ದೊರೆಯೆನ್ನನು ಕಾಯೈ ಶ್ರೀಚಕ್ರಪಾಣಿ ಪ
ನಿರುತವು ಶರಣೆಂದೆನ್ನುತ ಕೋರುವೆ
ಪರಿಯೊಳುಸೇರೇ ಬಂದಿಹೆ ಕರಪಿಡಿ ಅ.ಪ
ಆಯುರಾರೋಗ್ಯ ಸುಖಸಂಪದಕೊಡುವ ಸೌಭಾÀಗ್ಯ ಕರ್ತೃವು
ಶ್ರೇಯದ ವಿದ್ಯೆಯ ಕರುಣಿಸ ಪ್ರಭೆಯೊಳು ಸನ್ಮಾನವೀವಾ
ಧ್ಯೇಯನೇಭತ್ತಿಜ್ಞಾನವೈರಾಗ್ಯವನಿತ್ತುವಿಮುಕ್ತಿಕೊಡುವ ಅ
ನ್ಯಾಯದೆ ನಡೆವರ ವ್ಯರ್ಥರಗೈವನು ನೀನೈ ಶ್ರೀಶ್ಯಾಮಸುಂದರ 1
ಮನ್ನರೋಗಕ್ಕೆ ನಿನ್ನ ಪಾದತೀರ್ಥ ಔಷಧವು ಬೇಡ
ಉನ್ನತ ಭಯಕ್ಕೆ ಸುದರ್ಶನ ಸ್ಮರಣೆ ಮಂತ್ರವೇತಕ್ಕೆ
ಇನ್ನಿತರ ಕಷ್ಟಗಳಿಗೆಲ್ಲ ನಿನ್ನ ನಾಮಮಂತ್ರ ಭಜನ
ಚೆನ್ನಪಾದಕೃಪೆ ಇನ್ನೊದಗಿಹುದೈ ನಾಂ ನಿತ್ಯಸಂತೊಷಿ 2
ನಿರಾಯಾಸದಿಂ ದಾಸಗಂತ್ಯದಲಿ ಪ್ರಶಾಂತನಾಗಿ
ಹರಿನಾರಾಯಣ ನಾರಾಯಣಯೆಂದು ಕರೆವಂತೆ ಮಾಡಿ
ಹರುಷದಿ ನೋಹರಾಕಾರವ ತೋರಿ ವೈಕುಂಠಕೆನ್ನನು
ಕರುಣದಿ ಕರೆದೊಯ್ ಅಜಪೂಜಿತ ಹೆಜ್ಜಾಜಿಕೇಶವ 3