ಇಂದೆ ಕುಂದುಗಳನು ಹರಿಸು ಪ
ಕಂದನಮುಂದಕೆ ಬರುತಲಿ ಚಂದವಾದ ನಿನ್ನಯ ಮುಖ
ಚಂದ್ರಮನಂ ತೋರಿ ನೇತ್ರೇಂದ್ರಿಯಕಾನಂದ ಬೀರೈ ಅ.ಪ
ಶ್ರೀವರ ನಿನ್ನ ಭಕ್ತರ ಭಾವಿಸುತ್ತ ತಪ್ಪ ಕ್ಷಮಿಸಿ
ನೋವಕೊಡದೆ ರಕ್ಷಿಸುವ ಕೃಪಾಳುವು ನೀನೈ
ದೇವಕಿನಂದನ ನಿನ್ನಯ ಪಾವನತರ ಪದಪದ್ಮಕೆ
ನಾ ವಿನಯದಿ ನಮಿಸಿ ತಳಿವೆ ಹೆಜ್ಜಾಜಿಕೇಶವಾ
ಓ ವಿಭೀಷಣಹಿತಕರ ಸಾವಕಾಶ ಮಾಡದೆ ನೀ
ಕಾವುದೆನ್ನ ಸಮಯವರಿತು ಸಾಮಗಾನಸನ್ನುತ 1
ಚಿಟ್ಟೆಸ್ವರಕ್ಕೆ
ಭವ ಭಯ ಭಂಗ
ವರಭಕ್ತೇಷ್ಟ ದಾತಾರ ದೈತ್ಯಾರಿ ವೈಕುಂಠ
ಪುರಹರನುತ ಶುಭಗುಣಯುತ
ಪರಮಚರಿತ ನಿರುಪಮಪದ ಕು
ವರ ಧ್ರುವನಿಗೊಲಿದ ದ್ವಿಜನ ಪೊರೆದ ಕರುಣಾ
ಧರಣೀ ಭರಹರಣಾ ಪಾವನಚರಣ ಜಾಜಿಕೇಳುವ 2