ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನಮ್ಮ ಶ್ರೀ ಹರಿ ಕೀರ್ತನಿ ಸಾಧು ಸಜ್ಜನರ ಮೃತಸಂಜೀವನಿ ಸದ್ಗೈಸುವ ದಿವ್ಯ ಸುಸಾಧನಿ ಸದ್ಗುರು ಸುಮೂರ್ತಿ ಪ್ರಾರ್ಥನಿ ಧ್ರುವ ಶಮದಮವೆಂಬೆರಡು ತಾಳಗೂಡಿ ಪ್ರೇಮ ಭಾವನೆ ಧ್ರುಪÀದಿಗಳ ಮಾಡಿ ಸಮರಸವೆ ಮೃದಂಗವಿದು ನೋಡಿ ಸಮದೃಷ್ಟಿಲಿವೆ ನಾಮ ಕೊಂಡಾಡಿ 1 ಸಾವಧಾನವೆಂಬ ನಿರೋಪಣಿ ನಿವಾಂತ ಕೇಳು ವಿಚಾರಣಿ ಈ ವಾಕ್ಯಬಲ್ಲ ಲಕ್ಷಕೊಬ್ಬ ಙÁ್ಞನಿ ಭಾವ ಬಲ್ಲುದೆ ಮುಖ್ಯ ಸಾಧನಿ 2 ಮನಸ್ವಸ್ತ ಮಾಡಿ ನೀವಿನ್ನು ಕೇಳಿ ಅನುಮಾನ ಬಿಟ್ಟಿ ಇಕ್ಕಿ ಚಪ್ಪಾಳಿ ಗನಗುರು ಪಾದದಲ್ಯೊಮ್ಮೆ ಹೊರಳಿ ಹಣಿಗ್ಹಚ್ಚಿಕೊಂಬಾ ಗುರುಪಾದಧೂಳಿ 3 ಚಿತ್ತ ಚಂಚಲಾಗ ಬಾರದು ನೋಡಿ ವಸ್ತು ಬಾಹುದು ಬ್ಯಾಗೆ ಕೈಗೂಡಿ ಮಿಥ್ಯಾ ಪ್ರಪಂಚ ಈಡ್ಯಾಡಿ ನಿತ್ಯ ನಿರ್ಗುಣಾನಂದ ಸ್ತುತಿಪಾಡಿ 4 ಪುಣ್ಯಕೀರ್ತನೆ ಕೇಳಿ ಸಂಭ್ರಮ ಧನ್ಯ ಧನ್ಯ ಕೇಳಿದವರ ಜನ್ಮ ಕಣ್ಣಾರೆ ಕಾಂಬುವ ನಿಜವರ್ಮ ಚಿಣ್ಣ ಮಹಿಪತಿಗಾನಂದೋ ಬ್ರಹ್ಮ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು