ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ಪ ಕಾಮಕ್ರೋಧವ ಬಿಟ್ಟು ಮನಸಿನೊಳಗೆ ರಾಮ ಮೂರುತಿಯಿಟ್ಟು ಪ್ರೇಮ ತಿಳಿದಷ್ಟು ಆದಷ್ಟು ಕಾಮಿತಾರ್ಥವ ಕೊಟ್ಟು ಹೇಮಗರ್ಭಭವ ಸೋಮ ಸೂರ್ಯರಿಗೆಲ್ಲ 1 ನಿಯಮನ ಮಾಡುವ ಮಹಾ ದೈವವ ಬಿಟ್ಟು ಇರಸಲ್ಲ ಜಗದೊಳಜಾಮಿಳ ಬಲ್ಲ ನಂಬಿ ಕೆಟ್ಟವರಿಲ್ಲ ಧ್ರುವಬಲ ಇಂಬುಗೊಂಡರಲ್ಲ ತುಂಬಿದ ಸಭೆಯೊಳಾಂಬುಜಾಕ್ಷಿ ಅಂಬರ ದೃಷ್ಟಿ ಸುರಿಸಿದ2 ಒಂದೇ ಮನದಿ ಭಜಿಸೆ ಭವವೆಂಬೋ ಬಂಧನವ ಬಿಡಿಸುವ ಮುಂದೆ ಮುಕ್ತಿಯ ಹರಿಸಿ ಕೊಡುವನು ಚಂದದಿ ಅನುಕರಿಸಿ ಬಂಧ ಮೋಕ್ಷಪ್ರದ ಮಾನಿಧಿವಿಠಲನ ಇಂದಿಗೂ ಮುಂದಿಗೂ ಬಿಡದೆ ನೀನೆಂದೆಂದಿಗೂ 3
--------------
ಮಹಾನಿಥಿವಿಠಲ
ಅರಿಯರು ಮನುಜರು ಅರಿತೂ ಅರಿಯರುಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳುಅವನಿ ಪಾಲಿಪ ಜನಕನೃಪ ಬಲ್ಲನು ||ಯುವತಿಗೆ ಶಾಪವಿತ್ತ ಗೌತಮ ಬಲ್ಲನುಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು 1ನಾರದ ಮುನಿ ಬಲ್ಲವಾರಿಜೋದ್ಭವ ಬಲ್ಲಪಾರಾಶರನು ಬಲ್ಲ ಮನು ಬಲ್ಲನು ||ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳುಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು 2ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು 3
--------------
ಪುರಂದರದಾಸರು
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5
--------------
ಪುರಂದರದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು