ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಯಗೊಂಡು
ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ 1
ಏರಿ ನೋಡಿ ಅರುಚಕ್ರದಾಟಿ ತೋರುತಿಹ್ಯ
ಪೂರ್ಣಾನಂದ ಶ್ರೀ ಗುರುಮೂರ್ತಿಯ ಬಲಗೊಳ್ಳಿ 2
ಸೆರಗವಿಡಿದು ನೋಡಿ ಕರಗಿಮನ ಅರವಿನೊಳು
ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ 3
ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು
ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ 4
ಮೂರು ಗುಣಕೆ ಮೀರಿ ತೋರಿತಿಹ್ಯ ನಿರ್ಗುಣನ
ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ 5
ಸಹಸ್ರದಳಮಂಟಪದೊಳು ಸೋಹ್ಯವರಿತು
ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ 6
ತಾನೆ ತಾನಾಗಿಹ್ಯ ತನುವಿನೊಳು ಆನಂದೋಬ್ರಹ್ಮ-
ಙÁ್ಞನದಿಂದ ನೋಡಿ ಙÁ್ಞನಸಾಗರನ ಬಲಗೊಳ್ಳಿ 7
ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ
ಅನುಕೂಲಾಗುವ ಅನಂತ ಗುಣನ ಬಲಗೊಳ್ಳಿ 8
ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು
ತನುಮನರ್ಪಿಸಿ ಗುರುಮೂರ್ತಿಯ ಬ¯ಗೊಳ್ಳಿ 9
ಗುರು ಕರುಣದೊಲವಿಂದ ಪಡೆದು ಪೂರ್ಣ
ಹರಿಯು ಸುಖ ಸೂರ್ಯಾಡಿ ಪರಮ ಅನಂದ ಸುಪಥ 10
ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ
ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ 11