ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು