(ಐ) ಸರಸ್ವತೀ
ಕಿಂಕರನ ಧ್ವನಿಗೆ ಕೊಡು ಮತಿಯನು ಪ
ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ.
ಪುತ್ಥಳಿ ಬೊಂಬೆ
ವಿಕಸಿತ ಸುಲಲಿತಾಂಬೆ ಸುನಿತಂಬೆ
ನಿಕುರುಂಬೆ ಸುರರಂಭೆ ದಂತ ದಾಳಿಂಬೆ
ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ1
ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ
ಅಖಿಳ ಧ್ಯೇಯೆ
ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ
ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ 2
ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ
ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ
ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ
ಸಿರಿ ವಿಠ್ಠಲನ ಪೌತ್ರೆ 3