ಪರಮ ಸಂಜೀವನವು ಗುರು ನಿಮ್ಮನಾಮ
ಸರುಮುನಿಯು ಸೇವಿಸುವ ದಿವ್ಯನಾಮ ಧ್ರುವ
ದುರಿತ ಹರಿಸಿದ ನಾಮ
ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ
ತರಳ ಪ್ರಲ್ಹಾದನವಸರಕೆ ಒಲಿದಿಹ ನಾಮ
ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ 1
ಧರೆಯೊಳಗೆ ದ್ರೌಪದಿಯ ಸ್ಮರಣಿಗೊದಗಿದ ನಾಮ
ಕರುಣದಿಂದಭಿಮಾನಗಾಯ್ದ ನಾಮ
ದಾರಿದ್ರ್ಯವನು ಸುಧಾಮನಿಗಿಂಗಿಸಿದ ನಾಮ
ಸಿರಿ ಸಂಪತ್ತವು ಅಯಿತೀ ನಾಮ 2
ಹರುಷಕರವಿತ್ತು ಉಪಮನ್ಯಗೊಲಿದ ನಾಮ
ಕ್ಷೀರಸಾಗರದ ನಾಮ
ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ
ಧೀರ ಧ್ರುವಗಚಳ ಪದವಿತ್ತ ನಾಮ3
ಕರೆದು ನಾರಗ ನೆಂದವನ ತಾರಿಸಿದ ನಾಮ
ಪರಮಪಾತಕ ಪರಿಹರಿಸಿದ ನಾಮ
ವರ ಮುನಿಜನರ ತೃಪ್ತಿಗೈಸುವ ನಾಮ
ಪರಮ ಭಕ್ತರ ಪ್ರಾಣಪ್ರಿಯ ನಾಮ 4
ದುರಿತ ದಾರಿದ್ರ್ಯ ವಿಧ್ವಂಸಗೈಸುವ ನಾಮ
ಕರುಣಸಾಗರ ಪರಿಪೂರ್ಣ ನಾಮ
ನರಕೀಟಕ ಮಹಿಪತಿಯ ತಾರಕ ನಾಮ
ಪರಮ ಸಾಯೋಜ್ಯ ಗುರು ದಿವ್ಯ ನಾಮ 5