ಇದುವೇ ಸಾಧಕ ವೃತ್ತಿಗಳು |
ಇದೇ ಅಬಾಧಕ ಯುಕ್ತಿಗಳು ಪ
ಸದ್ಗುರು ಪಾದಕ ಸದ್ಭಾವದಿ ನಂಬಿ |
ಹೃದ್ಗತ ಗುಜವನು ಪಡೆದಿಹನು |
ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ |
ಉದ್ಗಾರ ಪ್ರೇಮದ ಮಾಡುವನು 1
ಬಲ್ಲವನು ಕಂಡೆರಗಿ ಸಿದ್ಧಾಂತದಾ |
ಉಳ್ಳಸದ್ಭೋಧವ ಕೇಳುವನು |
ಮೆಲ್ಲನೆ ಮನನದಿ ಧ್ಯಾಸವು ಬಲಿಯುತ |
ಕ್ಷುಲ್ಲರ ಮಾತಿಗೆ ಮನ-ವಿದನು 2
ಅನ್ಯರ ಸದ್ಗುಣ ವಾರಿಸಿ ಕೊಳುತಲಿ |
ತನ್ನವಗುಣಗಳ ಜರಿಸಿದವನು |
ಸನ್ನುಡಿ ಬಿರುನುಡಿಗಳಕದೆ ಕುಜನರ |
ಮನ್ನಿಸಿ ಶಾಂತಿಯನು ಜಡಿದಿಹನು 3
ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ |
ತಿದ್ದುದರಂದದಿ ತಿದ್ದುವನು |
ಇದ್ದಷ್ಟರೊಳಗೆ ಸಾರ್ಥಕದಲಿ ದಿನ |
ಗದ್ದಿರ ಹೊರಿಯಲು ಉದರವನು 4
ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ |
ಗರ್ವವ ತ್ಯಜಿಸಿಹ ಜನರೊಳಗೆ |
ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು |
ಅರ್ವವ ಜಗಸನ್ಮತನು 5