ಆರು ನಿನ್ನಂಘ್ರಿ ಭಜಿಸುವರೈಯ್ಯಾ
ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ
ಕಮಲಭವಶಿವ ಇಂದ್ರ ನೀನಾಗೇನು
ರಮೆ ಧರಾದೇವಿ ರಮಣಾದರೇನು
ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ
ಸುಮನಿಸುರ ನಯ್ಯವನ ಕಾಯದಿದ್ದೊಡೆ 1
ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು
ಮಗುಳಿ ಸೂತ್ರಧಾರಿಯಾದರೇನು
ಸುಗುಣ ಪ್ರಲ್ಹಾದಂಬರೀಷ ಕರಿವರ
ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ 2
ಎಂದೆಂದು ಅರ್ತಜನ ಬಂದು ದೀನಾನಾಥ
ತಂದೆ ಮಹಿಪತಿ ಸ್ವಾಮಿಯಂದಡೇನು
ಮಂದಮತಿ ಕುಂದಘನವಂದು ನೋಡದ್ದೆ
ಇಂದು ನಂದನಗೆ ಸೇವೆ ಪದಲಿಡದಿದ್ದರೆ 3