ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು