ಬಾಧಕರೊಳು ಬದ್ಧನು |
ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ
ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು |
ಹರಿಪರದೈವೆಂದು ಹೇಳುವನು |
ದುರಿತವು ಬಂದಡೆ ನೀಚದೈವಂಗಳಿ |
ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1
ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ |
ನೃಪರ ವಾಲ್ಗೈಸುವನು |
ಈ ನಿಖಿಳದ ವೃತ ಜಪ ತಪವನು ಮಾಡೀ |
ನಾನೆಂಬ ಹಮ್ಮಿಲಿ ಪರರನು ಹಳಿವಾ 2
ವಾಸುದೇವ ಸರ್ವಯಂಬುವ ದೇವರ |
ದಾಸರ-ಸೂಯದಿ ಬಾಳುವನು |
ಲೇಸಾಗಿ ಗುರುವರ ಮಹಿಪತಿಸ್ವಾಮಿಯ |
ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3