ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ನಾಮದಲಡಗಿದವೊ ಅಡಗಿದವೋ ಆಪ ಅಖಿಳ ವೇದಗಳು ಅ ಪ ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು 1 ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2 ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ 3
--------------
ವಿಜಯದಾಸ
ಅಪಮಾನವಾದರೆ ಒಳಿತು |ಅಪರೂಪ ಹರಿನಾಮ ಜಪಿಸುವ ಮನುಜಗೆ ಪಮಾನದಿಂದಲಿ ಅಭಿಮಾನ ಪುಟ್ಟವುದು |ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||ಮಾನಿ ಕೌರವನಿಗೆ ಹಾನಿಯಾಯಿತು-ಅನು-|ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1ಅಪಮಾನದಿಂದಲಿ ತಪವೃದ್ಧಿಯಾಹುದು |ಅಪಮಾನದಿಂ ಪುಣ್ಯ ಸಫಲವಾಗುವುದು ||ಅಪಮಾನದಿಂದಲಿನೃಪಧ್ರುವರಾಯಗೆ |ಕಪಟನಾಟಕ ಕೃಷ್ಣ ಅಪರೋಕ್ಷನಾದನು2ನಾನೇನ ಮಾಡಲಿ ಆರಲ್ಲಿ ಪೋಗಲಿ |ಕಾನನಚರರಾರಾಧ್ಯ ನೀನಿರಲು ||ದೀನರಕ್ಷಕ ನಮ್ಮ ಪುರಂದರವಿಠಲನೆ |ಏನು ಬೇಡೆನಗಪಮಾನವೆ ಇರಲಿ 3
--------------
ಪುರಂದರದಾಸರು
ನರಸಿಂಹ ಮಂತ್ರ ಒಂದೇ ಸಾಕು -ಮಹಾ - |ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |ಅಸುರನೊಡಲ ಬಗೆದ ದಿವ್ಯವiಂತ್ರ ||ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |ಶಿಷ್ಟ ವಿಭೀಷಣನ ಪೊರೆದ ಮಂತ್ರ ||ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |ಕೊಂಡಾಡೆ ಲೋಕಕುದ್ದಂಡ ಮಂತ್ರ ||ಗಂಡುಗಲಿ ಪ್ರಚಂಡಹಿಂಡು ದಾನವರ |ಗಂಡ ಪುರಂದರವಿಠಲನ ಮಹಾ ಮಂತ್ರ3
--------------
ಪುರಂದರದಾಸರು