ಇಂದಿರಾ ಕಾಂತನೆ ಪೊರೆ ಶ್ರೀ ಹರೇ ಪ
ನಂದ ನಂದನ ದಿವ್ಯ ಸುಂದರ ಮಂದಾರ ಅ.ಪ.
ವಲ್ಲವೀ ಕುಚತಟ ಪಲ್ಲವ ಕುಂಕುಮ
ಚೆಲ್ವಕಪೋಲನೆ ಸಲ್ಲಲಿತಾಂಗನೆ 1
ಮನ್ನಿಸು ಭಾಸುರ ರೂಪನೆ 2
ಬಾಲಕ ಧ್ರುವನುತ ಲೀಲಾವಾಮನ ರೂಪ
ಬಾಲ ಗೋಪಾಲ ಭೂಲೀಲಾ ವಿಹಾರಿಯೆ 3
ಚಾಪಾ ಪಾಪಾಳಿ ಖಂಡನ ಭೂಪ ನಿರ್ಲೇಪನೆ 4
ಕಂಸವಂಶಾಂತಕ ವಂಶವಿನೋದಿಯೆ
ಅಂಶುಕ ಭಾಸುರ ಧೇನುಪುರಾಧೀಪಾ 5