ಒಟ್ಟು 105 ಕಡೆಗಳಲ್ಲಿ , 40 ದಾಸರು , 102 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ. ಶ್ರೀಹರಿಯ ಸ್ತುತಿ ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ಪ ಅಮಂಗಳಗಳ ನೀಡುವೋ ಪರಮನೀಚ ಅಂಗನಿಯಳಿಗೆ ಅ.ಪ. ಮಂಗಳಾತ್ಮಜ ನಿನ್ನ ಅನುಗಾಲ ಕಂಗಳಿಂದಲಿ ನೋಡಿ ಸುಖಿಸುವೋಡಿಂಗನಾ ಭಂಗಪಡಿಸುತಿಹಳಿ 1 ಪರಮ ಅದ್ಭುತ ಮೂಗುತಿಯೆ ನಿನ್ನ ಅದ್ಭುತ-ಚರಿಯವ ತೋರು ಭೂತನಾಥಾ 2 ಭಕ್ತವತ್ಸಲನೆಂಬ ಬಿರುದು ಬೇಕಾದರೆ ನಂಬಿದ ಭಕುತರನು ಪಾಲಿಸಿ ಬಿರುದು ಪಡಿಯೋ 3 ಶಕುತಿ ಇಲ್ಲದ ಕಾರಣದಿ ವಿಷಕೂಪದೊಳು ಬಿದ್ದು ಘನ ಪಾಪಕೊಳಗಾದೆನೋ ವಿಷಕಂಠನೇ 4 ಹಂಸರೂಢನಾದ ದಾಸ ನಿನ್ನ ದಾಸರನು ಕ್ಲೇಶಪಡಿಸುವರ ಧ್ವಂಸಗೈಯೋ ತಂದೆವರದಗೋಪಾಲನಭಜಕಾ 5
--------------
ತಂದೆವರದಗೋಪಾಲವಿಠಲರು
ಆಪದ್ಭಾಂಧವ ವಿಠಲ | ಕಾಪಾಡೊ ಇವಳಾ ಪ ಶ್ರೀಪತಿ ಶೀರಂಗ ಸ | ಮೀಪಗನೆ ಹರಿಯೇ ಅ.ಪ. ದುರಿತ ರಾಶಿಗಳಳಿದು | ಹರಿನಾಮ ಸುಧೆ ಸವಿಯೆವರಮಾರ್ಗ ತೋರಿ ಪೊರೆ | ಶ್ರೀದ ನರಹರಿಯೇ |ತರುಣಿಮಣಿ ಹರಿದಾಸ್ಯ | ನೆರೆಸುಕಾಂಕ್ಷಿಸಲಾಗಿವಿರಚಿಸಿಹೆ ಉಪದೇಶ | ಪರಿಪಾಲಿಸಿವಳಾ 1 ತಾರತಮ್ಯಾಂತರದಿ | ಹರಿಯ ಉತ್ಕರ್ಷತ್ವಸುರಸಾದಿ ಸುರರೆಲ್ಲ | ಹರಿದಾಸರೆಂಬಾ |ಎರಡು ಮೂರ್ಭೇದ ಸಹ | ವರ ಜಗದ ಸತ್ಯತೆಯಅರುಹಿ ಪಾಲಿಸು ಇವಳ | ಕರಿವರದ ಹರಿಯೇ2 ಸೀಮೆ ಮೀರಿದ ಮಹಿಮ | ಭೂಮ ಗುಣ ಸಂಪೂರ್ಣಕಾಮಾರಿ ಸಖಕೃಷ್ಣ | ಕಾಮಿತಾರ್ಥದನೇನೇಮ ನಿಷ್ಠೆಗಳಿತ್ತು | ಸಾಧನಗಳಳವಡಿಸಿಕಾಮಿನಿಯ ಪೊರೆಯೊ ಹರಿ ಸ್ವಾಮಿ ಭೂವರಹಾ 3 ಜಲಜಾಕ್ಷನಮಲ ಗುಣ | ತಿಳಿಯಲ್ಕೆ ಸಾಧನವುಕಲಿಯುಗದಿ ಸತ್ಸಂಗಾ | ಬಲ ಉಳ್ಳದೋಹಲವು ಮಾತೇಕೆ ನಿನ್ನ | ಮಲಗುಣ ನಾಮಗಳತಿಳಿಸಿ ಪೊರೆ ಇವಳನ್ನು | ಕಲಿಮಲಧ್ವಂಸೀ 4 ಪಾವ ಮಾನಿಯ ಪ್ರೀಯ ದೇವ ದೇವೋತ್ತಮನೆಭಾವುಕಳ ಪೊರೆಯಲ್ಕೆ | ತೀವ್ರ ಭಿನ್ನವಿಪೇಕಾವ ಕರುಣಾಳು ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋ5
--------------
ಗುರುಗೋವಿಂದವಿಠಲರು
ಆರತಿಯನೆತ್ತಿರೆ ನಾರೇರೆಲ್ಲರು ಪ ಕಾರುಣ್ಯ ಪಾಂಗಳಿಗೆ ಗೌರಿದೇವಿಗೆಅ.ಪ. ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ ಜೀವಕೋಟಿಗನ್ನವಿತ್ತು ಕಾವ ದೇವಿಗೆ 1 ಸರ್ವ ಸೌಭಾಗ್ಯವೀವ ಶರ್ವಜಾಯೆಗೆ ಪರ್ವತೇಶ ತನಯಳಿಗೆ ಗರ್ವರಹಿತೆಗೆ 2 ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ 3
--------------
ಲಕ್ಷ್ಮೀನಾರಯಣರಾಯರು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಎಂದು ಕಾಣಬೇಕೋ ಹೀಂಗಾದ ಮೇ ಲೆಂದು ಕಾಣಬೇಕೋ ಪ ಎಂದು ಕಾಣಬೇಕು ಮಂದಮನವೇ ನೀ ಹೊಂದಿ ಭಜಿಸವಲ್ಲ್ಯಾಮಂದರಧರನಡಿ ಅ.ಪ ದುರಾಸೆ ತೊರಿವಲ್ಲಿ ನಿನ್ನ ದುರ್ಗುಣ ಬಿಡವಲ್ಲಿ ಅರಿವು ನಿಲ್ಲಿಸವಲ್ಲಿ ಮರುಳುಗುಣಳಿವಲ್ಲಿ ನಿರುತ ಭಜಿಸುವಲ್ಲಿ ನರಹರಿ ಚರಣ 1 ಸಂಶಯ ಬಿಡವಲ್ಲಿ ಮನದ ಹಿಂಸಗುಣಳಿವಲ್ಲಿ ಧ್ವಂಸ ಮಾಡುವಲ್ಲಿ ಸಂಸಾರದ ಬಲೆ ಹಿಂಸನೆ ನೆನೆವಲ್ಲಿ ಕಂಸಾರಿಯಪಾದ 2 ಕ್ಲೇಶ ನೀಗುವಲ್ಲಿ ವಿಷಯದಾಸೆ ತೊರೆಯವಲ್ಲಿ ವಾಸನಳಿಯುವಲ್ಲಿ ಮೋಸಬಿಡವಲ್ಲಿ ಪಾದ 3
--------------
ರಾಮದಾಸರು
ಎನ್ನ ಮಾತನು ಕೇಳೋ ತಂದೆ ಎರವಾಗದಿರು ನೀನೆಂದೆನಿನ್ನ ಕುಲವನುದ್ಧರಿಸೆಂದೆ ನೀನು ಸುಪುತ್ರನಾಗೆಂದೆ ಪ ಸುಳ್ಳನು ಬಿಡುಎಂದೆ ಶರಗೊಡ್ಡಿ ಕೊಂಬೆನು ಎಂದೆಕಳ್ಳತನವು ಬೇಡವೆಂದು ಕಾಲಿಗೆ ಬೀಳುವೆ ತಂದೆ 1 ನಾಲಿಗೆ ಸಂಬಾಳಿಸೆಂದೆ ನಾರಿಯ ನೆಚ್ಚದಿರೆಂದೆಜಾಲವನೆ ತಳೆ ಎಂದೆ ಜೋಕೆಯ ಸಾಧಿಸು ಎಂದೆ 2 ವಂಚನೆ ಬೇಡವು ಎಂದೆ ಭಾಷೆಯ ತಪ್ಪದಿರೆಂದೆಕಿಂಚನು ಆಗದಿರೆಂದೆ ಕುಮಂತ್ರ ನೆನಿಸದಿರೆಂದೆ3 ಸಂಸಾರ ನಂಬದಿರೆಂದೆ ಸ್ವಪ್ನದ ತೋರಿಕೆ ಎಂದೆಧ್ವಂಸವು ಎಲ್ಲವು ಎಂದೆ ಯಾವುದು ಸತ್ಯವಲ್ಲೆಂದೆ 4 ಕನಕದ ಮಾತಲ್ಲವೆಂದೆ ಕಾಲಗೆ ತುತ್ತಾಗದಿರೆಂದೆಚಿದಾನಂದನ ಹೊಂದು ಎಂದೆ ಚಿತ್ತಾರ ಮಶಿನುಂಗಿತೆಂದೆ5
--------------
ಚಿದಾನಂದ ಅವಧೂತರು
ಏಳಯ್ಯ ಗುರುವೆ ಬೆಳಗಾಯಿತು ಏಳಯ್ಯ ಗುರುರಾಯ ಏಳಯ್ಯ ಶುಭಕಾಯ ಏಳು ಮಹರಾಯ ಏಳು ಎನ ಜೀಯಾ ಪ ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ ಅ.