ತ್ವರಿತದಿ ಏಳೋ 2 ವಿಮತಾದ್ರಿ ಕುಲಿಶನೇ ವಿಮಲ ಗಾತ್ರನೇ ಏಳೋ ದಾತ ದಿವಿಜದೃಮನೆ ವಾರಿಧಿ ಎಳೋ ತಾಮರಸಾಂಬಕನೆ ಏಳೋ ಆಮಯ ಧ್ವಂಸಕÀ ನೀನೇಳೋ ಗೋಮತೀ ಕುಮುದ ಸೋಮ ಸಾಂದ್ರನೆ ಏಳೋ - ಶ್ರೀ ಪಾದ ಭೃಂಗನೇ ಏಳೋ ಯಾಮ ಮೀರಿತು ವಿಶ್ವನಿಯಾಮಕ ದೂತನೇ ಸಾಮಗಾಯನ ಲೋಲ ರಮಾ ವಲ್ಲಭಪ್ರೀಯ ಗುರುರಾಜವರ್ಯ 3 ಮೌನಿ ಕುಲರನ್ನ ಮಾನ ನಿಧಿಯೇ ಎನ್ನ ಬಿನ್ನಪವ ಕೇಳಯ್ಯ ಜೀಯಾ ನಿನ್ನ ಭೋಧಿಪಕನ್ಯ ಜನರುಂಟೆ ನಿನ್ನಿಂದ ನೀ ಚನ್ನಾಗಿ ಏಳೋ ಮುನೆÀ್ನ ಮಹ ಕಾರ್ಯಂಗಳೂ ಘನ್ನವಾಗಿರುತಿಹವು ನಿನ್ಹೊರತು ಇನ್ನಾರು ಮಾಳ್ಪರು ಎನ್ನ ನುಡಿ ಈಗ ಚನ್ನಾಗಿ ಮನದಿ ತಂದು ಮನ್ನಿಸೀ ಪೊರೆಯೊ ಧ್ವರಿಯೇ 4 ಸೋತು ಮಲಗಿದೆಯಾ ಪಾತಕಾಂಬುಧಿ ಪೋತನೇ ಮಾತರಿಶ್ವನ ತಾತ ಪಾದ ಭವ ಯುಗ್ಮದಲಿ ಸಂ - ಜಾತವಾಗಿಹ ಸುಧಾ - ಪೀತ ಕಾರಣ ಮದಾ ಸಂ - ಭೂತದಿಂದ ಮಲಗಿದೆಯಾ ಭೂತನಾಥನ ಗುರು ಜಗ - ನ್ನಾಥ ವಿಠಲನ ದೂತ ನಾನೆಂಬ ಗರುವಿಂದ ಮಲಗಿದೆಯಾ 5
--------------
ಗುರುಜಗನ್ನಾಥದಾಸರು