ಪ್ರಣವ ಪ್ರತಿಪಾದ್ಯನು ಶ್ರೀನಾರಾ-
ಯಣನೊಬ್ಬನೆ ಧ್ಯೇಯನುಜಗಕೆ ಪ
ಎನುತ ಪೊಗಳುವದು ಶೃತಿ ತತಿಯೂ ಅ.ಪ
ನಿಸ್ಸಂಶಯವಾಗಿರುವುದು ಸದ್ಭೋಧೆ
ಪೇಳುವದು ದುರ್ಬೋಧೆ
ಜೀವರಿಗೊಂದೇ ವೇಧೆ
ತುದಿಗೆ ಎರಡು ಗುಂಪಿನವರನು ವಿಚಾರಿಸಿ
ಮಾಳ್ಪೆನು ಕಾಲನು ಬಾಧೆ 1
ತಾಯಿ ಒಬ್ಬಳಿಗೆ ಮಕ್ಕಳು ಮೂವರು ತತ್ವವಿದೇ ನಿಶ್ವಯ ದಾರಿ
ಪುರಂಜನ ಇವರಾಯತವಿವರಿವರಿಗೆ ಬಾರಿ
ರಾದ್ಧಾಂತ ಪರಸ್ಪರ ಸೇರಿ 2
ನೇಮವಾಗಿ ವೇದದೊಳಿಲ್ಲ
ಖಂಡಿತವಾಗಿ ಉತ್ತಮವಲ್ಲ
ಪಾಮರರಾಗಿಹ ಮಧ್ಯಮಜನ ಸಂಪಾದಿಸಿದರೆ ದಕ್ಕುವದಿಲ್ಲ
ಮೂವ್ವರ ಮರ್ಮವು ಬಲ್ಲಾ 3