ಕೀಳುಯೋಚನೆ ಬಿಡು ಖೋಡಿಮನವೇ
ಪಡಿ ಮಾಧವನಿಂ ಬೇಡಿಪ
ಹಾಳುಯೋಚನೆ ಮಾಡಿ ಮಾಡಿ ನೀನು
ಬೀಳುಗಳೆಯ ಬೇಡ ತಿಳಿ ಹುಚ್ಚ ಖೋಡಿ
ತಾಳದೆ ಜಡಿತಾರ ಒದೆದು ಎಳೆದಾಡಿ 1
ನಾಶನ ಈ ಜಗಸುಖ ಒಂದೇ
ತಾಸಿನ ಮೋಜಿದು ಇರದು ಕಡೆತನಕ
ಮೋಸದಿ ಸಿಲ್ಕಬೇಡಿದಕೆ ಇದ
ರ್ವಾಸನಳಿದು ಬೇಗ ಕಡಕೋ ಭವತೊಡಕ 2
ದಾಸರು ಪೇಳಿದ ಸೊಲ್ಲುಕೇಳಿ
ಧ್ಯಾಸಿಟ್ಟು ದೋಷದಿಂ ಕಡೆಗ್ಹಾರಿ ನಿಲ್ಲು
ದಾಸನಾಗಿ ಭವಗೆಲ್ಲು ತಂದೆ
ಶ್ರೀರಾಮನ ಪಾದಕೆ ಸಲ್ಲು 3