ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಷ ವರ್ಧಂತಿಗಳು (ಆಚಾರ್ಯರ 21ನೇ ವರ್ಷದ ವರ್ಧಂತಿ ಸಮಯ) ನಿನ್ನ ನಂಬಿದೆ ಶರದಿಂದುವದನ ಎನ್ನ ಪಾಲಿಸು ವರಕುಂದರದನ ಮುನ್ನ ಪಾತಕಿಯಾದಜಾಮಿಳನು ತನ್ನ ಚಿಣ್ಣನ ಕರೆದರೆ ಮನ್ನಿಸಿದವನೆಂದು ಪ. ನರ ಧ್ರುವಾಂಬರೀಷ ಪ್ರಹ್ಲಾದ ಮುಖ್ಯರನ- ವರತ ನಿನ್ನನಾಧರಿಸಿದರವರ ಪೊರೆದನೆಂಬೀ ಮದಗರುವ ಭಾರದಲತಿ- ಕಿರಿದಾಗಿಹ ಎನ್ನ ಮರೆವುದುಚಿತವೆ 1 ಹತ್ಯ ಪ್ರಮುಖ ದುಷ್ಕøತ್ಯಗಳಿರಲಿ ನಿತ್ಯ ಪರಧನಾಸಕ್ತನಾಗಿರಲಿ ಭಕ್ತವತ್ಸಲ ನಿನ್ನ ಸ್ಮರಣೆ ಮಾತ್ರದಿ ಪಾಪ ಮುಕ್ತಿದೋರಲು ಪೂರ್ಣಶಕ್ತಿಯಾಗಿಹೆ ಎಂದು 2 ತುರುಗಳೆಣಿಸಿದಂತೆ ಕರುಗಳ ಗುಣವ ಮರೆದಂತೆ ಜನನಿ ತನ್ನಯ ಬಾಲನನುವ ಕರುಣಾಳು ನೀ ಮುನಿಸಿಂದ ಕರುಣಿಸದಿರೆ ಎನ್ನ ಪೊರೆವರಿನ್ಯಾರಿಹರುರಗಾದ್ರಿಯರಸ ಕೇಳ್ 3
--------------
ತುಪಾಕಿ ವೆಂಕಟರಮಣಾಚಾರ್ಯ