ಏನೆಂದು ಪೇಳಲಿ ಹರಿಶರಣರ ನಿಜ
ಆನಂದ ಸೌಭಾಗ್ಯದಲಂಕಾರ ಪ
ಆನಂದ ಪರಮ ಆನಂದ ಹರಿಧ್ಯಾ
ನಾನಂದ ಸಂಪದ ಶೃಂಗಾರ ಅ.ಪ
ಮಾಧವನ ನಾಮಮಕುಟಿಟ್ಟಹ್ಯರು ಮಧು
ಸೂದನನ ಭಕ್ತಿ ಕವಚ ತೊಟ್ಟಿಹ್ಯರು
ಯಾದವನ ಜಪಮಾಲ್ಯ್ಹಾಕಿಹ್ಯರು ಯ
ಶೋದ ಬಾಲನ ದಯ ಪಡೆದಿಹ್ಯರು 1
ಶ್ರೀಶನ ಧ್ಯಾಸಶಸ್ತ್ರ ಧರಿಸಿಹ್ಯರು ದೋಷ
ರಾಶಿಪರ್ವತ ತರಿದೊಟ್ಟಿಹ್ಯರು
ಪಾಶ ಜೈಸಿ ನಿರ್ಭೀತಾಗಿಹ್ಯರು 2
ಸರಕು ತುಂಬಿಹ್ಯರು ನರ
ಹರಿ ಪ್ರೇಮ ನೌಕೆ ಏರಿಹ್ಯರು
ವರದ ಶ್ರೀರಾಮಮಂತ್ರ ಪಠಿಸುವರು ಭವ
ಶರಧಿ ಸುಲಭದಿಂದ ದಾಂಟುವರು 3