ಪ ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು ಸದಮಲ ಬುಧರೆಲ್ಲ ಮುದದಿಂದಲೀ ಎದ್ದು ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ ಪಾದ - ಸಂದರುಶನಕೆ ಬಂದಿಹರೋ 1 ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು ಚಿತ್ತ ಶುದ್ಧಿಯಲಿಂದ ಉತ್ತುಮಾರ್ಹಣೆಗಳಾ ತಮ್ಮ ನೆತ್ತಿಯಿಂದಾ ಪೊತ್ತು ಜತ್ತಾಯುತಾಗಿ ನಿಂತಿಹರೋ ಉತ್ತಮಾ ನಿನ ನಿದ್ರೆ ಹೊತ್ತು ಮೀರ್ಯಾಯಿತೊ ಪಾದ ಒತ್ತಿ ಬೋಧಿಸುತಿಹರೋ ಚಿತ್ತಕ್ಕೆ ತಂದು ತ್ವರಿತದಿ ಏಳೋ 2 ವಿಮತಾದ್ರಿ ಕುಲಿಶನೇ ವಿಮಲ ಗಾತ್ರನೇ ಏಳೋ ದಾತ ದಿವಿಜದೃಮನೆ ವಾರಿಧಿ ಎಳೋ ತಾಮರಸಾಂಬಕನೆ ಏಳೋ ಆಮಯ ಧ್ವಂಸಕÀ ನೀನೇಳೋ ಗೋಮತೀ ಕುಮುದ ಸೋಮ ಸಾಂದ್ರನೆ ಏಳೋ - ಶ್ರೀ ಪಾದ ಭೃಂಗನೇ ಏಳೋ ಯಾಮ ಮೀರಿತು ವಿಶ್ವನಿಯಾಮಕ ದೂತನೇ ಸಾಮಗಾಯನ ಲೋಲ ರಮಾ ವಲ್ಲಭಪ್ರೀಯ ಗುರುರಾಜವರ್ಯ 3 ಮೌನಿ ಕುಲರನ್ನ ಮಾನ ನಿಧಿಯೇ ಎನ್ನ ಬಿನ್ನಪವ ಕೇಳಯ್ಯ ಜೀಯಾ ನಿನ್ನ ಭೋಧಿಪಕನ್ಯ ಜನರುಂಟೆ ನಿನ್ನಿಂದ ನೀ ಚನ್ನಾಗಿ ಏಳೋ ಮುನೆÀ್ನ ಮಹ ಕಾರ್ಯಂಗಳೂ ಘನ್ನವಾಗಿರುತಿಹವು ನಿನ್ಹೊರತು ಇನ್ನಾರು ಮಾಳ್ಪರು ಎನ್ನ ನುಡಿ ಈಗ ಚನ್ನಾಗಿ ಮನದಿ ತಂದು ಮನ್ನಿಸೀ ಪೊರೆಯೊ ಧ್ವರಿಯೇ 4 ಸೋತು ಮಲಗಿದೆಯಾ ಪಾತಕಾಂಬುಧಿ ಪೋತನೇ ಮಾತರಿಶ್ವನ ತಾತ ಪಾದ ಭವ ಯುಗ್ಮದಲಿ ಸಂ - ಜಾತವಾಗಿಹ ಸುಧಾ - ಪೀತ ಕಾರಣ ಮದಾ ಸಂ - ಭೂತದಿಂದ ಮಲಗಿದೆಯಾ ಭೂತನಾಥನ ಗುರು ಜಗ - ನ್ನಾಥ ವಿಠಲನ ದೂತ ನಾನೆಂಬ ಗರುವಿಂದ ಮಲಗಿದೆಯಾ 5
--------------
ಗುರುಜಗನ್ನಾಥದಾಸರು
ಕಂಡು ಧನ್ಯಳಾದೆ ನಾನೀಗ | ಈ ದಿವ್ಯ ಪಾದ ಕಂಡು ಧನ್ಯಳಾದೆ ನಾನೀಗ ಪ. ಕಂಡು ಧನ್ಯಳಾದೆನೀಗ ತಂಡ ತಂಡದ ಪಾಪಗಳನು ಪಾದ ಅ.ಪ. ಭಕ್ತ ನುಡಿಗೆ ಮನದಿ ಮರುಗಿ ಮುಕ್ತಿ ತೋರ್ವೆನೆಂದು ಬಂದು ಶಕ್ತನಾದ ಹರಿಯ ತೋರಿ ಪಾದ 1 ಕಮಲನಾಭನ ಭಜಿಪ ಪಾದ ಕಮಲಾಪತಿಗೆ ಪ್ರೀತಿ ಪಾದ ಕಮಲಪುಷ್ಪ ಹರಿಗೆ ಅರ್ಪಿಸಿ ಪಾದ 2 ತಂದೆ ಮುದ್ದುಮೋಹನರೆಂ- ತೆಂದು ಜಗದಿ ಮೆರೆವೊ ಪಾದ ನಂದ ಕಂದನ ಮನದಿ ತೋರಿ ಇಂದು ಆನಂದ ಕೊಡುವೊ3 ಪಾದೋದಕವÀ ಪಾನಮಾಡಿ ಪಾದಪದ್ಮ ನಂಬಿ ನಮಿಸಿ ಪಾದಕಮಲ ಸ್ತೋತ್ರಗೈವೆ 4 ಗೋಪಾಲಕೃಷ್ಣವಿಠ್ಠಲನ ರೂಪ ಮನದಿ ತೋರ್ವ ಪಾದ ಪಾಪಗಳನು ಧ್ವಂಸಗೈದು ಪಾದ 5
--------------
ಅಂಬಾಬಾಯಿ
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ- ದುದ್ದಂಡ ದೇವವರೇಣ್ಯ ತಾಪತ್ರಯಗಳಘ ಹಿಂಡು ಓಡಿಸು ರನ್ನ ಪೊರೆ ಸುಪ್ರಸನ್ನ ಪ. ಕಂಡೆ ನಿನ್ನಯ ಬಾಲರೂಪವ ಪುಂಡರೀಕದಳಾಯತಾಕ್ಷನೆ ಕುಂಡಲೀಶಯ ನಿನ್ನ ಚರಣದಿ ದಂಡವಿಕ್ಕುವೆ ಗೋಪಿಬಾಲ ಅ.ಪ. ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ ಜನಮ ಜನುಮದ ಕರ್ಮಗಳ ನಾ ಅನುಭವಿಸಿ ಪೂರೈಸಲಾಪೆನೆ ಘನಮಹಿಮ ದಯ ಮಾಡಿದಲ್ಲದೆ ಕೊನೆಯ ಕಾಣೆನು ವಿಷಯ ವಾಸನೆ ವನಜ ಸಂಭವ ಪವನ ರುದ್ರಾ ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು ನಿನಗೆ ವಿೂರಿದರುಂಟೆ ದನುಜದಲ್ಲಣ ದಯದಿ ಸಲಹೊ 1 ಕಾಮಪಿತ ಮಧ್ವೇಶ | ಸೌಂದರ್ಯ ಸಾರ ತಾಮಸರ ವಿಧ್ವಂಸ | ಸಜ್ಜನರ ಕಾಯುವ ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ ಹೋಮಕುಂಡದಿ ಪುಟ್ಟಿದಾ ಸತಿ ಕಾಮಿಗಳ ಉಪಟಳಕೆ ಸಹಿಸದೆ ಶ್ರೀ ಮನೋಹರ ಕಾಯೊ ದ್ವಾರಕೆ ಧಾಮ ನೀ ಗತಿ ಎನುತವರಲೆ ಪ್ರೇಮದಿಂದಕ್ಷಯವನಿತ್ತ ನಾಮ ಮಂಗಳ ನಿರ್ಮಲಾತ್ಮಕ ಸೋಮಶತಪ್ರಭ ಸೌಮ್ಯರೂಪ ತ್ರಿ- ಧಾಮ ಭಕ್ತರ ಕಾಮಿತಾರ್ಥನೆ 2 ಆದಿಮಧ್ಯವಿದೂರ | ಆನಂದ ಪೂರ್ಣ ಸಾಧು ಮನದಿ ವಿಹಾರ | ಸರ್ವಜ್ಞರಾಯರ ಹಾದಿ ತೋರಿಸೊ ಧೀರ | ಸುe್ಞÁನಸಾರ ವೇದ ಶಾಸ್ತ್ರಗಳರ್ಥವರಿಯೆನು ಮಾಧವನೆ ಮಮಕಾರದಲಿ ನಾ ಹಾದಿ ತಿಳಿಯದೆ ನೊಂದೆ ಅಜ್ಞತೆ ಹೋದಡಲ್ಲದೆ ನಿನ್ನ ಕಾಣುವ ಮೋದ ಬರುವುದೆ ಮಧ್ವವಲ್ಲಭ ಭೇದ ಮತಿ ಕೊಡು ತಾರತಮ್ಯದಿ ನೀ ದಯದಿ ಒಲಿದೆನ್ನ ಮನದಲಿ ಆದರದಿ ನೆಲೆಸಿನ್ನು ಪೊಳೆಯೊ 3 ಕಡಲಶಯನನೆ ಶ್ರೀಶ | ಕಡಗೋಲ ಕೈ ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ- ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ ಕೊಡುತ ಮಧ್ಯದಿ ತಡೆವ ಸಂಸೃತಿ ತಡೆದು ಸಂತ ಚಿಂತನೆಯ ದೃಢ ಒಡಲೊಳಗೆ ನೆಲೆಸಯ್ಯ ಬಿಡದೆ ಪತಿ ಸತಿ ಪಿತ ಕಡಲವಾಸನೆ ಕಡಲ ಬಂಧನ ಕಡಲ ಮಧ್ಯದಿ ಪುರವ ರಚಿಸಿದೆ ಕಡು ದಯಾಂಬಯಧೆ ಕಾಯೊ ಸತತ 4 ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ ಕೊಟ್ಟೆ ಮನು ಮುನಿಗಳಿಗೆ e್ಞÁನವ ತುಷ್ಟಿಪಡಿಸುತÀ ಸುರರ ಸುಧೆಯಲಿ ಕುಟ್ಟಿ ಅಸುರನ ಕೋರೆದಾಡಿಲಿ ಕುಟ್ಟಿ ಅರಸರ ಕಟ್ಟಿ ಜಟೆಯನು ಮಟ್ಟಿ ಕಂಸನ ಬಿಟ್ಟು ವಸನವ ದಿಟ್ಟ ಕಲ್ಕಿ ಗೋಪಾಲಕೃಷ್ಣ ವಿಠ್ಠಲನೆÀ ಶ್ರೀ ಉಡುಪಿಲೋಲ5
--------------
ಅಂಬಾಬಾಯಿ
ಕರುಣಿಸು ಪ್ರಭುತಂದೆ ತರಳಂಗೆ ದಯವ ಪ ಹರಿ ನೀನೆ ಅವತರಿಸೀಪರಿಭವಶರಧಿಯ ಪರಿಹಾರಗೊಳಿಸುವ ಪರಮಪಾವನರೂಪ 1 ಅರಿವಿಟ್ಟು ಭಜಿಸುವೆ ಮರೆಯದೆ ಮಗನ್ವಚನ ಕರುಣದಿ ಆಲಿಸಿ ವರದಹಸ್ತವ ಶಿರಕೆ 2 ಹಿಂಸೆಬಿಡಿಸು ಮಹ ಸಂಸಾರದುರಿಯನ್ನು ಧ್ವಂಸಗೈಯುವ ಶರಣರಾಂಶದ ಪ್ರಸನ್ನತೆ 3 ದುರಿತ ದೂರೀಕರಿಸಿ ಪರಮಾನಂದದಲಿರುವ ಸಿರಿ 4 ಮರೆಯ ನಿನ್ನಡಿಯಿನ್ನು ಸರುವೇಶ ಮೊರೆಕೇಳಿ ಗುರುವಾಗಿ ಶ್ರೀರಾಮ ಸ್ಥಿರಮೋಕ್ಷ ಸಂಪದವ 5
--------------
ರಾಮದಾಸರು
ಕವಿ ಅಭಯ ಬೇಡೋ ಸುಮನ ಸುಂದರ ಶ್ರೀ ಹರಿಯ ಪ್ರಿಯ | ಅಭಯ ಬೇಡೋ ಸುಮನ ಸುಂದರ ಪ ಅಭಯ ಬೇಡೋ ಪ್ರಿಯ ರಮಾವಿಭು ಜಗನ್ನಿವಾಸನೊಡನೆ ಉಭಯ ಸುಖವ ನೀವ ಚೆಲ್ವ ಅಂಬುಜನೇತ್ರ ಸೊಬಗನೆಂದು ಅ.ಪ ಚಾರು ಮಾರ ಪಿತನ 1 ನೊಂದು ವಾರಣೇಂದ್ರ ತನ್ನ ದಂದುಗದಲಿ ನುತಿಸಲು | ಬಂದು ರಕ್ಷಿಸಿದ ಮುಕುಂದ ಸಿಂಧುಶಾಯಿಯೆಂದು ಹರಿಯ 2 ಪರಾಕು ಎನುತ 3 ಕಿಂಕರೌಘ ಸುಪ್ರಸನ್ನ ಸಂಕಟೌಘಧ್ವಂಸನ ವೆಂಕಟೇಶವರದ ಒಳಲಂಕೆಯಧಿಪ ಗುರು ನೃಹರಿಯ 4
--------------
ಅನ್ಯದಾಸರು
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಧ್ರುವ ಕರುಣಾನಂದಗುಣ ಶರಣ ಸಂರಕ್ಷಣಿ ದುರಿತ ವಿಧ್ವಂಸಿನಿ 1 ಘನಸುಖದಾಯಿಣಿ ದೀನ ಉದ್ಧಾರಣಿ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ 2 ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈಕೊಂಡ - ನೃಹರಿ ಕೈಕೊಂಡ ಪ ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ. ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ 1 ಕಟಿಸೂತ್ರ ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ 2 ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು 3 ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು 4 ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ 4 ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ 6 ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ 7 ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು 8 ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ 9 ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು 10 ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ11
--------------
ಗುರುಗೋವಿಂದವಿಠಲರು
ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1 ಪೋರನಾ ಮಯಕಳೆದು | ತಾರತಮ್ಯ e್ಞÁನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2 ಅನೇಕ ಜನ್ಮದಲಿ | ಹೀನಯೋನಿಲಿ ನೊಂದುe್ಞÁನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3 ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4 ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5
--------------
ಗುರುಗೋವಿಂದವಿಠಲರು
ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ 'ನಾಶ ಮಹೇಶ ಪದಕ್ಷಯಜ್ಞ 'ಧ್ವಂಸಕಾರಿ ಸುರಪಕ್ಷಪಾತಿ ಕಾಮಾರಿ ದುಃಖಹರ 1ಘೋರಪಾಪ ಸಂದೋಹನಾಶನಭೂರಿ ದಯಾಳೋ ಭೋಗಿಭೂಷಣ 2ಈಶಗಿರೀಶ ಧನೇಶ್ವರ 'ುತ್ರಕಾಶೀಶ್ವರ ಸುರಸನ್ನುತಿ ಪಾತ್ರ 3ವಾಸವಾದಿನುತ ದುಷ್ಟಭಯಂಕರವೇಷ ಜಟಾಧರ ಚಂದ್ರಶೇಖರ 4ಕಲಭಪ್ರೌಢ ಮಹಾನಾಟ್ಯೇಶ್ವರಆ'ಮುಕ್ತೇಶ್ವರ ಪ್ರಮಥ ಗಣೇಶ್ವರ 5ಕಾಳಿಂದೀಪ್ರಿಯ ಕಮಲನಯನಸಖಕಾಲಕಾಲ ಕಾಲಾಗ್ನಿ ಪಂಚಮುಖ 6ನೀಲಕಂಠ ನಿಖಿಲಾಮರ ರಕ್ಷಕಫಾಲಚಂದ್ರ ಸಂಸೃತಿ 'ಷಭಕ್ಷಕ 7ಶಾಂತಮೂರ್ತಿವರಕಾಂತಿ ಗುಣಪ್ರಿಯಶಾಂತಿದಾಯಕಾ ಶಾಂತ ಸಂಶಯ 8ಕುಂಭಜಾತ ನುತನಟನ'ಲಾಸಶಂಭು ಹರ ಚಿದಾಕಾಸ ನಿವಾಸ 9
--------------
ಹೊಸಕೆರೆ ಚಿದಂಬರಯ್ಯನವರು