ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಐ) ಸರಸ್ವತೀ ಕಿಂಕರನ ಧ್ವನಿಗೆ ಕೊಡು ಮತಿಯನು ಪ ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ. ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ1 ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ 2 ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ ಸಿರಿ ವಿಠ್ಠಲನ ಪೌತ್ರೆ 3
--------------
ವಿಜಯದಾಸ
ಶ್ರೀ ಲಕ್ಷ್ಮೀ ದೇವಿಯರು ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ ಕಾಯೆ ಕಾಯೆ ಸಂತೋಷವೀಯೆ ಮೂರು ಜಗ ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ ನಿಗಮತತಿಗೇಯೆ ಮಾಯೆ ಅ.ಪ. ಶರಣು-ಶರಣು-ಶರಣು ಗುಣಭರಣಿ ಭವ ತರಣೀ ಶರಣು ತ್ರಿಗುಣ ಧಣಿ ಶರಣು ಸೊಬಗು ಖಣಿ ಶರಣು ನಿಗಮಧ್ವನಿ ಮಣಿ ಸಿರಿ 1 ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ- ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ ವಿಧಿ ಯಿಂಬೆ ತ್ರಿಗುಣ ಹರಿ ಕೃತಿ 2 ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ ಶ್ರೇಣಿ ಪಂಕಜಪಾಣಿ ಭುಜಂಗ ಸು- ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3 ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ ವಿಧಿಗುರುವಮ್ಮ ಭುಜಿಸೊಸೆಯಮ್ಮ ಹರಿಗ್ಹೇಳಮ್ಮ ದಕ್ಷಣೆ 4 ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ ವಾಲೆ ಇಟ್ಟಹೆ ಬಾಲೇ, ಚಂಚಲ ಲೀಲೆ ನತಜನ ಪಾಲೆ ಖಳರೆದೆಶೂಲೆ ಹರಿಗಿಹೆಮಾಲೆ 5 ಹೇತು-ಹೇತು-ಕಾರ್ಯ ಕಾರಣ ನೀ ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ ಧೊರೆವಶಳಾಗಿ ಗಂಡನ ಭಜಿಪೆ 6 ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ ಸರಿಯಾರಿಲ್ಲ ಮುಕ್ತರಿಗೆಲ್ಲ ಒಡೆಯಳೆ ಚೆಲ್ವೆ ನೀ ಆಕಾಶೆ7 ನೀರೆ-ನೀರೆ-ಹರಿ ಸಮಾಸಮನೀರೆ ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ ಧೀರೆ ಹರಿಮನಸಾರೆ-ಪೊಗಳುವೆ ಬೇರೆ ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8 ಕಂದ-ಕಂದ-ನಾನಿಹೆ ನಿನ್ನ ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ ಕುಂದುಗಳಳಿಸೆ ತಂದೆಯ ತೋರೆ ಚೆಂದದ ಭಕುತಿ ಮುಂದಕೆ ತಂದೂ 9
--------------
ಕೃಷ್ಣವಿಠಲದಾಸರು