ಎಂಥಾ ನಿರ್ದಯನಾದ್ಯೋ ಎಲೆ ದೇವನೆ
ಕಂತುಪಿತ ನಿನ್ನ ಅಂತ:ಕರುಣ ಎನ್ನ ಮೇಲೆ ಇಲ್ಲದೆ ಪ
ಅಂತರಂಗದಿ ಮನದಿ ಅನುದಿನವು ಬಿಡದೆ ನಿಮ್ಮಾ
ಚಿಂತನೆಯ ಮಾಡಿದರೆ ಚಿತ್ತಕರಗದೇಕೆ
ಅಂಥ ಮಹಾದೋಷ ದತಿಶಯನಗೇನುಂಟ-
ನಂತಗುಣ ಪರಿಪೂರ್ಣ ಆದಿನಾರಾಯಣ 1
ವಾಸುದೇವನೆ ನಿಮ್ಮ ವರ್ಣಿಸುವೆನು ವಸುಧಿಯೊಳು
ಭೂಸುರರ ಪೋಷಿಸುವ ಪುಣ್ಯಪುರುಷಾ
ಘಾಸಿಗೊಳಗಾಗಿ ನಿಮ್ಮ ಧ್ಯಾಸವೇಗತಿಯೆಂದು
ಏಸೋ ಪರಿಯಲಿ ಭಜಿಸಿ ಈಶ ನಿನ್ನ ಕೃಪೆಯಾಗದೂ 2
ಸಕಲಲೋಕಾಧೀಶ ಸಕಲಭಾರಕರ್ತನಾಗಿ
ಪ್ರಕಟ ಭಕುತರೊಳಗೆ ಪಾಲಿಸದೆ ಎನ್ನಾ
ಮುಕುತಿದಾಯಕ ಹೆನ್ನ ವಿಠ್ಠಲ ನೀನೆ ಗೋವಿಂದ
ಅಕಲಂಕ ಮಹಿಮ ನಿನ್ಹರುಷವನು ತೋರದಿನ್ನಾ 3